ಉಡುಪಿ: ರಸ್ತೆಗಳು ಅಭಿವೃದ್ಧಿಯ ಧ್ಯೋತಕ- ವಿನಯಕುಮಾರ್ ಸೊರಕೆ

ಉಡುಪಿ: ರಸ್ತೆಗಳು ಊರ ನರನಾಡಿಗಳು, ರಸ್ತೆ ಸಂಪರ್ಕದಿಂದ ಅಭಿವೃದ್ಧಿ ಸಾಧ್ಯ, ತಮ್ಮ ಅಧಿಕಾರ ಅವಧಿಯಲ್ಲಿ ಪೆರ್ಡೂರಿನ ದುರಸ್ತಿಯಲ್ಲಿದ್ದ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಜನರ ಬೇಡಿಕೆಯ ಮೇರೆಗೆ ರಸ್ತೆಗಳನ್ನು ಮಂಜೂರು ಮಾಡಲಾಗಿದೆ ಎಂದು ರಾಜ್ಯ ನಗರಾಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯಕುಮಾರ್ ಸೊರಕೆ ಹೇಳಿದ್ದಾರೆ.
ಕಾಪು ವಿಧಾನಸಭಾ ಕ್ಷೇತ್ರದ ಪೆರ್ಡೂರು ಗ್ರಾಮ ಪಂಚಾಯತ್ ಪಾಡಿಗಾರ ಖಜಾನೆ ರಸ್ತೆ ಶಿಲನ್ಯಾಸ ನೆರವೇರಿಸಿ ಮಾತನಾಡುತ್ತಿದ್ದರು.

19-03-2016-vinay-kumar-sorake-road -01 19-03-2016-vinay-kumar-sorake-road

4 ಕೋಟಿ ರೂ ವೆಚ್ಚದ 2350ಮೀ ಹಾಗೂ 5.5ಮೀ ಅಗಲದ ಕಾಂಕ್ರೀಟ್ ರಸ್ತೆ ಪೆರ್ಡೂರು-ಪಾಡಿಗಾರ್-ಕೈಕಂಬ-ಖಜಾನೆ ಇಲ್ಲಿನ ನಕ್ಷೆಯನ್ನೇ ಬದಲಿಸಲಿದ್ದು, ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸಿರುವ ಖುಷಿ ನನಗಾಗಿದೆ ಎಂದು ಸಚಿವರು ಹೇಳಿದರು.
ನಮ್ಮ ಗ್ರಾಮ, ನಮ್ಮ ರಸ್ತೆಯಡಿ 40 ಕಿ.ಮೀ ಉದ್ದದ ರಸ್ತೆಯನ್ನು ಈ ಪ್ರದೇಶದವರಿಗೆ ಲಭ್ಯವಾಗಲಿದೆ. ಎಪಿಎಂಸಿ ಅನುದಾನದಿಂದ ಪೆರ್ಡೂರು ಬಜ್ಜಾಲಕಟ್ಟೆ ರಸ್ತೆಗೆ 23 ಲಕ್ಷರೂ.ಗಳ ರಸ್ತೆಗೆ ಟೆಂಡರ್ ಮಾಡಲಾಗಿದೆ. ಪೆರ್ಡೂರಿನ ಪರಿಶಿಷ್ಟ ಜಾತಿ ಕಾಲನಿಯ ರಸ್ತೆಗೆ 15 ಲಕ್ಷರೂ., ಮಟ್ಟಿಬೈಲು- ಕುಕ್ಕಿಕಟ್ಟೆ ರಸ್ತೆಗೆ 8 ಲಕ್ಷ, ಮುಕ್ಕಿಗುಡ್ಡೆ ಪರಿಶಿಷ್ಟ ಪಂಗಡದವರ ಕಾಲನಿಗೆ 10 ಲಕ್ಷ ರೂ. ಗಳ ಅನುದಾನ ರಸ್ತೆಗೆ ನೀಡಲಾಗಿದೆ. ಪೆರ್ಡೂರು ಗ್ರಾಮದ ನಾಲ್ಕನೇ ವಾರ್ಡ್‍ಗೆ 12 ಕೋಟಿ ರೂ.ಗಳ ಅನುದಾನ ನೀಡಲಾಗಿದೆ.
ಜನರ ನಿರೀಕ್ಷೆಗೆ ಅನುಗುಣವಾಗಿ ಕೆಲಸ ಮಾಡಲಾಗುತ್ತಿದ್ದು, ರಸ್ತೆ ಕಾಂಕ್ರೀಟಿಕರಣ, ಅಗಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಸಚಿವರು ಹೇಳಿದರು. ಉತ್ತಮ ವ್ಯವಸ್ಥೆಗಳನ್ನು ಸರ್ಕಾರ ನೀಡುವಾಗ ಪ್ರತಿಭಟಿಸದೆ ಸ್ವಾಗತಿಸಿ; ರಸ್ತೆಗಳು, ರೈಲುಗಳು ಜನಸಂಪರ್ಕದ ಕೊಂಡಿಗಳು. ಇಂತಹ ಕಾಮಗಾರಿಗಳು ನಡೆಯುವಾಗ ಪ್ರತಿಭಟಿಸದೆ ಪೂರಕ ಸಹಕಾರ ನೀಡಬೇಕೆಂದರು.
ಮಾಜಿ ಪಂಚಾಯತ್ ಸದಸ್ಯ ಶ್ರೀಪಾದ ರೈ ಸ್ವಾಗತಿಸಿದರು. ವಸಂತಕುಮಾರ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಭಾಧ್ಯಕ್ಷತೆಯನ್ನು ಸುದಾಕರ ಶೆಟಿ ಎಂ ವಹಿಸಿದ್ದರು. ಶಾಂತರಾಮ ಸೂಡಾ, ಉಮೇಶ್ ನಾಯಕ್, ಬಿ ಬಿ ಪೂಜಾರ್, ವಸಂತಕುಮಾರ್ ಶೆಟ್ಟಿ, ಗೀತಾ ಪೂಜಾರ್ತಿ, ಶಾಂತಾ ಎಸ್ ಶೆಟ್ಟಿ, ಯೋಗೀಶ್ ಕುಮಾರ್, ಲೋಕೋಪಯೋಗಿ ಇಲಾಖೆಯ ಉದಯ ಶೆಟ್ಟಿ ವೇದಿಕೆಯಲ್ಲಿದ್ದರು. ಸಂತೋಷ್ ಹೆಗಡೆ ವಂದಿಸಿದರು.

Leave a Reply

Please enter your comment!
Please enter your name here