ಉಳ್ಳಾಲ: ಭಾರತ್ ಬಂದ್ – ಸ್ನೇಹಿತರ ಜೊತೆ ಈಜಲು ತೆರಳಿದ ಯುವಕ ಕೆರೆಯಲ್ಲಿ ಮುಳುಗಿ ಮೃತ್ಯು

ಉಳ್ಳಾಲ : ಸ್ನಾನ ಮಾಡಲೆಂದು ಸೋಮೇಶ್ವರ ಬೀಚ್ ಪಕ್ಕದಲ್ಲಿರುವ ದೇವಸ್ಥಾನದ ಕೆರೆಗೆ ಇಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮೇಶ್ವರದಲ್ಲಿ ಬುಧವಾರ ನಡೆದಿದೆ.

naveen-dsouza-02092015 (11)

ಮೃತರನ್ನು ಚೆಂಬುಗುಡ್ಡೆ ನಿವಾಸಿ ನವೀನ್ ಮೊಂತೆರೊ(32) ಎಂದು ಗುರುತಿಸಲಾಗಿದೆ. ಬುಧವಾರ ಭಾರತ್ ಬಂದ್ ಆದ ಕಾರಣ ನವೀನ್ ತನ್ನ ಸ್ನೇಹಿತರ ಜೊತೆ ಸ್ನಾನ ಮಾಡಲೆಂದು ಇಲ್ಲಿನ ದೇವಸ್ಥಾನದ ಕೆರೆಗೆ ಇಳಿದಿದ್ದರು. ಟ್ಯಾಕ್ಸಿ ಕ್ಯಾಬ್ ಚಾಲಕರಾಗಿದ್ದ ಅವರು ಸ್ನೇಹಿತರೊಂದಿಗೆ ಸೋಮೇಶ್ವರ ಬೀಚ್‌ನಲ್ಲಿ ವಾಲಿಬಾಲ್ ಆಡಿ ನಂತರ ಸ್ನಾನ ಮಾಡಲು ಹೋಗಿದ್ದರು. ಈ ಸಂದರ್ಭ ನವೀನ್ ನೀರಿನಲ್ಲಿ ಮುಳುಗಿ ಮೃತಪಟ್ಟರು ಎಂದು ತಿಳಿದುಬಂದಿದೆ.
ಆರೋಗ್ಯ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Leave a Reply