ಉಡುಪಿ: ಹಿರಿಯಡ್ಕ ಸ್ಮಾರ್ಪಿಯೊ ವಾಹನ ಡಿಕ್ಕಿ ಬಾಲಕಿ ಮೃತ್ಯು, ಇಬ್ಬರಿಗೆ ಗಾಯ

ಉಡುಪಿ: ಹಿರಿಯಡ್ಕ ಪ್ರಥಮ ದರ್ಜೆ ಕಾಲೇಜ್‌ ಗೇಟ್‌ ಬಳಿ ಭಾನುವಾರ  ಸ್ಕಾರ್ಪಿಯೊ ವಾಹನ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯೊಬ್ಬಳು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ.

ಮೃತ ಬಾಲಕಿಯನ್ನು ಶಿವಪುರದ ದಿನೇಶ್‌ ಹಾಗೂ ಶೋಭಾ ದಂಪತಿಯ ಪುತ್ರಿ ದಿತಿ (6) ಎಂದು ಗುರುತಿಸಲಾಗಿದೆ. ಪುತ್ತಿಗೆಯ ಸರಸ್ವತಿ(32) ಹಾಗೂ ಅವರ ಪುತ್ರಿ ತೇಜಸ್ವಿ(4) ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಲೇಜಿನಲ್ಲಿ ಇಂದು ಕರೆದಿದ್ದ ಸ್ವಸಹಾಯ ಗುಂಪಿನ ಸಭೆಗೆ ಹಾಜರಾಗಲು ಸರಸ್ವತಿ ತನ್ನ ಪುತ್ರಿ ತೇಜಸ್ವಿ ಹಾಗೂ ಪಕ್ಕದ ಮನೆಗೆ ನೆಂಟರಾಗಿ ಬಂದ ದಿತಿಯೊಂದಿಗೆ ಪುತ್ತಿಗೆ ಕಡೆಯಿಂದ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ

ಹಿಂದಿನಿಂದ ಬಂದ ಸ್ಕಾರ್ಪಿಯೋ ಢಿಕ್ಕಿ ಹೊಡೆಯಿತು. ಇದರಿಂದ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರಲ್ಲಿ ದಿತಿ ಚಿಕಿತ್ಸೆ ಫ‌ಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply