ಉಡುಪಿ: ಸೇತುವೆಯ ಮೇಲಿಂದ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಉಡುಪಿ: ವ್ಯಕ್ತಿಯೋರ್ವರು ಉದ್ಯಾವರ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ರಾತ್ರಿ ಜರುಗಿದೆ
ಮೃತರನ್ನು ಶಿರ್ವ ಸೋರ್ಕೋಳ ನಿವಾಸಿ ಅಲ್ಫೋನ್ಸ್ ಫೆರ್ನಾಂಡಿಸ್ ಎಂದು ಗುರುತಿಸಲಾಗಿದೆ.
ಮಾಹಿತಿಗಳ ಪ್ರಕಾರ ಶನಿವಾರ ರಾತ್ರಿ ಕೆಲವೊಂದು ಯುವಕರು ಕಟಪಾಡಿ ಸೇತುವೆಯಲ್ಲಿ ಮೀನು ಹಿಡಿಯುತ್ತಿದ್ದ ವೇಳೆ ವ್ಯಕ್ತಿಯೋರ್ವರು ಸೇತುವೆಯ ತಡೆಗೊಡೆಯ ಮೇಲೆ ಹತ್ತಿ ನದಿಗೆ ಹಾರಿದ್ದು, ಅವರು ಹಾರುವುದನ್ನು ನೋಡಿದ ಯುವಕರು ರಕ್ಷಿಸಲು ಧಾವಿಸಿದ್ದು ಆ ವೇಳೆಗಾಗಲೇ ನೀರಿನಲ್ಲಿ ಬಿದ್ದಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಕಟಪಾಡಿ ಪೋಲಿಸರು ಹಾಗೂ ಅಗ್ನಿಶಾಮಕ ದಳ ಸಿಬಂದಿಗಳು ಆಗಮಿಸಿದ್ದು, ವ್ಯಕ್ತಿಯ ಹುಡುಕಾಟ ನಡೆದಿದೆ.
ವ್ಯಕ್ತಿಯ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ವ್ಯಕ್ತಿ ನದಿಗೆ ಹಾರುವ ಮುನ್ನ ತನ್ನ ಮೊಬೈಲ್, ಬೆಳ್ಳಿಯ ಬ್ರಾಸ್ ಲೆಟ್, ಹಣವನ್ನು ಸೇತುವೆಯ ಮೇಲಿರಿಸಿ ಹಾರಿದ್ದಾರೆ ಎನ್ನಲಾಗಿದೆ.

Leave a Reply