ಕಟೀಲು ದೇವಿಯ ಬಗ್ಗೆ ಅವಹೇಳನ ; ಆರೋಪಿಗಳ ಬಂಧನಕ್ಕೆ ಯುವ ಜನತಾದಳ ಒತ್ತಾಯ

ಕಟೀಲು ದೇವಿಯ ಬಗ್ಗೆ ಅವಹೇಳನ ; ಆರೋಪಿಗಳ ಬಂಧನಕ್ಕೆ ಯುವ ಜನತಾದಳ ಒತ್ತಾಯ

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಬರೆದ ವ್ಯಕ್ತಿಯ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನಗರ ಪೋಲಿಸ್ ಆಯುಕ್ತರಿಗೆ ದ.ಕ. ಜಿಲ್ಲಾ ಯುವ ಜನತಾದಳ ಜಾತ್ಯಾತೀತ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.

Akshith-suvarna (2)

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ಬಗ್ಗೆ ಅವಹೇಳನಕಾರಿ ಜಾಲತಾಣಗಳಲ್ಲಿ ನಿಂದನಾತ್ಮಕ ಹಾಗೂ ಅವಹೇಳನಕಾರಿ ಬರಹಗಳನ್ನು ಸಹಿಸಲಾಗದು. ಹಿಂದೂ ದೇವರ ಚಿತ್ರಗಳನ್ನು ಅಶ್ಲೀಲವಾಗಿ ಚಿತ್ರಿಸುವುದರಿಂದ ಹಿಂದುಗಳ ಭಕ್ತಿ, ಶ್ರದ್ದೆ, ನಂಬಿಕೆ ಹಾಗೂ ಭಾವನೆಗಳಿಗೆ ಪೆಟ್ಟಾಗುತ್ತದೆ ಇದು ಖಂಡನೀಯ. ಇಂತಹ ಕೃತ್ಯಗಳನ್ನು ಮಾಡುತ್ತಿರುವವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಯುವ ಜನತಾದಳ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಮನವಿಯಲ್ಲಿ ಆಗ್ರಹಿಸಿದ್ದಾರೆ.

Akshith-suvarna (1) Akshith-suvarna (3)

ಫೇಸ್ ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಲ್ಲಿ ಶ್ರೀ ಕ್ಷೇತ್ರ ಕಟೀಲಿನ ಬಗ್ಗೆ ಅವಹೇಳನಕಾರಿಯಾಗಿ ನಿಂದಿಸಿದವರನ್ನು ಕೂಡಲೇ ಪತ್ತೆ ಹಚ್ಚಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಅವರು ಒತ್ತಾಯಿಸಿದ್ದಾರೆ.

ಯುವ ಜನತಾದಳದ ರಾಜ್ಯ ನಾಯಕರಾದ ಶ್ರೀನಾಥ್ ರೈ, ಜಿತೇಶ್ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Please enter your comment!
Please enter your name here