ಉಡುಪಿ: ವೀರಪ್ಪ ಮೊಯ್ಲಿಯಿಂದ ಬಿಷಪ್ ಭೇಟಿ

ಉಡುಪಿ: ರಾಜ್ಯದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಪ್ರಸ್ತುತ ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಭಾನುವಾರ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಅವರನ್ನು ಧರ್ಮಾಧ್ಯಕ್ಷರ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಚನ ಪಡೆದರು.

moyli_bishop_udupi 14-09-2015 11-57-28 moyli_bishop_udupi 14-09-2015 11-57-029

ಉಡುಪಿ ನೂತನ ಧರ್ಮಪ್ರಾಂತ್ಯವಾಗಿ ರೂಪುಗೊಂಡ ಬಳಿಕ ಮೊದಲ ಬಾರಿ ಮೊಯ್ಲಿ ಅವರು ಧರ್ಮಾಧ್ಯಕ್ಷರ ನಿವಾಸಕ್ಕೆ ಭೇಟಿ ನೀಡುತ್ತಿದ್ದು, ಧರ್ಮಕ್ಷೇತ್ರದ ಅಭಿವೃದ್ದಿಯ ಕುರಿತಾಗಿ ವಿವರಗಳನ್ನು ಧರ್ಮಾಧ್ಯಕ್ಷರಿಂದ ಪಡೆದರು ಅಲ್ಲದೆ ತಮ್ಮ ಸಹಕಾರದ ಭರವಸೆಯನ್ನಿತ್ತರು.
ಧರ್ಮಾಧ್ಯಕ್ಷರ ಭೇಟಿಯ ವೇಳಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಮಾರ್ ಸೊರಕೆ, ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್, ಕಾರ್ಕಳ ಮಾಜಿ ಶಾಸಕ ಗೋಪಾಲ ಭಂಡಾರಿ, ಕಾಂಗ್ರೆಸ್ ನಾಯಕರಾದ ಕಾಪು ದಿವಾಕರ ಶೆಟ್ಟಿ, ನವೀನ್ ಜೆ ಶೆಟ್ಟಿ ಜೊತೆಗಿದ್ದರು.

Leave a Reply

Please enter your comment!
Please enter your name here