ಕಲಾ ಪ್ರಕಾರವು ಭಾರತೀಯ ಸಂಸ್ಕ್ರತಿಯಲ್ಲಿ ಹಿರಿತನವಾದವು -ಪಿ.ಜಯರಾಮ ಭಟ್

Spread the love

ಕಲಾ ಪ್ರಕಾರವು ಭಾರತೀಯ ಸಂಸ್ಕ್ರತಿಯಲ್ಲಿ ಹಿರಿತನವಾದವು -ಪಿ.ಜಯರಾಮ ಭಟ್

ಮಂಗಳೂರು:ಭಾರತೀಯ ಕಲಾ ಪ್ರಕಾರಗಳಲ್ಲಿ ಸಿರಿವಂತಿಕೆಯ ಸಂಸ್ಕ್ರತಿ ಇದ್ದು ಈ ಎಲ್ಲಾ ಕಲಾ ಪ್ರಕಾರಗಳಲ್ಲಿ ಅತ್ಯಂತ ಹಿರಿತನವಾದ ಸಾಂಸ್ಕøತಿಯ ಕಲೆಯನ್ನು ನಾವು ಗೌರವಿಸಲೇಬೇಕು ಎಂದು ಕರ್ನಾಟಕ ಬ್ಯಾಂಕಿನ ಅಧ್ಯಕ್ಷ ಪಿ.ಜಯರಾಮ ಭಟ್ ಹೇಳಿದರು. ಅವರು ಮಂಗಳೂರಿನ ಮಂಗಳಾದೇವಿ ದೇವಳದ ವರ್ಷಾವಧಿ ಜಾತ್ರಾ ಮಹೋತ್ಸವ ಸಂದರ್ಭ ಜರಗಿದ ಸಾಂಸ್ಕ್ರತಿಯ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.

ಆರು ದಿನಗಳ ಈ ಜಾತ್ರಾ ಮಹೋತ್ಸವದ ಸಂದರ್ಭ ಪ್ರತಿದಿನವೂ ಅತ್ಯಂತ ಶ್ರದ್ಧಾ ಭಕ್ತಿಯಿಂದ ಕೂಡಿದ ಸಾಂಸ್ಕøತಿಯ ಕಾರ್ಯಕ್ರಮಗಳು ಮೂಡಿಬರಲಿದ್ದು ಶ್ರೀ ಮಂಗಳಾಂಬಿಕೆಯ ಸನ್ನಿದಾನ ಕಲಾ ಪ್ರಕಾರಕ್ಕೆ ಹೆಚ್ಚಿನ ಮಹತ್ವ ನೀಡಿದ್ದು ಶ್ಲಾಘನೀಯ ಎಂದು ಬೋಳಾರ ಶ್ರೀ ಮಾರಿಯಮ್ಮ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಅತಿಥಿ ಸ್ಥಾನದಿಂದ ಶುಭ ಹಾರೈಸಿದರು.ವೇದಿಕೆಯಲ್ಲಿ ಸ್ಥಳೀಯ ಕಾಪೆರ್Çರೇಟರ್ ಪ್ರೇಮಾನಂದ ಶೆಟ್ಟಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ವೇದಿಕೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರಮಾನಾಥ ಹೆಗ್ಡೆ ಮೊಕ್ತೇಸರರಾದ ರಾಮನ್ಯಾ ಕ್ ಕೋಟೆಕಾರ್ ಹಾಗೂ ಮೊಕ್ತೇಸರರಾದ ಪ್ರೇಮಲತಾ.ಎಸ್.ಕುಮಾರ್ ಉಪಸ್ಥಿತರಿದ್ದರು.ಮಲ್ಲಿಕಾ ಕಲಾ ವೃಂದ ಅಧ್ಯಕ್ಷ ಸುಧಾಕರ ರಾವ್ ಪೇಜಾವರ ಸ್ವಾಗತಿಸಿದರು.ಕ್ಷೇತ್ರದ ಸಾಂಸ್ಕ್ರತಿಕ ಕಾರ್ಯಕ್ರಮದ ಉಸ್ತುವಾರಿ ವಿನಯಾನಂದ ವಂದಿಸಿದರು. ವಾಸುದೇವ ರಾವ್ ಕುಡುಪು ಕಾರ್ಯಕ್ರಮ ನಿರೂಪಿಸಿದರು.


Spread the love