ಉಳ್ಳಾಲ ಗಲಭೆ ಮೂವರ ಬಂಧನ; ಸೆಕ್ಷನ್ ಮುಂದುವರಿಕೆ

ಮಂಗಳೂರು: ಉಳ್ಳಾಲ ಕೊಲೆಯತ್ನ ಹಾಗೂ ಗಲಭೆಗೆ ಸಂಬಂಧಿಸಿ ಸಿಸಿಬಿ ಪೋಲಿಸ್ ವೆಲೆಂಟಿನ್ ಡಿ’ಸೋಜಾ ನೇತೃತ್ವದ ತಂಡ ಮತ್ತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

image003commissioner-chandrasekhar-20160429-003

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿ ಪೋಲಿಸ್ ಕಮೀಷನರ್ ಚಂದ್ರಶೇಖರ್ ಅವರು ಬಂಧಿತರನ್ನು ಉಳ್ಳಾಲ ನಿವಾಸಿ ರಾಹುಲ್ ಪೂಜಾರಿ (22), ಅಂಬ್ಲಮೊಗರು ನಿವಾಸಿ ಪ್ರಜ್ವಲ್ (21), ತೊಕ್ಕಟ್ಟು ನಿವಾಸಿ ವಿನೀತ್ (22) ಎಂದು ಗುರುತಿಸಿದ್ದು, ಘಟನೆಯಲ್ಲಿ ಅವರ ಪಾತ್ರದ ಕುರಿತು ತನಿಖೆ ಮುಂದುವರೆದಿರುತ್ತದೆ ಎಂದರು.

ಬಂಧಿತ ಆರೋಪಿಗಳೂ ವಿವಿಧ ಕೃತ್ಯಗಳಲ್ಲಿ ಭಾಗವಹಿಸಿದ್ದು ಇದರ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದರು.

ಮುಂಜಾಗ್ರತ ಕ್ರಮವಾಗಿ ಮೇ 6 ರ ತನಕ ಸೆಕ್ಷನ್ 144 ಜಾರಿಗೆಗೊಳಿಸಿದ್ದು, ಹೆಚ್ಚಿನ ಪೋಲಿಸ್ ಭಧ್ರತೆಯನ್ನು ಒದಗಿಸಲಾಗಿದೆ ಎಂದರು.

ರಾಹುಲ್ ಎರಡು ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಪ್ರಜ್ವಲ್ ಹಾಗೂ ವಿನೀತ್ ಅವರು ಸಫ್ವಾನ್ ಹಸನ್ ಕೊಲೆಯಲ್ಲಿ ಭಾಗಿಯಾದ ಕುರಿತು ಮಾಹಿತಿ ಇದ್ದು, ತನಿಕೆ ನಡೆಯುತ್ತಿದೆ. ಈಗಾಗಲೇ 5 ಮಂದಿ ಬಂಧಿತರಾಗಿದ್ದು ತನಿಖೆ ಮುಂದುವರೆದಿದೆ ಎಂದರು.

ಬಾಳಿಗಾ ಕೊಲೆ ಪ್ರಕರಣ ಕುರಿತು ಕೇಳಿದ ಪ್ರಶ್ನೆಗೆ ಎಲ್ಲಾ ವಿಧಗಳಿಂದ ತನಿಖೆ ನಡೆಯುತ್ತಿದ್ದು, ಸದ್ಯ ಉಳ್ಳಾಲ ಘಟನೆಯ ಕುರಿತು ಪೋಲಿಸರು ವ್ಯಸ್ಥರಾಗಿದ್ದು, ಬಾಳಿಗಾ ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು ಎಂದರು

Leave a Reply