ಉಡುಪಿ: ಸನಾತನ  ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಗುರುಪೂರ್ಣಿಮೆ

ಉಡುಪಿ: ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ   ಉಡುಪಿಯ  ಕಿದಿಯೂರು ಹೊಟೇಲ್‍ನ ಶೇಷಶಯನ ಸಭಾಂಗಣದಲ್ಲಿ ಗುರುಪೂರ್ಣಿಮಾ ಮಹೋತ್ಸವವನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಗುರುಪೂಜೆಯೊಂದಿಗೆ ಪ್ರಾರಂಭಿಸಲಾಯಿತು. ಅರ್ಚಕರಾದ ಶ್ರೀ ರಾಧಾಕೃಷ್ಣ ಭಟ್‍ರವರ ಮಾರ್ಗದರ್ಶನ ಅನುಸಾರ  ಶ್ರೀ ದಿನೇಶ್ ನಾಯಕ್ ದಂಪತಿಗಳು ಗುರುಪೂರ್ಣಿಮೆಯನ್ನು ನೆರವೇರಿಸಿದರು.

dharmabhimani's Dharmabhimnis Guu pooje Sri Raghavendra Rao

ಈ ಭಾವಪೂರ್ಣ ಸಂದರ್ಭದಲ್ಲಿ ಸೌ. ಶೋಭಾ ಕಾಮತ್‍ರವರು ಅಧ್ಯಾತ್ಮಿಕವಾಗಿ ಉನ್ನತಿ ಹೊಂದಿದ ಸಾಧಕರ ವೈಶಿಷ್ಟ ಮತ್ತು ಹೆಸರನ್ನು ಹೇಳಿದರು. ಉಚ್ಚಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಸನಾತನ ಸಂಸ್ಥೆಯ ಬಾಲಸಾಧಕಿಯಾದ ಕುಮಾರಿ ನಮನಾ ಶಶಿಧರ ಪ್ಯೆ (51), ಶೇ 60ಕ್ಕೂ ಮೇಲಿನ ಮಟ್ಟ ತಲುಪಿದ ಇತರ ಸಾಧಕರಾದ ಶ್ರೀ ಉಮೇಶ್ ಕುಂದಾಪುರ (61), ಸೌ ಶ್ರೀಕಲಾ ಜೋಷಿ ಕಾರ್ಕಳ (61), ಶ್ರೀ ಅನಂತ ಕೃಷ್ಣರಾವ್ ಉಡುಪಿ (63), ಮತ್ತು ಸೌ. ವಸಂತಿ ಉಮೇಶ್ ಸಿದ್ಧಾಪುರ (61)  ಇವರನ್ನು ಕರ್ನಾಟಕದ ರಾಜ್ಯ ವಕ್ತಾರರಾದ ಶ್ರೀ ರಮಾನಂದ ಗೌಡರವರು ಸತ್ಕರಿಸಿದರು.

ಆಮಂತ್ರಿತ ವಕ್ತಾರರಾದ ಕೊಡವೂರು ಶಂಕರನಾರಾಯಣ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ರಾಘವೇಂದ್ರ ರಾವ್ ಇವರು ಈಗ ಕಾಲವು ವ್ಯವಹಾರಕ್ಕೆ ಬಂದು ನಿಂತಿದೆ. ಯಾವುದೇ ರಾಜಕೀಯ ಪರವಾಗಿ ಹೋದರೆ ಹಿಂದುಗಳ ಬಲ ಕಮ್ಮಿಯಾಗುತ್ತದೆ. ರಾಜಕೀಯ ವ್ಯಕ್ತಿಗಳು ಹಿಂದೂಗಳನ್ನು ಉಪಯೋಗಿಸಿಕೊಳ್ಳುವ ಪೃವೃತ್ತಿ ಉಳ್ಳವರು. ಅವರಿಗೆ ಸಮಾಜದ ಒಳಿತಿನ ಬಗ್ಗೆ ಕಾಳಜಿ ಇರುವುದಿಲ್ಲ, ಕೇವಲ ಓಟಿಗಾಗಿ ಮಾತ್ರ ಇರುವಂತಹದ್ದು. ಪ್ರಸ್ತುತ ಕಾಲದಲ್ಲಿ ದೇವಸ್ಥಾನಗಳು ವ್ಯವಹಾರ ಕೇಂದ್ರಗಳಾಗುತ್ತಿವೆ. ಇದನ್ನು ನಿಲ್ಲಿಸಲು ದೇವಸ್ಥಾನದಲ್ಲಿ ಸನಾತನ ಸಂಸ್ಥೆಯು ಬೆಳವಣಿಗೆ ಆಗಬೇಕು ಎಂದು ಹೇಳುತ್ತಿದ್ದರು.

ಭಾಜಪವು ಒಂದು ವರ್ಷದಿಂದ ಕೇಂದ್ರದಲ್ಲಿ ಇದ್ದರೂ ಭಾರತದ ಮತ್ತು ಹಿಂದೂಗಳ ದುಸ್ಥಿತಿಯು ಬದಲಾಗಲಿಲ್ಲ. ಚುನವಣೆಯಿಂದ ಏನೂ ಸಾಧ್ಯವಾಗುವುದಿಲ್ಲ. ಧರ್ಮ ಕ್ರಾಂತಿಯಲ್ಲಿ ವಿಜಯವನ್ನು ಸಂಪಾದಿಸಲು ಶ್ರೀಗುರುಗಳ ಆಶೀರ್ವಾದವು ಅವಶ್ಯಕ. ಹಿಂದೂ ರಾಷ್ಟ್ರದ ಸ್ಥಾಪನೆಯಲ್ಲಿ ಸಹಭಾಗಿಅಗುವುದು ಕಾಲಾನುಸಾರ ಅವಶ್ಯಕ  ಗುರುಕಾರ್ಯವೇ ಆಗಿವೆ. ಧರ್ಮಾಧಿಷ್ಟಿತ ಹಿಂದೂ ರಾಷ್ಟ್ರ ಸ್ಥಾಪನೆಯಾದ ನಂತರ ಅಖಿಲ ಮನುಕುಲಕ್ಕಾಗಿ ಜಗತ್ತಿನಾದ್ಯಂತ ಹಿಂದೂ ಧರ್ಮವನ್ನು ಸ್ಥಾಪಿಸುವುದು ಅವಶ್ಯಕವಾಗಿದೆ ಎಂದು ಹೇಳುತ್ತಿದ್ದರು.

ತದನಂತರ ಸನಾತನ ಸಂಸ್ಥೆ ಸೌ. ಶೋಭಾ ಕಾಮತ್‍ರವರು ಪ.ಪೂ ಡಾ|| ಜಯಂತ ಬಾಳಾಜಿ ಅಠವಲೆಯವರ ಪರಿಚಯ ಹಾಗೂ ಸಂಸ್ಥೆಯು ಮಾಡುತ್ತಿರುವ ಕಾರ್ಯದ ಬಗ್ಗೆ ಮಾಹಿತಿ ನೀಡಿದರು. ಹಿಂದೂ ರಾಷ್ಟ್ರ ಸ್ಥಾಪಿಸುವ ಹೆಜ್ಜೆಯಾಗಿ ಗುರುಗಳಿಂದ  ಸ್ಥಾಪಿಸಲಾಗುತ್ತಿರುವ   ಆಧ್ಯಾತ್ಮಿಕ   ಹಿಂದೂ ವಿಶ್ವವಿದ್ಯಾಲಯದ ಬಗ್ಗೆ ಅವರು ಹೇಳುತ್ತಿದ್ದರು. ಅದಕ್ಕಾಗಿ ಸಮಾಜ ಬಾಂಧವರು ತನು, ಮನ ಧನದ ರೀತಿಯಲ್ಲಿ ಭಾಗಿಯಾಗಬೇಕೆಂದು ಕರೆನೀಡಿದರು ಹಾಗೆಯೇ ಅಧ್ಯಾತ್ಮಿಕ ವಿಶ್ವವಿದ್ಯಾನಿಲಯದ ಮಾಹಿತಿ ಆಧಾರಿತ ಧ್ವನಿಚಿತ್ರವನ್ನು ಪ್ರದರ್ಶಿಸಲಾಯಿತು.

ಹಿಂದೂ ಜನಜಾಗೃತಿಮಿತಿಯ ಶ್ರೀ ವಿಶ್ವನಾಥ್ ನಾಯಕ್ ಯವರು ಹಿಂದೂ ವಾರ್ತಾ ವಾಹಿನಿ ಅವಶ್ಯಕತೆಯ ಬಗ್ಗೆ ಈ ರೀತಿ ಹೇಳುತ್ತಿದ್ದರು. ಗೂಗಲ್ ಸರ್ಚ್ ಮಾಹಿತಿ ಆಧಾರಿತ ಲಭ್ಯವಿರುವ 800 ಧಾರ್ಮಿಕ ಚಾನೆಲ್‍ನಲ್ಲಿ ಯಾವುದೇ ಹಿಂದೂ ಚಾನೆಲ್ ಇಲ್ಲ, ಪತ್ರಿಕಾರಂಗದಲ್ಲಿ ಕೂಡಾ ಅತ್ಯಧಿಕ ಪತ್ರಿಕೆಯ ಮಾಲೀಕರು ಹಿಂದೂಯೇತರರೇ ಆಗಿದ್ದಾರೆ. ಇದರಿಂದ ಬಹು ಸಂಖ್ಯಾತ ಹಿಂದೂ ರಾಷ್ಟ್ರದಲ್ಲಿ ಹಿಂದೂಗಳ ಮೇಲಾಗುವ ಆಘಾತವನ್ನು ಮುಖ್ಯವಾಹಿನಿಗೆ ತರುತ್ತಿಲ್ಲ. ಈ ನಿಟ್ಟಿನಲ್ಲಿ ಹಿಂದೂಜನಜಾಗೃತಿ ಸಮಿತಿಯು ಹಿಂದೂವಾರ್ತಾ ಎಂಬ ಹೊಸ ಚಾನೆಲ್ ನ್ನು ಪ್ರಾರಂಭಿಸಲಾಗಿದೆ. ಇದರಂತೆ ಕಳೆದ 5 ತಿಂಗಳಿಂದ ಪ್ರತಿನಿತ್ಯ 2 ವಿಡಿಯೋ ತುಣುಕುಗಳನ್ನು ಪ್ರಸಾರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ವಾರ್ತಾವಾಹಿನಿಯಾಗಲಿದೆ ಇದಕ್ಕೆ ಸಮಾಜ ಬಾಂಧವರು ಸಹಕರಿಸಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ  ಹಿಂದೂ ವಾರ್ತಾ ವಾಹಿನಿಯ ವಿಡಿಯೋವನ್ನು ತೋರಿಸಲಾಯಿತು.

ಕುಮಾರಿ ಗೌರಿ ಯವರು ಕಾರ್ಯಕ್ರಮ ನಿರೂಪಿಸಿದರು.

Leave a Reply

Please enter your comment!
Please enter your name here