ಉಡುಪಿ: ಶಿರ್ವದಲ್ಲಿ ಬಸ್‌ನಡಿಗೆ ಬಿದ್ದು ಮಗು ಮೃತ್ಯು

ಉಡುಪಿ: ಬಸ್ಸೊಂದರ ಅಡಿಗೆ ಬಿದ್ದು ಮಗುವೊಂದು ಮೃತಪಟ್ಟ ಘಟನೆ ಇಂದು ಸಂಜೆ 7 ಗಂಟೆ ಸುಮಾರಿಗೆ ಶಿರ್ವ ಜಾಮಿಯಾ ಮಸೀದಿಯ ಎದುರು ನಡೆದಿದೆ. ಮೈಸೂರಿನ ಫ‌ರ್ಹಿನ್ ತಾಜ್‌ ಎಂಬವರ ನಾಲ್ಕೂವರೆ ವರ್ಷದ ಮಗು ಸಹ್ರೀನ್‌ ತಾಜ್‌ ಮೃತ ಮಗು. ಫ‌ರ್ಹಿನ್‌ ತಾಜ್‌ ಕೆಲ ದಿನಗಳ ಹಿಂದೆ ಶಿರ್ವದಲ್ಲಿರುವ ತನ್ನ ಸಹೋದರ ಖಾದರ್‌ ಶರೀಫ್ ಎಂಬವರ ಮನೆಗೆ ಬಂದಿದ್ದರು. ಇಂದು ಅವರು ತಮ್ಮ ಇನ್ನೊಬ್ಬರು ಸಂಬಂಧಿಕರ ಮನೆಗೆ ಹೋಗಲು ಮಗುವಿನೊಂದಿಗೆ ಬಸ್‌ ಕಾಯುತ್ತಿದ್ದರು. ಆಗ ಬಸ್‌ನ್ನು ನಿಲ್ಲಿಸಿ ವಿಚಾರಿ ಸುತ್ತಿದ್ದಾಗ ಮಗು ತಾಯಿಯ ಕೈ ತಪ್ಪಿಸಿ ಬಸ್‌ನ ಎದುರು ಹೋಗಿತ್ತು. ಚಾಲಕ ನಿರ್ಲಕ್ಷ್ಯದಿಂದ ಬಸ್‌ ಚಲಾಯಿಸಿಕೊಂಡು ಹೋದ ಪರಿ ಣಾಮ ಚಕ್ರದಡಿಗೆ ಬಿದ್ದ ಮಗು ಗಂಭೀರವಾಗಿ ಗಾಯ ಗೊಂಡಿತು. ಕೂಡಲೇ ಶಿರ್ವ ಸಮು ದಾಯ ಆರೋಗ್ಯ ಕೇಂದ್ರಕ್ಕೆ ಮಗುವನ್ನು ಸಾಗಿಸಲಾಯಿತು. ಆದರೆ ಮಗು‌ ಚಿಕಿತ್ಸೆ ಫಲ‌ ಕಾರಿ ಯಾಗದೆ ಮೃತಪಟ್ಟಿತು.
ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply