ಕರ್ನಾಟಕ ಎನ್.ಎಸ್.ಯು.ಐ. ಕಾರ್ಯಕಾರಿಣಿ ಸಭೆ; ಉತ್ತಮ ಜಿಲ್ಲಾಧ್ಯಕ್ಷ ಗೌರವಕ್ಕೆ ಆಶಿತ್ ಜಿ.ಪಿರೇರ

ಬೆಂಗಳೂರು: ಕರ್ನಾಟಕ ರಾಜ್ಯ ಎನ್.ಎಸ್.ಯು.ಐ.ಸಮಿತಿಯು ರೂಪುಗೊಂಡು ಒಂದು ವರುಷವಾದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ರಾಜ್ಯ ಎನ್.ಎಸ್.ಯು.ಐ.ಸಮಿತಿಯ ವತಿಯಿಂದ “ಅಝಾದಿ” ಎಂಬ ಶೀರ್ಷಿಕೆಯಡಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯನ್ನು ಕರೆಯಲಾಗಿತ್ತು.

ashith-periera-22-03-2016

ಈ ವೇಳೆ ದ.ಕ. ಜಿಲ್ಲಾ ಎನ್.ಎಸ್.ಯು.ಐ. ಅಧ್ಯಕ್ಷ ಆಶಿತ್ ಜಿ.ಪಿರೇರ ಅವರನ್ನು ಉತ್ತಮ ಜಿಲ್ಲಾಧ್ಯಕ್ಷರೆಂದು ಘೋಷಿಸಿ ರಾಜ್ಯ ಎನ್.ಎಸ್.ಯು.ಐ ಸಮಿತಿಯ ವತಿಯಿಂದ ಅವರನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಪೊರೈಕೆ ಸಚಿವ ದಿನೇಶ್ ಗುಂಡೂರಾವ್, ಎನ್.ಎಸ್.ಯು.ಐ.ಮಾಜಿ ರಾಷ್ಟ್ರೀಯ ಅಧ್ಯಕ್ಷ ಸಲಿಂ ಅಹಮ್ಮದ್, ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್, ಎನ್.ಎಸ್.ಯು.ಐ.ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥ ಗೌಡ, ಎನ್.ಎಸ್.ಯು.ಐ.ರಾಷ್ಟ್ರೀಯ ಪ್ರತಿನಿಧಿ ಮನ್ನಾರ್ ಮನನ್ ಮತ್ತು ಇತರರು ಉಪಸ್ಥಿತರಿದ್ದರು.

Leave a Reply