ಎಗ್ಗಿಲ್ಲದೇ ಸಾಗಿದೆ ಕಲ್ಲು ಗಣಿಗಾರಿಕೆ: ಮರಳುಗಾರಿಕೆಯಿಂದ ಸಮಸ್ಯೆಗಳ ಸೃಷ್ಟಿ

ಎಗ್ಗಿಲ್ಲದೇ ಸಾಗಿದೆ ಕಲ್ಲು ಗಣಿಗಾರಿಕೆ: ಮರಳುಗಾರಿಕೆಯಿಂದ ಸಮಸ್ಯೆಗಳ ಸೃಷ್ಟಿ

ಬ್ರಹ್ಮಾವರ: ಸರಕಾರಕ್ಕೆ ರಾಜಧನ ಕಟ್ಟಿ ಖಾಸಗಿಯವರು ನಡೆಸುವ ಗಣಿಗಾರಿಕೆ ಮತ್ತು ಮರಳುಗಾರಿಕೆಯ ಮೇಲೆ ಇಲಾಖೆ ಸಂಪೂರ್ಣ ನಿಯಂತ್ರಣವನ್ನು ಕಳೆದುಕೊಳ್ಳುತ್ತಿದೆ. ಇದರಿಂದ ಪರಿಸರ ಹಾನಿ ಒಂದಡೆಯಾದರೆ, ಸರಕಾರದ ಬೊಕ್ಕಸಕ್ಕೆ ಬರಬೇಕಾದ ತೆರಿಗೆ ಹಣ ದಂಧೆಕೋರರ ಪಾಲಾಗುತ್ತಿರುವ ಘಟನೆಗಳು ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ನಡೆಯುತ್ತಿದೆ. ಆದರೆ ಈ ಬಗ್ಗೆ ಧಾಳಿ ನಡೆಸುವ ಇಲಾಖೆ ಅಧಿಕಾರಿಗಳು, ಒಂದಿಷ್ಟು ದಿನ ಜನರ ಕಣ್ಣಿಗೆ ಮಣ್ಣೇರೆಚುವ ಪ್ರಯತ್ನ ಮಾಡಿ, ಮುಂದೆ ಪ್ರಕರಣವನ್ನು ಅನುಸರಿಸುವ ಯಾವುದೇ ಪರಿಪಾಠ ನಡೆಸದೆ ಸುಮ್ಮನಾಗುತ್ತಿದ್ದಾರೆ. ಇದರಿಂದ ವ್ಯವಸ್ಥೇ ಮೇಲೆ ಸಾಕಷ್ಟು ಪರಿಣಾಮಗಳಾಗುತ್ತಿದ್ದು, ಕಲ್ಲು ಮತ್ತು ಮರಳಿನ ದರ ದುಪ್ಪಟ್ಟಾಗಿ ಜನ ಸಾಮಾನ್ಯರಿಗೆ ಹೊರೆಯಾಗುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ನಾವು ಗಮನಿಸುವುದಾದರೆ ಬ್ರಹ್ಮಾವರ ಸುತ್ತಮುತ್ತ ಸಾಕಷ್ಟು ಮರಳು ಗಣಿಕಾರಿಕೆಯನ್ನು ನೋಡಬಹುದು. ಆದರೆ ಬಹುತೇಕ ಮರಳು ಧಕ್ಕೆಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿದ ಯಾವುದೇ ನಿಯಮ ನಿಬಂಧನೆಗಳನ್ನು ಅನುಸರಿಸದೆ ಎಗ್ಗಿಲ್ಲದೇ ಮರಳು ತೆಗೆಯುವ ಕಾಯಕ ನಡೆಸುತ್ತಿದೆ. ಇದರಿಂದ ಇತ್ತೀಚಿಗಿನ ದಿನದಲ್ಲಿ ಮತ್ಸ್ಯ ಕ್ಷಾಮ ಕೂಡ ಪ್ರಾರಂಭವಾಗಿದೆ. ಜಲಚರಗಳು ಸಂತಾನೋತ್ಪತ್ತಿ ಮಾಡುವ ಅವಧಿಯಲ್ಲೂ ಕೂಡ ಹೊರ ರಾಜ್ಯದ ಮುಳುಗು ಪರಿಣೀತ ಕೆಲಸಗಾರರನ್ನು ಕರೆ ತಂದು ನದಿಯಲ್ಲಿ 8 ಅಥವಾ 10 ಅಡಿ ಉದ್ದದ ಸ್ಟಾಂಡ್ ಇಟ್ಟು ಮರಳು ತೆಗೆಯುವ ಕಾಯಕ ಸಾಗುತ್ತಿದೆ. ಇದಲ್ಲದೇ ಎಗ್ಗಿಲ್ಲದ ಮರಳುಗಾರಿಕೆಯಿಂದ ಸ್ಥಳೀಯ ಪಂಚಾಯಿತಿಯ ಸಂಪರ್ಕ ರಸ್ತೆಗಳು ಸಂಪೂರ್ಣ ಹದೆಗೇಡುತ್ತಿದೆ. ಈ ಬಗ್ಗೆ ದುರಸ್ಥಿಗೆ ಪಂಚಾಯಿತಿಗಳಲ್ಲಿ ಯಾವುದೇ ಅನುದಾನವಿರದ ಹಿನ್ನಲೆ ರಸ್ತೆ ಸಂಪೂರ್ಣ ಹಾಳಾಗುತ್ತಿದೆ. ಕೆಲವೊಂದು ಪಂಚಾಯಿತಿಯಲ್ಲಿ ಮರಳು ಧಕ್ಕೆಗೆ ಟೋಲ್ ಅಳವಡಿಸುವ ಕಾರ್ಯ ನಡೆಸಿದ್ದರು, ಇದರಿಂದ ಪಂಚಾಯಿತಿಗೆ ಒಂದಿಷ್ಟು ಆಧಾಯ ಹರಿದು ಬರುವ ಅವಕಾಶವಿತ್ತು. ಆದರೆ ಸದ್ಯ ಹಿಂದಿನ ಜಿಲ್ಲಾಧಿಕಾರಿಯವರು ಪಂಚಾಯಿತಿ ಅಳವಡಿಸುತ್ತಿದ್ದ ಟೋಲ್ ಗೇಟ್‍ಗಳಿಗೆ ಅವಕಾಶ ನೀಡದ ಹಿನ್ನಲೆಯಲ್ಲಿ ಪಂಚಾಯಿತಿಗೆ ಬರುವ ಒಂದಿಷ್ಟು ಆದಾಯಕ್ಕೂ ಕಲ್ಲು ಬಿದ್ದಿದೆ. ಇದಲ್ಲದೇ ಅವ್ಯಾಹತವಾಗಿ ನದಿಯಿಂದ ಮರಳು ತೆಗೆಯುವುದರಿಂದ ಐರೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದ್ರುಗಳು ಮತ್ತು ಪಾಂಡೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದ್ರುಗಳು ಕಿರಿದಾಗುತ್ತಿದೆ. ಈ ಬಗ್ಗೆ ಪರಿಸರ ಪ್ರೇಮಿಗಳು ಮತ್ತು ಸ್ಥಳೀಯ ಸಂತೃಸ್ತರು ಇಲಾಖೆಗೆ ದೂರು ನೀಡಿದಾಗ ಇಲಾಖೆಯ ಅಧಿಕಾರಿಗಳು ಪ್ರತ್ಯಕ್ಷರಾಗುತ್ತಾರೆ.

mining-sand-00 mining-sand-01

ಇದು ಮರಳುಗಾರಿಕೆ ವಿಚಾರವಾದರೆ ಇನ್ನು ಕಲ್ಲು ಗಣಿಗಾರಿಕೆಯವರದ್ದು ಇನ್ನೊಂದು ಕಥೆ ಪಕ್ಕದ ತಮಿಳುನಾಡಿನಿಂದ ಕೆಲಸಗಾರರನ್ನು ಕರೆಸಿಕೊಂಡು, ಕಾಡು ಪ್ರದೇಶದಲ್ಲಿ ಹಸಿರು ಪೀಠ ನಿಷೇಧದ ನಡುವೆಯೇ ಅಕ್ರಮವಾಗಿ ಗಣಿಗಾರಿಕೆ ಮಾಡುವುದಲ್ಲದೇ, ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಬಲು ದೂರ ರಾಜ ಪರಂಪರೆಯಲ್ಲಿ ಕೆಲಸಗಾರರನ್ನು ಜೀತದಾಳುಗಳಂತೆ ಕೆಲಸ ಮಾಡಿಕೊಳ್ಳುತ್ತಿರುವ ಹಲವಾರು ಕೋರೆಗಳು ಇನ್ನೂ ಜಿಲ್ಲೆಯಲ್ಲಿ ಜೀವಂತವಾಗಿದೆ. 3 ಅಥವಾ 4 ವರ್ಷಕ್ಕೆ ಸರಕಾರ ಜಾಗ ಬಾಡಿಗೆಗೆ ಪಡೆದು, 15, 20 ವರ್ಷಗಳ ಕಾಲ ಕೋರೆ ನಡೆಸುತ್ತಾ ತಲೆ ಮಾರುಗಳು ಕೂತು ತಿಂದರು ಕರಗದಷ್ಟು ಹಣ ಮಾಡಿ ಸರಕಾರದ ಬೊಕ್ಕಸಕ್ಕೆ ಖಾಲಿ ಕೈ ತೋರಿಸುವ ವ್ಯವಸ್ಥೆ ಕಲ್ಲುಕೋರೆಯದ್ದು. ತಮ್ಮ ಹಣ ಬಲದಿಂದ ಪ್ರತ್ಯೇಕ ಸರಕಾರವನ್ನು ರಚಿಸಿಕೊಂಡು ಕಾರ್ಯ ನಿರ್ವಹಿಸುವ ಕೋರೆಗಳು ಬ್ರಹ್ಮಾವರ ಸುತ್ತಮುತ್ತಲಿನ ಪರಿಸರದಲ್ಲಿದೆ. ವರ್ಷಾನು ವರ್ಷಗಳ ಕಾಲ ಮಳೆ ಬಿಸಿಲಿಗೆ ಜಗ್ಗದೆ ಕುಗ್ಗದೆ ನಿಂತ ಕಲ್ಲಿನ ಬೆಟ್ಟಗಳನ್ನು, ಸಿಡಿ ಮದ್ದುಗಳಿಂದ ಸ್ಟೋಟಿಸುವ ಮೂಲಕ, ವರ್ಷಗಳಲ್ಲಿ ಕಲ್ಲು ಕೋರೆಯ ಪ್ರಪಾತ ಸೃಷ್ಟಿಸುವುದರ ಮೂಲಕ ಪರಿಸರಕ್ಕೆ ಹಾನಿ ಮಾಡುವ ಕೆಲಸ ಕಲ್ಲು ಗಣಿಕಾರಿಕೆಯಿಂದಾಗುತ್ತಿದೆ. ಮಳೆಗಾಲದಲ್ಲಂತು ಮೃತ್ಯು ಕೂಪವಾಗಿ ಮಾರ್ಪಾಡಾಗುವ ಕಲ್ಲು ಗಣಿಗಳು ಅನೇಕ ಮಕ್ಕಳನ್ನು ಬಲಿ ತೆಗೆದುಕೊಂಡ ಉದಾಹರಣೆಗಳವೆ. ಇಷ್ಟಾದರೂ ಕೂಡ ಇಲಾಖೆ ಮಾತ್ರ ಗಣಿ ಮಾಲಿಕ ಪರವಾಗಿ ನಿಂತು ರಕ್ಷಿಸುವ ಕೆಲಸ ಮಾಡುತ್ತಿದೆ.

ಇಲ್ಲಿ ಅಕ್ರಮ ಮರುಳುಗಾರಿಕೆ, ಅಕ್ರಮ ಗಣಿಗಾರಿಕೆಯ ವ್ಯವಸ್ಥೆಯ ವಿರುದ್ಧ ಹೋರಾಡುವ ಸಾರ್ವಜನಿಕರಿಗೆ, ಪರಸರವಾದಿಗಳಿಗೆ, ಪತ್ರಕರ್ತರಿಗೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕುವ ಪ್ರಕರಣಗಳು ಬಂದಾಗ ಮಾತ್ರ ಇಲಾಖೆ ಎದ್ದು ಬಿದ್ದು ಸ್ಥಳಕ್ಕೆ ಧಾವಿಸಿ ಬಂದು ಕರ್ತವ್ಯ ನಿರ್ವಹಿಸುವ ಕಾರ್ಯ ಮಾಡುತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ನಿಲ್ಲಿಸಿದ್ದು, ಶೀಘ್ರದಲ್ಲಿ ಮರಳುಗಾರಿಕೆ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಣಿ ಮಾಲಿಕರ ಪರ ನಿಲುವು ತೋರದೆ, ಸಾರ್ವಜನಿಕರ ಸಮಸ್ಯೆ, ಪ್ರಾಕೃತಿಕ ಸಂಪತ್ತು ಇವುಗಳ ರಕ್ಷಣೆ ಮಾಡುವ ಕುರಿತು ಕಾರ್ಯ ಪ್ರವೃತ್ತರಾಗಬೇಕಿದೆ. ಅಕ್ರಮ ಗಣಿಗಾರಿಕೆ ಮತ್ತು ಅಕ್ರಮ ಮರುಳುಗಾರಿಕೆಯ ಕುರಿತು ಈಗಾಗಲೇ ಪ್ರಕರಣವಿರುವವರಿಗೆ ಮತ್ತೆ ಅವಕಾಶ ನೀಡದೆ, ಇಲಾಖೆಯ ನಿಯಮ ನಿಬಂಧನೆಗಳನ್ನು ಪಾಲಿಸುವವರಿಗೆ ಅವಕಾಶ ನೀಡಬೇಕು ಎನ್ನುವುದು ಜನರ ಆಶಯವಾಗಿದೆ ಆದರೆ ಹೊಸ ನೀತಿಗಳು ಹಣವಂತರ ಪರವಾಗುತ್ತಿದೆ ಎನ್ನುವುದು ಸ್ಥಳೀಯರ ವಾದ.

ಮರುಳುಗಾರಿಕೆ ಸಮಸ್ಯೆಯಿಂದ ಸ್ವಲ್ಪ ಬಿಡುಗಡೆಯಾಗಿ ಆಗಸ್ಟ್ ತಿಂಗಳ 12ರಂದು ಹೊಸ ಮರಳು ನೀತಿ ಗೆಜೆಟ್ ನೋಟಿಫೀಕೇಶನ್ ಆಗಿದ್ದು, ಇದರಲ್ಲಿ 10 ಎಕರೆ ವ್ಯಾಪ್ತಿಯ ಮರಳುಗಾರಿಕೆ ಪ್ರದೇಶವನ್ನು ನಿಗದಿ ಪಡಿಸಿ ಗಡಿ ಗುರುತಿಸಿ, ಇಲಾಖೆಯಿಂದ ಏಲಂ ಕೂಗುವ ಪ್ರಕ್ರಿಯೆ ನಡೆಯಲಿದೆ. ಅಧಿಕವಾಗಿ ಅಧಿಕ ಮೊತ್ತದ ಟೆಂಡರ್ ಪಾವತಿಸುವವರಿಗೆ ಮರಳು ತೆಗೆಯುವ ಗುತ್ತಿಗೆ ಲಭಿಸಲಿದೆ. ಇದರಿಂದ ಮುಕ್ತವಾಗಿ ಲೀಸ್ ನೀಡುವ ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ. ಆದರೆ ಸಾಂಪ್ರಾದಾಯಿಕವಾಗಿ ಮರಳು ತೆಗೆಯುವವರಿಗೆ ಪ್ರತ್ಯೇಕ ವ್ಯವಸ್ಥೆ ಇರದ ಕಾರಣ, ಸಾಂಪ್ರದಾಯಿಕವಾಗಿ ಮರಳು ತೆಗೆಯುವವರಿಗೂ ಕೂಡ ಏಲಂ ಮೂಲಕ ಮರಳು ತೆಗೆಯುವ ವ್ಯವಸ್ಥೆ ನಡೆಸಬೇಕಾಗುತ್ತದೆ ಎನ್ನುತ್ತಾರೆ ಮಾಜಿ ಸಚಿವ ಕೆ ಜಯಪ್ರಕಾಶ್ ಹೆಗ್ಡೆ.

1 Comment

  1. A society’s fate can be decided by looking at how it manages its natural resources. This is one of the main differences you see between developed economies and developing/third world economies. India is blessed with many natural resources. However, our failure to effectively and scientifically manage these resources to benefit overall quality of life has resulted in a third world society. Our infrastructure is no better than the one in Nigeria, Ghana, Kenya and sub-Saharan Africa!!Again, no point in blaming our political leaders as we are the ones who elected them. We are all responsible!

Leave a Reply

Please enter your comment!
Please enter your name here