ಕರ್ನಾಟಕ ಕಾರ್ಮಿಕರ ವೇದಿಕೆ ಬ್ರಹ್ಮಾವರ ವಲಯ ಉದ್ಘಾಟನೆ

ಕರ್ನಾಟಕ ಕಾರ್ಮಿಕರ ವೇದಿಕೆ ಬ್ರಹ್ಮಾವರ ವಲಯ ಉದ್ಘಾಟನೆ

ಉಡುಪಿ: ಕರ್ನಾಟಕ ಕಾರ್ಮಿಕರ ವೇದಿಕೆ ಉಡುಪಿ ತಾಲೂಕು ಬ್ರಹ್ಮಾವರ ವಲಯದ ಉದ್ಘಾಟನಾ ಸಮಾರಂಭ ರವಿವಾರ ಬ್ರಹ್ಮಾವರ ಮದರ್‍ಪ್ಯಾಲೇಸ್ ಸಭಾಂಗಣದಲ್ಲಿ ಜರಗಿತು.

ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಅವರು ಉದ್ಘಾಟಿಸಿ ಮಾತನಾಡಿ, ಕಾರ್ಮಿಕರ ನೋವಿಗೆ ಸ್ಪಂದಿಸಿ ಅವರ ನ್ಯಾಯಯುತ ಬೇಡಿಕೆಗಳಿಗೆ ಸದಾ ಬೆಂಬಲಿಸುವುದಾಗಿ ಹೇಳಿದರು.

karmika-vedike-brahmavara-unit-01 karmika-vedike-brahmavara-unit-02 karmika-vedike-brahmavara-unit-03

ಸಂಘದ ಜಿಲ್ಲಾ ಸಂಚಾಲಕ ರಾಘವೇಂದ್ರ ಕುಂದರ್ ಅವರು ಸ್ವಾಗತಿಸಿ, ಕಾರ್ಮಿಕ ವರ್ಗ ಯಾವುದೇ ಸಂಸ್ಥೆಯ ಬೆನ್ನೆಲುಬು. ಇಂತಹ ಸಂದರ್ಭದಲ್ಲಿ ಕಾರ್ಮಿಕರ ವೇದಿಕೆಯು ಅಶಕ್ತರ ಧ್ವನಿಯಾಗಿ ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವುದಾಗಿ ಹೇಳಿದರು. ಜಿಲ್ಲೆಯ ಹಲವಾರು ಸಮಸ್ಯೆಗಳನ್ನು ಪರಿಹರಿಸುವಲ್ಲಿ, ಮಹಿಳೆ ಹಾಗೂ ಮಕ್ಕಳ ಶೋಷಣೆ ತಡೆಗಟ್ಟುವಲ್ಲಿ ಶ್ರಮಿಸುತ್ತಿರುವ ಸಮಾನ ಮನಸ್ಕರ ತಂಡವಾಗಿದೆ ಎಂದರು.

ಅತಿಥಿಗಳಾಗಿ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೇರೆಗಾರ್, ಕಾರ್ಯದರ್ಶಿ ರವಿ ಶಾಸ್ತ್ರಿ ಬನ್ನಂಜೆ, ಕಾಪು ಘಟಕದ ಅಧ್ಯಕ್ಷ ಚಂದ್ರ ಪೂಜಾರಿ, ಪ್ರಮುಖರಾದ ರೋಹಿತ್ ಕರಂಬಳ್ಳಿ, ಸಂದೀಪ್ ಕುಮಾರ್, ಸರಿತಾ, ವೀರಣ್ಣ ಕುರುವೆತ್ತಿ ಗೌಡರ್ ಉಪಸ್ಥಿತರಿದ್ದರು. ಚಿದಾನಂದ್ ಕಾರ್ಯಕ್ರಮ ನಿರೂಪಿಸಿದರು.

Leave a Reply