ಉಡುಪಿ: ಹಿಂದೂ ಸಮುದಾಯದವರ ಹತ್ಯೆ ; ವಿಶ್ವಹಿಂದು ಪರಿಷತ್-ಬಜರಂಗದಳದ ವತಿಯಿಂದ ನಡೆದ ರಸ್ತೆ ತಡೆ

ಉಡುಪಿ: ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ನಡೆದಿರುವ ಪ್ರಕರಣಗಳು ಹಾಗೂ ಹಿಂದೂ ಸಮುದಾಯದವರ ಹತ್ಯೆ ರಾಜ್ಯ ಸರ್ಕಾರದ ಪ್ರಾಯೋಜಕತ್ವದಲ್ಲಿ ನಡೆದಿದ್ದು, ಪ್ರಕರಣದಲ್ಲಿ ಮೃತಪಟ್ಟವರಿಗೆ ರಾಜ್ಯ ಸರ್ಕಾರ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

VHP_BD_protest_Udupi_Madikeri 13-11-2015 12-13-31 VHP_BD_protest_Udupi_Madikeri 13-11-2015 12-14-06 VHP_BD_protest_Udupi_Madikeri 13-11-2015 12-14-16 VHP_BD_protest_Udupi_Madikeri 13-11-2015 12-01-32 VHP_BD_protest_Udupi_Madikeri 13-11-2015 12-01-12

ಶುಕ್ರವಾರ ಉಡುಪಿಯ ಕ್ಲಾಕ್ ಟವರ್ ಬಳಿ ವಿಶ್ವಹಿಂದು ಪರಿಷತ್-ಬಜರಂಗದಳದ ವತಿಯಿಂದ ನಡೆದ ರಸ್ತೆ ತಡೆ ಪ್ರತಿಭಟನೆಯಲ್ಲಿ ಅವರು ಭಾಗವಹಿ ಮಾತನಾಡಿದರು.
ಟಿಪ್ಪು ಜಯಂತಿ ವಿರೋಧಿಸಿ ಕೊಡಗಿನಲ್ಲಿ ವಾರದ ಹಿಂದಿನಿಂದಲೇ ಪ್ರತಿಭಟನೆ ನಡೆಯಿತು. ಆದರೂ ಜಿಲ್ಲಾಧಿಕಾರಿ ರಜೆಯಲ್ಲಿ ತೆರಳಿದರು. ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಕೇರಳದಿಂದ ಗೂಂಡಾಗಳು ಬರುವುದರ ಬಗ್ಗೆ ಗೂಢಾಚಾರ ಇಲಾಖೆಗೆ ಗೊತ್ತಿತ್ತು. ಸ್ವತಃ ಮುಖ್ಯಮಂತ್ರಿಯವರೇ ಅದರ ಉಸ್ತುವಾರಿಯಾಗಿದ್ದರು. ಮೆರವಣಿಗೆ ನಡೆಸಬಾರದು ಎಂದು ಆದೇಶವಿದ್ದರೂ ಮೆರವಣಿಗೆ ನಡೆಸಬಾರದು ಎಂದಿದ್ದರೂ ಮೆರವಣಿಗೆ ನಡೆಸಿದ್ದಾರೆ ಇದೆಲ್ಲವನ್ನೂ ನೋಡಿದಾಗ ರಾಜ್ಯ ಸರ್ಕಾರದ ಪ್ರಾಯೋಜಕತ್ವದಲ್ಲಿ ಘಟನೆ ನಡೆದಿದೆ ಎಂದು ತಿಳಿಯುತ್ತದೆ.
ಗಿರೀಶ್ ಕಾರ್ನಾಡ್ ಎಂಬ ಜ್ಞಾನವೇ ಇಲ್ಲದ ವ್ಯಕ್ತಿಯೊಬ್ಬರು ಜ್ಞಾನ ಪೀಠ ಪ್ರಶಸ್ತಿ ಪಡೆದಿರುವುದು ದೃರಾದೃಷ್ಟ. ಅಯೋಗ್ಯರಿಗೆ ಜ್ಞಾನ ಪೀಠ ಪ್ರಶಸ್ತಿ ದೊರೆತರೆ ಏನಾಗುತ್ತದೆ ಎಂಬುದಕ್ಕೆ ಗಿರೀಶ್ ಕಾರ್ನಾಡ್ ಅವರೇ ಸಾಕ್ಷಿ. ಸಿದ್ಧರಾಮಯ್ಯ ಅವರ ಮನಸ್ಸಿನ ಭಾವನೆ ಕಾರ್ನಾಡ್ ಮಾತಿನ ಮೂಲಕ ವ್ಯಕ್ತವಾಗಿದೆ ಎಂದರು. ಕಳೆದ ಎರಡು ವರ್ಷದಲ್ಲಿ ಸಿದ್ಧರಾಮಯ್ಯ ಅವರು ಜಾತಿ ಸಮಾವೇಶ, ಜಾತಿ ಗಣತಿ, ಜಾತಿ-ಜಾತಿಗಳ ಮಧ್ಯೆ ಒಡಕು ಮೂಡಿಸುವ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗದಿರುವಾಗ ಜಿಲ್ಲಾ/ತಾಲೂಕು ಕೇಂದ್ರಗಳಿಗೆ ಟಿಪ್ಪು ಜಯಂತಿ ಆಚರಣೆಗೆ ದುಡ್ಡು ಕೊಡುತ್ತಿದ್ದಾರೆ. ಕೋಮು ಸಾಮರಸ್ಯ ಕದಡಲು ಮುಖ್ಯಮಂತ್ರಿಗಳೇ ಕಾರಣ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ, ಮಾಜಿ ಶಾಸಕ ರಘುಪತಿ ಭಟ್, ಆರೆಸ್ಸೆಸ್ ಸಂಘ ಸಂಚಾಲಕ ಶಂಭು ಶೆಟ್ಟಿ, ಮುಖಂಡರಾದ ಉದಯ್ ಕುಮಾರ್ ಶೆಟ್ಟಿ, ಮಟ್ಟಾರು ರತ್ನಾಕರ ಹೆಗ್ಡೆ, ಶ್ಯಾಮಲಾ ಕುಂದರ್, ಸುನೀತಾ ನಾಯ್ಕ್, ಗಣೇಶ್ ಕುಮಾರ್, ಯಶ್‍ಪಾಲ್‍ಸುವರ್ಣ, ದಿನಕರ ಶೆಟ್ಟಿ, ಹರೀಶ್ ರಾಮ್, ಶ್ಯಾಮ್‍ಪ್ರಸಾದ್ ಕುಡ್ವ, ಸಂಧ್ಯಾ ರಮೇಶ್, ನಳಿನಿ ಪ್ರದೀಪ್, ದಿನೇಶ್ ಶೆಟ್ಟಿ ಹೆಬ್ರಿ, ಮಟ್ಟಾರು ಗಣೇಶ್ ಕಿಣಿ, ಹರ್ಷವರ್ದನ್, ಸುರೇಶ್ ಮೆಂಡನ್, ಬೋಳ ಸದಾಶಿವ ಶೆಟ್ಟಿ, ಹರೀಶ್ ಪೂಜಾರಿ ಮೊದಲಾದವರು ಭಾಗವಹಿಸಿದ್ದರು.

Leave a Reply

Please enter your comment!
Please enter your name here