ಎಪ್ರಿಲ್ 3 ರಂದು ಮಂಗಳೂರು ಹಬ್ಬ ; ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ

ಮ0ಗಳೂರು: ಕರಾವಳಿಯ ಮಂಗಳೂರಿಗೆ ಪ್ರವಾಸಿಗರನ್ನು ಆಕರ್ಷಿಸುವುದು ಮತ್ತು ಕರಾವಳಿ ಪ್ರದೇಶದ ಸಂಸ್ಕøತಿ, ಕಲೆ, ಆಹಾರ ಇನ್ನಿತರೆ ಸಾಂಪ್ರದಾಹಿಕ ಶೈಲಿಗಳನ್ನು ಪ್ರವಾಸಿಗರಿಗೆ ಪರಿಚಯಿಸಲು ಎ. 3 ರಂದು ಮಂಗಳೂರು ನಗರದ ಲೇಡಿಹಿಲ್ ಜಂಕ್ಸನ್ ನಿಂದ ಲಾಲ್‍ಬಾಗ್‍ವರೆಗೂ ಮಹಾತ್ಮಾಗಾಂಧಿ ರಸ್ತೆಯಲ್ಲಿ ಅತ್ಯಾಕರ್ಷಕವಾಗಿ ಮಂಗಳೂರು ಹಬ್ಬವನ್ನು ಆಚರಿಸಲು ಸೋಮವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಂಬಂಧ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಯಿತು.
ಮಂಗಳೂರು ಹಬ್ಬದಲ್ಲಿ ದ.ಕ ಜಿಲ್ಲೆಯ ಪಾರಂಪರಿಕ ಆಹಾರ ಉಡುಗೆ –ತೊಡುಗೆ, ಚಿತ್ರಕಲಾ ಪ್ರದರ್ಶನ ಸೇರಿದಂತೆ ಮೀನುಗಳ ವೈವಿಧ್ಯಮಯ ಖಾದ್ಯಗಳು, ಎಳೆನೀರು ಅಂಗಡಿ ಐಸ್ ಕ್ರೀಂ ಅಂಗಡಿಗಳು ಸೇರಿದಂತೆ 120ಕ್ಕೂ ಹೆಚ್ಚು ವಿವಿಧ ಮಳಿಗೆಗಳನ್ನು ಮಹಾತ್ಮಾಗಾಂಧಿ ರಸ್ತೆ ಉದ್ದಕ್ಕೂ ಗ್ರಾಹಕರಿಗಾಗಿ ತೆರೆಯಲು ಸಭೆಯಲ್ಲಿ ನಿರ್ಧರಿಸಲಾಯಿತು.
ಬೆಂಗಳೂರಿನ ಖಾಸಗಿ ಕಾರ್ಯಕ್ರಮ ನಿರ್ವಾಹಕ ಸಂಸ್ಥೆ Phase-1 ಇವರು ಮಂಗಳೂರು ಹಬ್ಬ ನಿರ್ವಹಣೆಯ ಹೊಣೆ ಹೊರಲು ಮುಂದೆ ಬಂದಿದ್ದು ಈ ಬಗ್ಗೆ ಅವರು ಮಂಗಳೂರು ಹಬ್ಬಕ್ಕಾಗಿ ರೂ. 45.95 ಲಕ್ಷ ಖರ್ಚಾಗಬಹುದೆಂದು ತಿಳಿಸಿದ್ದಾರೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಗೋಪಾಲಕೃಷ್ಣ ಪ್ರವಾಸೋದ್ಯಮ ಇಲಾಖಾ ಸಹಾಯಕ ನಿರ್ದೇಶಕ (ಪ್ರ) ಕ್ಲಿಫರ್ಡ್ ಲೋಬೋ, ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮುಹಮ್ಮದ್ ನಝೀರ್ ಮುಂತಾದವರು ಹಾಜರಿದ್ದರು.

Leave a Reply