ಉಡುಪಿ : ಹೊಳೆಯಲ್ಲಿ  ಈಜಲು ಹೋದ ಯುವಕರಿಬ್ಬರು ಮುಳುಗಿ ಮೃತ್ಯು

ಉಡುಪಿ :  ಪಾಂಬೂರು ಎಂಬಲ್ಲಿಯ ಪಂಜಿಮಾರು ಹೊಳೆಗೆ ಈಜಲು ಹೋದ ಇಬ್ಬರು ಯುವಕರು ನೀರು ಪಾಲಾದ ಘಟನೆ   ನಡೆದಿದೆ.

ಪಾಂಬೂರಿನ ನೆಲ್ಸನ್ ಆಳ್ವರ ಪುತ್ರ ಆಸ್ಟಿನ್ ಆಳ್ವ(20) ಮತ್ತು ಗಿಲ್ಬರ್ಟ್ ಡಿಸೋಜರ ಪುತ್ರ ಅಶ್ವಿನ್ ಡಿಸೋಜ(21) ಮೃತಪಟ್ಟವರಾಗಿದ್ದಾರೆ. ಆಸ್ಟಿನ್ ಆಳ್ವ ಕಟಪಾಡಿ ಎಸ್‌ವಿಎಸ್ ಕಾಲೇಜಿನ ಬಿಕಾಂ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದರೆ, ಅಶ್ವಿನ್ ಉದ್ಯಾವರದಲ್ಲಿರುವ ಟೋಯೊಟಾ ಶೋರೂಂನಲ್ಲಿ ಉದ್ಯೋಗಿಯಾಗಿದ್ದರು.

Austin_Ashwin_pamboor 11-10-2015 18-09-46

ಪಾಂಬೂರು ಚರ್ಚ್ ಸಮೀಪ ನಡೆದ ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಿ ಬಳಿಕ ಅಲ್ಲೇ ಸಮೀಪದ ಹೊಳೆಗೆ   ಯುವಕರು ಈಜಲು ತೆರಳಿದ್ದರು. ಈ ಪೈಕಿ ಆಸ್ಟಿನ್ ಹೊಳೆಯ ಆಳದ ಕಡೆ ಈಜುತ್ತ ಹೋಗಿ ನೀರಲ್ಲಿ ಮುಳುಗಿ ಕೆಸರಲ್ಲಿ ಹೂತು ಹೋದನು. ಕೂಡಲೇ ಆತನ ನೆರವಿಗೆ ಧಾವಿಸಿದ ಅಶ್ವಿನ್ ಕೂಡಾ ಮುಳುಗಿ ಮೃಪಟ್ಟರೆನ್ನಲಾಗಿದೆ. ಇವರ ಜೊತೆಗಿದ್ದ ಅನಿಲ್ ಎಂಬವರು ಇವರಿಬ್ಬರನ್ನೂ ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಬಳಿಕ ಸ್ಥಳೀಯರು, ಅಗ್ನಿಶಾಮಕ ದಳ ಹಾಗೂ ಪೊಲೀಸರು ಆಗಮಿಸಿ ಮೃತದೇಹಗಳನ್ನು ಮೇಲಕ್ಕೆ ಎತ್ತಿದರು. ಮರಣೋತ್ತರ ಪರೀಕ್ಷೆಯನ್ನು ಶಿರ್ವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಸಲಾಯಿತು.

 ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಕಾಪು ದಿವಾಕರ್ ಶೆಟ್ಟಿ, ಶಿರ್ವ ಚರ್ಚ್‌ನ ಧರ್ಮಗುರು ಸ್ಟಾನಿ ತಾವ್ರೊ ಮತ್ತಿತರರು ಭೇಟಿ ನೀಡಿದರು. ಘಟನೆಯ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Please enter your comment!
Please enter your name here