ಕರ್ತವ್ಯ ನಿರತ ಗೃಹರಕ್ಷಕರಿಗೆ ಸನ್ಮಾನ

ಕರ್ತವ್ಯ ನಿರತ ಗೃಹರಕ್ಷಕರಿಗೆ ಸನ್ಮಾನ

ಉಡುಪಿ: ಉಡುಪಿ ಜಿಲ್ಲಾ ಗೃಹರಕ್ಷಕದಳದ ಗೃಹರಕ್ಷಕರಾದ ಟಿ. ಪ್ರಕಾಶ್ ಪೈ, ಇವರು ಗೃಹರಕ್ಷಕದಳ ಇಲಾಖೆಗೆ ಸಲ್ಲಿಸಿರುವ ಕರ್ತವ್ಯವನ್ನು ಗುರುತಿಸಿ ಜಿಲ್ಲಾ ಕಮಾಂಡೆಂಟ್ ಡಾ|| ಕೆ. ಪ್ರಶಾಂತ್ ಶೆಟ್ಟಿ ಇವರು ಸನ್ಮಾನಿಸಿದರು, ಜಿಲ್ಲಾ ಡೆಪ್ಯುಟಿಕಮಾಂಡೆಂಟ್ ರಮೇಶ್ ಮತ್ತು ಉಡುಪಿ ಘಟಕಾಧಿಕಾರಿ ಕುಮಾರ್ ಉಪಸ್ಥಿತರಿದ್ದರು.

home guards

ಸನ್ಮಾನ ಸ್ವೀಕರಿಸಿದ ಟಿ. ಪ್ರಕಾಶ್ ಪೈ ಇವರ ಸುಧೀರ್ಘ ಅವಧಿಯ ಕರ್ತವ್ಯಕ್ಕೆ ಇಲಾಖೆಯ ಪ್ರೇರಣೆಯೂ ಕಾರಣವಾಗಿದ್ದು, ಯಾವುದೇ ಸ್ವಾರ್ಥ ಇಲ್ಲದೆ ಸೇವಾ ಮನೋಭಾವದಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗೃಹರಕ್ಷಕರಾಗಿ ಸೇರಿ ಸೇವೆ ಸಲ್ಲಿಸುವುದರಿಂದ ಇಲಾಖೆಯ ಯಶಸ್ಸಿನ ಹಾದಿಯಲ್ಲಿ ಮುಂದುವರಿಯಲು ಸಾಧ್ಯ ಎಂದರು.

Leave a Reply