ಉಳ್ಳಾಲ ಘಟನೆ ಒರ್ವನ ಬಂಧನ; ಶಾಂತಿ ಕಾಪಾಡುವಂತೆ ಪೋಲಿಸ್ ಕಮೀಷನರ್ ಮನವಿ

ಮಂಗಳೂರು: ಉಳ್ಳಾಲದಲ್ಲಿ ಮುಸ್ಲಿಂ ಯುವಕ ಸಫ್ವಾನ್ ಎಂಬಾತನಿಗೆ ಹಲ್ಲೆನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೋಲಿಸರು ಒರ್ವನನ್ನು ಬಂಧಿಸಿದ್ದಾರೆ.

ಬಂಧಿತನನ್ನು ಕುಂಪಲ ಕೃಷ್ಣನಗರ ಅಡ್ಡರಸ್ತೆಯ ನಿವಾಸಿ ಶಿವರಾಜ್ ಯಾನೆ ಶಿವ (18) ಎಂದು ಗುರುತಿಸಲಾಗಿದೆ.

image003commissioner-chandrashekar-pressmeet-20160427-003

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಪೋಲಿಸ್ ಕಮೀಷನರ್ ಚಂದ್ರಶೇಖರ್ ಅವರು ಆರೋಪಿ ಏಪ್ರಿಲ್ 25 ರಂದು ಬೆಳಗಿನ ಜಾವ ಉಳ್ಳಾಲ ತೊಕ್ಕೊಟ್ಟು, ಓವರ್ ಬಿಡ್ಜಿನ ಬಳಿ ಸಫ್ವಾನ್ ಅವರನ್ನು ಮಾರಾಕಾಯುಧಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದು ಅವರಲ್ಲಿ ಒರ್ವರನ್ನು ಬಂಧಿಸಿದ್ದಾರೆ.  ಪ್ರಕರಣಕ್ಕೆ ಸಂಬಂಧಿಸಿ ಇತರ 4-5 ಮಂದಿ ಭಾಗಿಯಾದ ಮಾಹಿತಿಯಿದ್ದು ಅವರ ಪತ್ತೆ ಕಾರ್ಯ ಚುರುಕಿನಲ್ಲಿದೆ.

ಪ್ರಕರಣದ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ದಕ್ಷಿಣ ಉಪವಿಭಾಗದ ಸಹಾಯಕ ಪೋಲಿಸ್ ಆಯುಕ್ತರು ತನಿಖಾ ತಂಡದ ಮೇಲುಸ್ತುವಾರಿಯನ್ನು ವಹಿಸಲಿದ್ದಾರೆ. ಈಗಾಗಲೇ ತನಿಖಾ ತಂಡವು 10 ಮಂದಿ ಸಂಶಯಿತರನ್ನು ಪ್ರಶ್ನಿಸಿದ್ದಾರೆ ಎಂದರು.

ಉಳ್ಳಾಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಏಪ್ರಿಲ್ 26 ಸಂಜೆ 6 ರಿಂದ 7 ದಿನಗಳವರೆಗೆ ನಿಷೇಧಾಜ್ಞೆಯನ್ನು ಹೊರಡಿಸಿದ್ದು ಈ ಸಂದರ್ಭದಲ್ಲಿ ಕಾನೂನು ಭಂಗ ಮಾಡುವ ಉದ್ದೇಶದಿಂದ 5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು, ಮೆರವಣಿಗೆ ಮತ್ತು ಸಭೆಗಳನ್ನು, ಶಸ್ತ್ರಾಸ್ತ್ರಗಳನ್ನು ಒಯ್ಯುವುದು, ಸ್ಪೋಠಕ ವಸ್ತುಗಳನ್ನು ಸಿಡಿಸುವುದು, ಬಹಿರಂಗ ಘೋಷಣೆಗಳನ್ನು ಕೂಗುವುದು, ಬಿತ್ತಿಚಿತ್ರ ಅಥವಾ ಇತರೆ ಯಾವುದೇ ವಸ್ತುಗಳನ್ನು ಅಂಟಿಸುವುದಾಗಲಿ, ಇಲ್ಲಿ ಕಸಗಳನ್ನು ಒಂದೆಡೆ ಹಾಕಿ ಪ್ರಚಾರ ಮಾಡುವುದನ್ನು ನಿಲ್ಲಿಸಲಾಗಿದೆ.

ಹೆಚ್ಚಿನ ಭಧ್ರತೆಗಾಗಿ 10 ಕೆಎಸ್ಆರ್ಪಿ ತುಕಡಿಗಳನ್ನು ನಿಯೋಜಿಸಿದ್ದು, ಹೆಚ್ಚುವರಿಯಾಗಿ 5 ಉಪಾಧಿಕ್ಷರು, 8 ಪೋಲಿಸ್ ನಿರೀಕ್ಷಕರು, 6 ಪೋಲಿಸ್ ಉಪನಿರೀಕ್ಷಕರು, 10 ಸಹಾಯಕ ಪೋಲಿಸ್ ಉಪ ನಿರೀಕ್ಷರು, 260 ಪೋಲಿಸ್ ಸಿಬಂಧಿಗಳನ್ನು ನಿಯೋಜಿಸಿ ಪರಿಸ್ಠಿತಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಅವರು ಹೇಳಿದರು.

Leave a Reply