ಉಡುಪಿ: ರಸ್ತೆಯ ಅವ್ಯವಸ್ಥೆಗೆ ಅಫಘಾತದಲ್ಲಿ ಯುವತಿಯ ಬಲಿ

ಉಡುಪಿ: ರಸ್ತೆಯ ಅವ್ಯವಸ್ಥೆಗೆ ಯುವತಿಯೋರ್ವರು ಅಫಘಾತದಲ್ಲಿ ಮೃತಪಟ್ಟ ಘಟನೆ ಸಂತೆಕಟ್ಟೆ ಕಲ್ಯಾಣಪುರದಲ್ಲಿ ಶನಿವಾರ ನಡೆದಿದೆ.

ಮೃತರನ್ನು ಹಾವಂಜೆ ನಿವಾಸಿ ಪವಿತ್ರಾ ಆಚಾರ್ (23) ಎಂದು ಗುರುತಿಸಲಾಗಿದೆ.

ಪೋಲಿಸ್ ಮೂಲಗಳ ಪ್ರಕಾರ ಪವಿತ್ರ ಹಾಗೂ ಆಕೆಯ ಸಹೋದರ ಪ್ರದೀಪ್ ಜೊತೆ ಉಡುಪಿ ಕಡೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಸಂತೆಕಟ್ಟೆ ಮಾರ್ಕೆಟ್ ಬಳಿ ಕ್ರೇನ್ ಡಿಕ್ಕಿ ಹೊಡೆದಿದ್ದು,  ಗಂಭೀರ ಗಾಯಗೊಂಡ ಪವಿತ್ರಾ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ದಾರಿಯಲ್ಲಿ ಮೃತಪಟ್ಟಿದ್ದಾರೆ. ಆಕೆಯ ಸಹೋದರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಅಂಬಾಗಿಲಿನಿಂದ ಸಂತೆಕಟ್ಟೆಯ ವರೆಗೆ ಏಕಮುಕ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದು ಇದರಿಂದ ವಾಹನ ಸವಾರರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಇದರಿಂದ ಇನ್ನಷ್ಟು ಜೀವಗಳು ಬಲಿಯಾಗುವ ಸಾಧ್ಯತೆಗಳಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ಟ್ರಾಫಿಕ್ ಠಾಣೆಯ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.

Leave a Reply

Please enter your comment!
Please enter your name here