ಎ.ಜೆ. ವೈದ್ಯಕೀಯ ವಿಜ್ಞಾನ ಮಹಾ ವಿದ್ಯಾಲಯದ 15ನೇ ವಾರ್ಷಿಕೋತ್ಸವದ ಅಂಗವಾಗಿ ಸಮುದಾಯ ಆರೋಗ್ಯ ತರಬೇತಿ ಕೇಂದ್ರದ ನೂತನ ಕಟ್ಟಡದ ಉದ್ಘಾಟಿಸಲಾಯಿತು.

ಎ.ಜೆ. ವೈದ್ಯಕೀಯ ವಿಜ್ಞಾನ ಮಹಾ ವಿದ್ಯಾಲಯದ  15ನೇ ವಾರ್ಷಿಕೋತ್ಸವದ ಅಂಗವಾಗಿ ಸಮುದಾಯ ಆರೋಗ್ಯ ತರಬೇತಿ ಕೇಂದ್ರದ  ನೂತನ ಕಟ್ಟಡದ ಉದ್ಘಾಟಿಸಲಾಯಿತು.

ನಗರದ ಉನ್ನತ ವೈದ್ಯಕೀಯ ಮಹಾ ವಿದ್ಯಾಲಯಗಳಲ್ಲಿ ಮುಂದಿರುವ ಎ.ಜೆ. ವೈದ್ಯಕೀಯ ವಿಜ್ಞಾನ ಮಹಾ ವಿದ್ಯಾಲಯದ (ಲಕ್ಷ್ಮಿ ಮೆಮೋರಿಯಲ್‍ ಎಜುಕೇಶನ್‍ ಟ್ರಸ್ಟ್‍ನ   ಅಂಗಸಂಸ್ಧೆ) 15ನೇ ವಾರ್ಷಿಕೋತ್ಸವದ ಅಂಗವಾಗಿ ಕಾವೂರಿನಲ್ಲಿ  ಸಮುದಾಯ ಆರೋಗ್ಯ ತರಬೇತಿ ಕೇಂದ್ರದ  ನೂತನ ಕಟ್ಟಡದ ಉದ್ಘಾಟಿಸಲಾಯಿತು.

ಮಂಗಳೂರು: ಈ ಕೇಂದ್ರವನ್ನು ಸಂಸ್ಧೆಯ ಅಧ್ಯಕ್ಷರಾದ ಡಾ. ಎ.ಜೆ. ಶೆಟ್ಟಿಯವರು ಉದ್ಘಾಟಿಸಿ ಮಾತನಾಡಿ, “ಎ.ಜೆ. ವೈದ್ಯಕೀಯ ಸಂಸ್ಧೆಯು, ಸಮುದಾಯದ ವೈದ್ಯ ವಿಭಾಗದಡಿಯಲ್ಲಿ, ಕಾವೂರು, ಶಕ್ತಿನಗರ, ಹಾಗೂ ಪಾಣೆ ಮಂಗಳೂರುಗಳಲ್ಲಿ 2002 ರಿಂದ ಆರೋಗ್ಯ ಕೇಂದ್ರಗಳನ್ನು ನಡೆಸಲಾಗುತ್ತಿದ್ದು, ಎಲ್ಲಾ ವರ್ಗದ ರೋಗಿಗಳಿಗೆ, ಎಲ್ಲಾರೀತಿಯ ವೈದ್ಯ ಸೇವೆ,  ಚಿಕಿತ್ಸೆ ಹಾಗೂ ಔಷಧಿಗಳನ್ನು ಸಂಪೂರ್ಣ ಉಚಿತವಾಗಿ ಒದಗಿಸುತ್ತಿದ್ದೇವೆ. ಯಾವುದೇ ರೀತಿಯ ಉನ್ನತ ಚಿಕಿತ್ಸೆಗಳನ್ನು, ನಗರದ ಎ.ಜೆ. ಆಸ್ಪತ್ರೆಯಲ್ಲಿ ನೀಡಲಾಗುತ್ತದೆ. ಈ ಆರೋಗ್ಯ ಕೇಂದ್ರವನ್ನು ಜನೋಪಕಾರಕ್ಕಾಗಿ ಸಮರ್ಪಣೆ ಮಾಡಲಾಗಿದ್ದು, ಸಾರ್ವಜನಿಕರೆಲ್ಲರೂ ಕೇಂದ್ರದ ಸದುಪಯೋಗ ಪಡೆದುಕೋಳ್ಳಬೇಕಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಧೆಯ ಉಪಾಧ್ಯಕ್ಷರಾದ ಶ್ರೀ ಪ್ರಶಾಂತ್ ಶೆಟ್ಟಿ, ಡೀನ್‍ಡಾ. ಆಶೋಕ್ ಹೆಗ್ಡೆ ಶ್ರೀ ದಯಾನಂದ ಶೆಟ್ಟಿ, ಆಡಳಿತ ಅಧಿಕಾರಿ, ಶ್ರೀ ಅಭಿಲಾಷ್, ಸಾರ್ವಜನಿಕ ಸಂಪರ್ಕ ಅಧಿಕಾರಿ, ಡಾ. ಸಚಿದಾನಂದ ಉಪ ವೈದ್ಯಕೀಯ ನಿರೀಕ್ಷಕರು, ಡಾ. ಪ್ರಸನ್ನ, ಪ್ರಾಧ್ಯಾಪಕರು, ಡಾ. ಪ್ರದೀಪ್ ಸೇನಾಪತಿ, ಸಹಾಯಕ ಪ್ರಾಧ್ಯಾಪಕರು – ಸಮುದಾಯ ವೈದ್ಯವಿಭಾಗ ಹಾಗೂ ಇತರಗಣ್ಯರು ಭಾಗವಹಿಸಿದ್ದರು.

Leave a Reply

Please enter your comment!
Please enter your name here