ಉಡುಪಿ: ಸಿಂಡಿಕೇಟ್ ಬ್ಯಾಂಕಿನಲ್ಲಿ ಖೋಟಾ ನೋಟುಗಳು ಪತ್ತೆ

ಉಡುಪಿ: ಜಿಲ್ಲೆಯ ಸಿಂಡಿಕೇಟ್ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ 25 ಸಾವಿರ ರೂ ಮೌಲ್ಯದ ಒಟ್ಟು 41 ಖೋಟಾನೋಟುಗಳು ಪತ್ತೆಯಾದ ಘಟನೆ ಶುಕ್ರವಾರ ನಡೆದಿದೆ.
2015ರ ಅ. 1 ರಿಂದ ನವೆಂಬರ್ 30 ರ ಮಧ್ಯಾವಧಿಯಲ್ಲಿ ಜಿಲ್ಲೆಯಲ್ಲಿರುವ ವಿವಿಧ ಶಾಖೆಗಳಿಂದ ರವಾನಿಸಿದ ಹಣದಲ್ಲಿ ಸಿಂಡಿಕೇಟ್ ಕರೆನ್ಸಿ ಚೆಸ್ಟ್ ರವರು ಪರಿಷ್ಕರಣೆ ಮಾಡುವಾಗ ರೂ 1000 ಹಾಗೂ ರೂ 500 ಮುಖಬೆಲೆಯ ಖೋಟಾ ನೋಟುಗಳು ಪತ್ತೆಯಾಗಿವೆ.
ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Please enter your comment!
Please enter your name here