ಕನಕದಾಸರ ಗುಡಿ ನವೀಕರಣಕ್ಕೆ ಶಿಲಾನ್ಯಾಸ

ಕನಕದಾಸರ ಗುಡಿ ನವೀಕರಣಕ್ಕೆ ಶಿಲಾನ್ಯಾಸ

ಉಡುಪಿ: ನಾಡಿನ ಹರಿದಾಸರುಗಳಲ್ಲಿ ಪ್ರಮುಖರೂ ತಮ್ಮ ಅಚಲ ಶ್ರದ್ಧೆ ಹಾಗೂ ಭಕ್ತಿಯ ಭಜನೆಯಿಂದ ಶ್ರೀಕೃಷ್ಣನನ್ನು ಒಲಿಸಿಕೊಂಡು ದೈವಭಕ್ತಿಯ ಶಕ್ತಿಯನ್ನು ವಿಶ್ವದೆತ್ತರಕ್ಕೇರಿಸಿದ ಭಕ್ತ ಕನಕದಾಸರ ಗುಡಿಯನ್ನು ನವೀಕರಣಗೊಳಿಸುವ ಕಾರ್ಯಕ್ಕೆ ಭಾನುವಾರ ಉಡುಪಿಯಲ್ಲಿ ಚಾಲನೆ ದೊರೆಯಿತು.

ಕೃಷ್ಣಮಠದ ಪಶ್ಚಿಮ ದಿಕ್ಕಿನಲ್ಲಿರುವ ಕನಕದಾಸರ ಗುಡಿಯ ಬಳಿಯಲ್ಲಿ ಪರ್ಯಾಯ ಪೇಜಾವರ ಶ್ರೀ ವಿಶ್ವೇಶತೀರ್ಥಶ್ರೀಪಾದರು ಶ್ರೀಪಾದರು, ಕಲಬುರಗಿಯ ಕುರುಬ ಪೀಠದ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರು ಜಂಟಿಯಾಗಿ ಗುಡಿಯ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ನೆರವೇರಿಸಿದರು. ಭಕ್ತಕನಕದಾಸ ಮಂದಿರ ಜೀರ್ಣೋದ್ಧಾರ ಸಮಿತಿಯ ನೇತೃತ್ವದಲ್ಲಿ ಸುಮಾರು 1.25 ಕೋಟಿ ವೆಚ್ಚದಲ್ಲಿ ನಡೆಯುವ ಈ ಕಾರ್ಯವು ತಮ್ಮ ಐದನೇ ಪರ್ಯಾಯದ ಅವಧಿಯಲ್ಲಿ ನಡೆಯುತ್ತಿರುವುದು ಅತ್ಯಂತ ಸಂತೋಷವನ್ನುಂಟು ಮಾಡಿದೆ ಎಂದು ಈ ಸಂದರ್ಭದಲ್ಲಿ ಸಂದೇಶ ನೀಡಿದ ಶ್ರೀ ವಿಶ್ವೇಶತೀರ್ಥರು ಈ ಕಾರ್ಯಕ್ಕೆ ತಾವು ಪೂರ್ಣ ಸಹಕಾರವನ್ನು ನೀಡುವುದಾಗಿಯೂ, ಅತೀ ಶೀಘ್ರ ಇದು ಪೂರ್ಣಗೊಳ್ಳುವಂತಾಗಲೆಂದು ಹರಸಿದರು. ಶ್ರೀ ಸಿದ್ದಾರಾಮಾನಂದ ಸ್ವಾಮೀಜಿಯವರು ಮಾತನಾಡಿ ಈ ಗುಡಿಯ ನವೀಕರಣದಿಂದ ಕೃಷ್ಣ ಮಠ ಮತ್ತು ಕುರುಬ ಸಮಾಜದ ನಡುವಿನ ಬಾಂಧವ್ಯ ಮತ್ತಷ್ಟು ಸುದೃಢವಾಗಲಿ. ಕನಕರ ಸಂದೇಶವನ್ನು ನಾಡಿನ ಮೂಲೆ ಮೂಲೆಗೂ ತಲುಪಿಸುವಲ್ಲಿ ಪ್ರಭಾವ ಬೀರುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

image001kanaka-mantapa-foundation-stone-20160710 image002kanaka-mantapa-foundation-stone-20160710 image003kanaka-mantapa-foundation-stone-20160710 image004kanaka-mantapa-foundation-stone-20160710 image005kanaka-mantapa-foundation-stone-20160710

ನವೀಕರಣ ಸಮಿತಿ ಅಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಈ ಹಿಂದೆ ತಮ್ಮ ತಂದೆ ಮಧ್ವರಾಜರ ನೇತೃತ್ವದಲ್ಲಿ ಕಟ್ಟಲ್ಪಟ್ಟ ಕನಕರಗುಡಿಯ ನವೀಕರಣ ಕಾರ್ಯಕ್ಕೆ ತಾವು ಸಚಿವರಾಗಿ ನೇತೃತ್ವ ವಹಿಸುವಂತಾಗಿರುವುದು ಒಂದು ಯೋಗ.ಈ ಕಾರ್ಯಕ್ಕೆ ಸರಕಾರದಿಂದಲೂ ಸಹಕಾರವನ್ನು ಮುಖ್ಯಮಂತ್ರಿಗಳು ಮೂಲಕ ಒದಗಿಸುವುದಾಗಿ ಭರವಸೆ ನೀಡಿದರು. ಸಂಸದೆ ಶೋಭಾ ಕರಂದ್ಲಾಜೆ ಶುಭಕೋರಿದರು.

ಕನಕಸದ್ಭಾವನಾ ಸಮಿತಿ ರಾಜ್ಯಾಧ್ಯಕ್ಷ ಓಂ ಕೃಷ್ಣಮೂರ್ತಿ ಕಾರ್ಯಕ್ರಮವನ್ನು ಸಂಯೋಜಿಸುವಲ್ಲಿ ವಿಶೇಷವಾಗಿ ಸಹಕರಿಸಿದ್ದು ಎಲ್ಲರನ್ನೂ ಸ್ವಾಗತಿಸಿದರು.

ಮಠದ ದಿವಾನರಾದ ಎಂ ರಘುರಾಮಾಚಾರ್ಯ,ಡಾ ಸುರೇಶಾಚಾರ್ಯ ವಿಷ್ಣುಮೂರ್ತಿ ಆಚಾರ್ಯ,, ಕನಕ ಸದ್ಭಾವನಾ ರಥಯಾತ್ರೆ ಸಮಿತಿ ಪ್ರ.ಕಾರ್ಯದರ್ಶಿ ಪ್ರಭಾವತಿ ,ಕಾನೂನು ಸಲಹೆಗಾರ ಅಮೃತೇಶ್, ಕುರುಬರ ಉಣ್ಣೆ ನಿಗಮದ ಅಧ್ಯಕ್ಷ ಪಂಡಿತ್ ರಾವ್ ಕಿದರಿ,ಮತ್ತು ಅನೇಕ ಪದಾಧಿಕಾರಿಗಳು,ಹಾಗೂ ನೂರಾರು ಕುರುಬ ಸಮಾಜ ಬಾಂಧವರು ಉಪಸ್ಥಿತರಿದ್ದರು.ಮಠದ ಮುಖ್ಯ ಪುರೋಹಿತ ಚಿತ್ರಾಪುರ ಗೋಪಾಲಕೃಷ್ಣ ಆಚಾರ್ಯ ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು.

ಇದಕ್ಕೂ ಮೊದಲು ಶ್ರೀ ಸಿದ್ದಾರಾಮಾನಂದಪುರಿ ಸ್ವಾಮೀಜಿ ಹಾಗೂ ಗಣ್ಯರನ್ನು ಸಂಸ್ಕೃತ ಕಾಲೇಜಿನಿಂದ ಮಠದ ಗೌರವಗಳೊಂದಿಗೆ ಮೆರವಣಿಗೆಯಲ್ಲಿ ಕೃಷ್ಣಮಠಕ್ಕೆ ಬರಮಾಡಿಕೊಳ್ಳಲಾಯಿತು.

Leave a Reply

Please enter your comment!
Please enter your name here