ಎಮ್ಎಲ್ಸಿ ಮೋಟಮ್ಮಗೆ ಎಸಿ ಕಾರು, ಎಸ್ಕಾರ್ಟ್ ಬೇಕಂತೆ!

ಉಡುಪಿ: ಕ್ಯಾಬಿನೆಟ್ ದರ್ಜೆಯ ಮಾನ್ಯತೆ ಹೊಂದಿರುವ ವಿಧಾನಪರಿಷತ್ ಸದಸ್ಯ ಉಗ್ರಪ್ಪ ಅವರ ಅಧ್ಯಕ್ಷತೆಯ ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿಯ ಸದಸ್ಯೆಯಾಗಿರುವ ಮಾಜಿ ಸಚಿವೆ ಹಾಗೂ ಪ್ರಸ್ತುತ ವಿಧಾನಪರಿಷತ್ ಸದಸ್ಯೆ ಮೋಟಮ್ಮ ಅವರಿಗೆ ಎಸಿ ಕಾರು ಹಾಗೂ ಎಸ್ಕಾರ್ಟ್ ಕೊಟ್ಟಿಲ್ಲ ಎಂದು ಉಡುಪಿ ಜಿಲ್ಲಾಡಳಿತದ ವಿರುದ್ದ ಹರಿಹಾಯ್ದ ಪ್ರಸಂಗ ಗುರುವಾರ ನಡೆದಿದೆ.

motamma

ಗುರುವಾರ ಉಡುಪಿ ಜಿಲ್ಲೆಯಲ್ಲಿ ವಿಧಾನಪರಿಷತ್ ಸದಸ್ಯ ಉಗ್ರಪ್ಪ ಅವರ ಅಧ್ಯಕ್ಷತೆಯ ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ ದೌರ್ಜನ್ಯ, ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ತಜ್ಞರ ಸಮಿತಿಯ ಸಭೆ ಆಯೋಜಿಸಲಾಗಿದ್ದು ಸಮಿತಿಯ ಅಧ್ಯಕ್ಷ ಉಗ್ರಪ್ಪ, ಸದಸ್ಯರಾದ ಶಾಸಕ ಕೆ ಬಿ ಶಾಣಪ್ಪ, ಶರಣಪ್ಪ ಮಟ್ಟು, ವಿನೀಶಾ ನೀರೊ ಹಾಗೂ ಇತರ ಸದಸ್ಯರುಗಳಾದ ಡಾ ವಸುಂದರಾ, ಎ ಎಸ್ ವಿಮಲ, ಪ್ರಭಾ ಎನ್, ಎಚ್ ಆರ್ ರೇಣುಕಾ ಹಾಗೂ ಮಾಜಿ ಸಚಿವೆ ಮೋಟಮ್ಮ ಭಾಗವಹಿಸಿದ್ದರು.

ಮೋಟಮ್ಮ ಹೊರತು ಪಡಿಸಿ ಇತರ ಸದಸ್ಯರುಗಳು ಸಭೆ ನಿಗದಿಯಾದ 11.30 ಕ್ಕೆ ಸರಿಯಾಗಿ ಆಗಮಿಸಿ ಪತ್ರಕರ್ತರನ್ನು ಹಾಗೂ ಸಭೆಗೆ ಆಗಮಿಸಿದ ಅಧಿಕಾರಿಗಳನ್ನು ಒಂದು ಗಂಟೆ ಕಾಯಿಸಿ ಸಭೆಯನ್ನು ಉಗ್ರಪ್ಪ ಕ್ಷಮೆ ಕೇಳುವ ಮುಕಾಂತರ ಆರಂಭಿಸಿದರು. ಸಭೆ ಆರಂಭವಾದ 45 ನಿಮಿಷಗಳ ಬಳಿಕ ಸಭೆಗೆ ಆಗಮಿಸಿದ ಮಾಜಿ ಸಚಿವೆ ಮೋಟಮ್ಮ ಸಭಾಂಗಣಕ್ಕೆ ಪ್ರವೇಸಿಸುತ್ತಿದ್ದಂತೆ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳ ಮೇಲೆ ಹರಿಹಾಯಲು ಆರಂಭಿಸಿದರು. ತಮ್ಮನ್ನು ಮಂಗಳೂರು ವಿಮಾನ ನಿಲ್ದಾಣದಿಂದ ಉಡುಪಿಗೆ ಕರೆತರಲು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಗಳನ್ನು ಕಳುಹಿಸಿದ್ದು, ಜಿಲ್ಲಾಡಳಿತದ ಯಾವುದೇ ಹಿರಿಯ ಅಧಿಕಾರಿಗಳು ಎದುರುಗೊಳ್ಳಲು ಬಂದಿಲ್ಲ ಅಲ್ಲದೆ ಕಳುಹಿಸಿದ ಕಾರಿನಲ್ಲಿ ಎಸಿ ಕೂಡ ಇಲ್ಲ, ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಹೊಂದಿದ ಸಮಿತಿಗೆ ಯಾವುದೇ ಪೋಲಿಸ್ ಎಸ್ಕಾರ್ಟ್ ನೀಡಿಲ್ಲ ಎಂದು ಸಾರ್ವಜನಿಕರಿಂದ ಅಹವಾಲು ಕೇಳಲು ಬಂದ ಮೋಟಮ್ಮ ತಮ್ಮ ಅಹವಾಲನ್ನೇ ಉಗ್ರಪ್ಪ ಬಳಿ ಇಡ ತೊಡಗಿದರು.

ಈ ವೇಳೆ ಜಿಲ್ಲಾಧಿಕಾರಿ ಆರ್ ವಿಶಾಲ್ ಅವರು ತಾವು ಇದರ ಸಂಪೂರ್ಣ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕಿ ಅವರಿಗೆ ನೀಡಿದ್ದು ಅದರಂತೆ ಅವರು ಜಿಲ್ಲಾಡಳಿತದಲ್ಲಿ ಲಭ್ಯವಿರುವ ವಾಹನಗಳನ್ನು ಕಳುಹಿಸಿರುತ್ತಾರೆ. ಇದರಲ್ಲಿ ಯಾವುದೇ ಲೋಪವಾದಲ್ಲಿ ಕ್ಷಮೆ ಇರಲಿ ಎಂದು ಕೇಳಿಕೊಂಡರು. ಇದಕ್ಕೆ ಸುಮ್ಮನಾಗದ ಮೊಟಮ್ಮ ಇನ್ನೂ ಕೂಡ ತಮ್ಮ ಸಿಟ್ಟನ್ನು ಹೊರ ಹಾಕುತ್ತಿದ್ದರು. ಬಳಿಕ ಉಗ್ರಪ್ಪ ಅವರೇ ಮೋಟಮ್ಮ ಅವರನ್ನು ಸಮಾಧಾನ ಪಡಿಸಿದರು. ಹಾಗೆಂದು ಇಡೀ ದಿನ ನಡೆದ ಸಭೆಯಲ್ಲಿ ಮೋಟಮ್ಮ ಕೇವಲ 50 ನಿಮಿಷ ಭಾಗವಹಿಸಿ ವಾಪಾಸಾದರು ಎನ್ನುವುದು ವಿಶೇಷ ಸಂಗತಿ.

3 Comments

  1. Thank (imaimaginary) God that this character is not from BJP. Otherwise the report would have very astutely pointed out the connection to BJP. Good reporting!!! Smiles . ..

  2. Motamma is a Cong I leader from Moodigere. She has no merit but only caste certificate. What do you expect from an uncouth character who is shouting at the DC?

Leave a Reply

Please enter your comment!
Please enter your name here