ಉಡುಪಿ: ಶಿಕ್ಷಣ ಕ್ಷೇತ್ರದ ದುಡ್ಡನ್ನು ಶಿಕ್ಷಣಕ್ಕೇ ಉಪಯೋಗಿಸಿ; ಪಿಪಿಸಿ ಪಿಜಿ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಅದಮಾರು ಶ್ರೀ

Spread the love

ಉಡುಪಿ: ಯುಜಿಸಿಯಿಂದ ಕಾಲೇಜುಗಳಿಗೆ ನೀಡುವಾಗ ಯಾವ ಕೆಲಸಕ್ಕೆ ಕೇಳಿರುತ್ತೇವೋ ಅದೇ ಕೆಲಸಗಳಿಗೆ ಉಪಯೋಗಿಸಬೇಕು ಎಂದು ನಿರ್ದೇಶನ ನೀಡುತ್ತಾರೆ. ಇಲ್ಲವಾದಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಾರೆ. ಅದೇ ರೀತಿ ಸರ್ಕಾರವೂ ಶಿಕ್ಷಣ ಕ್ಷೇತ್ರದಿಂದ ಬರುವ ದುಡ್ಡನ್ನು ಶಿಕ್ಷಣ ಕ್ಷೇತ್ರಕ್ಕೇ ಉಪಯೋಗಿಸಬೇಕು. ಸಾರಿಗೆಯಿಂದ ಸಂಗ್ರಹವಾದ ದುಡ್ಡನ್ನು ಸಾರಿಗೆ ಕ್ಷೇತ್ರಕ್ಕೇ ಬಳಸಬೇಕು ಎಂದು ಅದವಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಆಗ್ರಹಿಸಿದರು.PPC_PGCenterinug 03-08-2015 11-03-51 PPC_PGCenterinug 03-08-2015 11-37-25 PPC_PGCenterinug 03-08-2015 11-46-30 PPC_PGCenterinug 03-08-2015 11-46-55 PPC_PGCenterinug 03-08-2015 11-57-29 PPC_PGCenterinug 03-08-2015 12-12-11 PPC_PGCenterinug 03-08-2015 12-12-22 PPC_PGCenterinug 03-08-2015 12-20-55 PPC_PGCenterinug 03-08-2015 12-21-03 PPC_PGCenterinug 03-08-2015 12-21-22 PPC_PGCenterinug 03-08-2015 12-21-33

ಉಡುಪಿಯ ಪೂರ್ಣಪ್ರಜ್ಞಾ ಕಾಲೇಜು ಕ್ಯಾಂಪಸ್‍ನಲ್ಲಿ ನೂತನವಾಗಿ ಆರಂಭಗೊಂಡ ಪೂರ್ಣಪ್ರಜ್ಞಾ  ಸ್ನಾತಕೋತ್ತರ ಕೇಂದ್ರದ ಸೋಮವಾರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪೂರ್ಣಪ್ರಜ್ಞಾ ಶಿಕ್ಷಣ ಸಂಸ್ಥೆಗಳು ಇದೀಗ ಕೆಜಿ ಯಿಂದ ಆರಂಭಗೊಂಡು ಪಿಜಿಯ ವರೆಗೆ ಬೆಳೆದಿದೆ. ಮಕ್ಕಳಿಗೆ ಸಂಸ್ಕಾರಯುವ ಶಿಕ್ಷಣ ನೀಡುತ್ತಿರುವುದು ಸಂಸ್ಥೆಯ ಹೆಗಳಿಕೆಯಾಗಿದೆ. ಶಿಕ್ಷಕರ ಸ್ಥಾನದಲ್ಲಿರುವವರಿಗೆ ಸಿಗುವ ಗೌರವ ಇತರರಿಗೆ ಸಿಗುವುದಿಲ್ಲ.ಗುರು ನೀಡುವ ಶಿಕ್ಷಣವನ್ನು ವಿದ್ಯಾರ್ಥಿಯಾದವರ ತನ್ನ ಕೊನೆಯ ವರೆಗೂ ನೆನಪಿಸುತ್ತಿರುತ್ತಾನೆ ಎಂದರು.

ಸ್ನಾತಕೋತ್ತರ ಕೇಂದ್ರವನ್ನು ಉದ್ಘಾಟಿಸಿದ ಶ್ರೀ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಮಾತನಾಡಿ, ಶುದ್ಧ ವಿದ್ಯೆ-ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬುದು ವಿಬುಧೇಶ ತೀರ್ಥ ಶ್ರೀಮಾಪಾದರ ಕನಸಾಗಿತ್ತು. ಅವರ ಕನಸು ಸಾಕಾರಗೊಳ್ಳಲು ಆರಂಭವಾದ ಪೂರ್ಣ ಪ್ರಜ್ಞಾ ವಿದ್ಯಾ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ರಾಜ್ಯದಾದ್ಯಂತ ವಿದ್ಯಾರ್ಥಿಗಳು ಈ ಶಿಕ್ಷಣ ಸಂಸ್ಥೆಯನ್ನೇ ಬಯಸುತ್ತಾರೆ. ಕೆಲವು ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ನಿರ್ಮಿಸಿ ಶಿಕ್ಷಣ ನೀಡಲಾಗುತ್ತಿದೆ.ಅಂತಹ ಶಿಕ್ಷಣ ಸಂಸ್ಧೆಗಳವರು ಪೂರ್ಣಪ್ರಜ್ಞಾ ಸಂಸ್ಥೆಗೆ ನೋಡಿ ಕಲಿಯುವುದು ಬಹಳಷ್ಟಿದೆ ಎಂದರು.

ಮುಖ್ಯಅತಿಥಿಯಾಗಿದ್ದ ಮಂಗಳೂರು ವಿವಿ ಉಪಕುಲಪತಿ ಪೆÇ್ರ. ಕೆ.ಬೈರಪ್ಪ, ಖಾಸಗಿ ಶಿಕ್ಷಣ ಸಂಸ್ಥೆಗಳು ಕೇವಲ ವಿದ್ಯಾಭ್ಯಾಸಕ್ಕೆ ಮಾತ್ರ ಆದ್ಯತೆ ನೀಡುತ್ತದೆ ಆದರೆ ಪೂರ್ಣ ಪ್ರಜ್ಞಾ ಸಂಸ್ಥೆ ಶಿಕ್ಷಣದ ಜೊತೆಗೆ ಸಂಶೋಧನೆಗೂ ಅವಕಾಶ ನೀಡುತ್ತಿರುವುದು ವಿಶೇಷವಾಗಿದೆ.ಮುಂದಿನ ಶೈಕ್ಷಣಿಕ ವರ್ಷದಿಂದ ಎಂಕಾಂ ಎಂಎಸ್ಸಿ ಜೊತೆಗೆ ಇತರ ಕೋರ್ಸ್‍ಗಳನ್ನೂ ಆರಂಭಿಸಲು ಚಿಂತಿಸಿದರೆ ವಿವಿ ಮಟ್ಟದಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸದರು.  ಸಂಶೋಧಾ ವಿಚಾರದಲ್ಲಿ ಮಣಿಪಾಲ ವಿವಿಯ ಸಹಕಾರ ಪಡೆದುಕೊಳ್ಳಬಹುದು. ಮಂಗಳೂರು ವಿವಿಯಿಂದಲೂ ಬೇಕಾದ ಅನುಕೂಲ ಪಡೆದುಕೊಳ್ಳಬಹುದು ಎಂದರು.

ಶಾಸಕ ಪ್ರಮೋದ್‍ಮಧ್ವರಾಜ್, ಕರ್ನಾಟಕ ಸರ್ಕಾರದ ಮಾಜಿ ಮುಖ್ಯಕಾರ್ಯದರ್ಶಿಬಿ.ಆರ್. ಪ್ರಭಾಕರ,  ಸಂಧ್ಯಾ ಕಾಲೇಜಿನ  ಕಾರ್ಯದರ್ಶಿ ಪ್ರದೀಪ್ ಕುಮಾರ್, ಪೂರ್ಣ ಪ್ರಜ್ಞಾ ಡಿಗ್ರಿ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಶೆಟ್ಟಿ, ಸಂದ್ಯಾ ಕಾಲೇಜಿನ ಪ್ರಾಂಶುಪಾಲ  ಡಾ. ರಮೇಶ್ ಟಿ.ಎಸ್., ಮ್ಯಾನೇಜ್‍ಮೆಂಟ್ ಕಾಲೇಜಿನ ನಿರ್ದೇಶಕ ಡಾ. ಎಂ.ಆರ್. ಹೆಗಡೆ ಉಪಸ್ಥಿತರಿದ್ದರು.

ಅದಮಾರು ಮಠ ಎಜ್ಯುಕೇಶನ್ ಕೌನ್ಸಿಲ್‍ನ ಕಾರ್ಯದರ್ಶಿ ಪೆÇ್ರ.ಕೆ. ಹರಿ ಸ್ವಾಗತಿಸಿ,  ಆಡಳಿತ ಮಂಡಳಿ ಕಾರ್ಯದರ್ಶಿಡಾ.ಜಿ.ಎಸ್ ಚಂದ್ರಶೇಖರ್ ವಂದಿಸಿದರು. ಶ್ರೀಕಾಂತ್ ಸಿದ್ದಾಪುರ, ರಮಾನಂದ ರಾವ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕೂ ಮೊದಲು ಪೂರ್ಣಪ್ರಜ್ಞಾ ಕಾಲೇಜು ಕ್ಯಾಂಪಸ್‍ನಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀಕೃಷ್ಣನ ವಿಗ್ರಹವನ್ನು ಶಿರೂರು ಸ್ವಾಮೀಜಿ ಉದ್ಘಾಟಿಸಿದರು.


Spread the love