ಏಪ್ರಿಲ್ 13 ರಂದು ವಿಷು’ವಿಗೆ ಸ್ವಾಗತ ವಿಶೇಷ ಕಾರ್ಯಕ್ರಮ

ಮ0ಗಳೂರು:  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ತುಳುಭವನ ಉರ್ವಸ್ಟೋರ್, ಮಂಗಳೂರು ಇಲ್ಲಿನ ‘ಸಿರಿಚಾವಡಿ’ಯಲ್ಲಿ ಏಪ್ರಿಲ್ 13 ರಂದು ಅಪರಾಹ್ನ ಗಂಟೆ 2.30ಕ್ಕೆ ’ವಿಷು’ವಿಗೆ ಸ್ವಾಗತ ವಿಶೇಷ ಕಾರ್ಯಕ್ರಮ ನಡೆಯಲಿರುವುದು.

ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ  ಎಮ್. ಜಾನಕಿ ಬ್ರಹ್ಮಾವರ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮಂಗಳೂರು ಮಹಾನಗರ ಪಾಲಿಕೆಯ  ಮಹಾಪೌರರಾದ ಹರಿನಾಥ್ ಎಂ. ಭಾಗವಹಿಸಲಿದ್ದಾರೆ. ಬಾಡೂರು ಪದವು ಶಾಲೆಯ ಮುಖ್ಯೋಪಾಧ್ಯಾಯರಾದ  ಶಂಕರ ರೈ ಪುತ್ತಿಗೆ ಇವರು ‘ವಿಷು’ವಿನ ಕುರಿತಾಗಿ  ಮಾತನಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಶ್ರೀಮತಿ ರತ್ನಾವತಿ ಜೆ.ಬೈಕಾಡಿ ಮತ್ತು ತಂಡದವರಿಂದ ತುಳು ಗೀತಗಾಯನವು ನಡೆಯಲಿರುವುದು

Leave a Reply