ಕಸಾಯಿಗಳಿಗೆ ಮುಕ್ತವಾಗಿ ಬಿಟ್ಟಿರುವುದು ಹಿಂದೂಗಳ ಮೇಲಾದ ಅನ್ಯಾಯ ! – ಹಿಂದೂ ಜನಜಾಗೃತಿ ಸಮಿತಿ

ಕಸಾಯಿಗಳಿಗೆ ಮುಕ್ತವಾಗಿ ಬಿಟ್ಟಿರುವುದು ಹಿಂದೂಗಳ ಮೇಲಾದ ಅನ್ಯಾಯ ! – ಹಿಂದೂ ಜನಜಾಗೃತಿ ಸಮಿತಿ

ಮಂಗಳೂರು: ಹಿಂದೂಗಳಿಗೆ ಪೂಜನೀಯವಾಗಿರುವ ಗೋಮಾತೆಯನ್ನು ಕೊಲ್ಲುವ ಕಸಾಯಿಗಳನ್ನು ಮುಕ್ತವಾಗಿ ಬಿಟ್ಟು ತಮ್ಮ ಧಾರ್ಮಿಕ ಶ್ರದ್ಧೆಯನ್ನು ರಕ್ಷಿಸುತ್ತಿರುವ ಗೋರಕ್ಷಕರ ಮೇಲೆ ಅನ್ಯಾಯವಾಗಿ ಕ್ರಮಕೈಗೊಳ್ಳುವುದು ಇದು ‘ಕಳ್ಳನನ್ನು ಬಿಟ್ಟು ಸನ್ಯಾಸಿಗೆ ಗಲ್ಲು’ ನೀಡಿದಂತಾಗಿದೆ. ಪಂಜಾಬ್ ಗೋರಕ್ಷಾ ದಳದ ಮುಖ್ಯಸ್ಥರಾದ ಶ್ರೀ. ಸತೀಶಕುಮಾರ್ ಪ್ರಧಾನ್‌ರವರ ಬಂಧನವೂ ಇದನ್ನೇ ತೋರಿಸುತ್ತದೆ ಎಂದು ಹಿಂದು ಜನಜಾಗೃತಿ ಸಮಿತಿ ಆರೋಪಿಸಿದೆ

ಒಂದು ರೀತಿಯಲ್ಲಿ ಇದು ಹಿಂದೂಗಳ ಬಹುಸಂಖ್ಯಾತರಿರುವ ಭಾರತದಲ್ಲಿ ಹಿಂದೂಗಳ ಧಾರ್ಮಿಕಶ್ರದ್ಧೆಯ ಮೇಲಿನ ಅಪಮಾನವೇ ಆಗಿದೆ. ಆದ್ದರಿಂದ ಸರಕಾರವು ತನ್ನ ನಿಲುವನ್ನು ಪುನರ್‌ವಿಮರ್ಶೆ ಮಾಡಲಿ ಹಾಗೂ ತನಗೆ ಗೋರಕ್ಷಕರ ಬಗ್ಗೆ ಇರುವ ಹಗೆಯ ನಿಲುವನ್ನು ಬಿಡಲಿ. ಇಲ್ಲದಿದ್ದರೆ ಗೋರಕ್ಷಕರನ್ನು ಬೆಂಬಲಿಸಿ ದೇಶಾದ್ಯಂತ ಜನಾಂದೋಲನವನ್ನು ನಡೆಯುವುದು.

ದೇಶದಲ್ಲಿ ಹಿಂದುತ್ವವಾದಿ ವಿಚಾರದ ಸರಕಾರವು ಅಧಿಕಾರದಲ್ಲಿದ್ದರೂ ಅನಧಿಕೃವಾಗಿ ನಡೆಸುತ್ತಿರುವ ಕಸಾಯಿಖಾನೆ, ಕಾನೂನುಬಾಹಿರವಾಗಿ ಗೋಮಾತೆಯ ಕಳ್ಳಸಾಗಾಣಿಕೆ, ಗೋಹತ್ಯೆ, ಗೋಮಾಂಸದ ರಫ್ತು ಇವುಗಳ ಪೈಕಿ ಒಂದರ ಮೇಲೂ ನಿರ್ಬಂಧ ಹೇರಲಿಲ್ಲ. ಅಧಿಕಾರದಲ್ಲಿರುವ ಭಾಜಪವು ಲೋಕಸಭಾ ಚುನಾವಣೆ ಪ್ರಚಾರದಲ್ಲಿ ಭಾರತದಲ್ಲಿ ‘ಗುಲಾಬಿ ಕ್ರಾಂತಿ’ (ಪಿಂಕ್ ರೆವೆಲ್ಯೂಷನ್)ಯನ್ನು ನಿಲ್ಲಿಸುವ ಆಶ್ವಾಸನೆ ನೀಡಿತ್ತು. ಪ್ರತ್ಯಕ್ಷದಲ್ಲಿ ಭಾರತದಿಂದ ವಿದೇಶಕ್ಕೆ ಗೋಮಾಂಸದ ರಫ್ತು ಹೆಚ್ಚಾಗಿರುವ ಅಂಕಿಅಂಶಗಳು ಬೆಳಕಿಗೆ ಬಂದಿದೆ. ಪೋಲೀಸರು ಗೋವಿನ ಕಳ್ಳಸಾಗಾಣಿಕೆ ಮಾಡುವವರು ಹಾಗೂ ಕಸಾಯಿಗಳ ಮೇಲೆ ಕ್ರಮಕೈಗೊಳ್ಳುವ ಬದಲು ಅವರಿಗೆ ರಕ್ಷಣೆ ನೀಡಿ ಕಾನೂನುಬದ್ಧ ಮಾರ್ಗದಿಂದ ಕಾರ್ಯ ಮಾಡುವ ಗೋರಕ್ಷಕರ ಮೇಲೆ ಸುಳ್ಳು ಅಪರಾಧವನ್ನು ದಾಖಲಿಸುತ್ತಿರುವ ಕೃತ್ಯಗಳು ರಾಜಾರೋಷವಾಗಿ ನಡೆಯುತ್ತಿದೆ. ಕಾಂಗ್ರೆಸ್ ಸರಕಾರದ ಕಾಲದಲ್ಲಿನಡೆಯುತ್ತಿದ್ದ ಈ ಕೃತ್ಯಗಳು ಈಗ ಹಿಂದುತ್ವವಾದಿ ವಿಚಾರಗಳ ಸರಕಾರವು ಅಧಿಕಾರಕ್ಕೆ ಬಂದ ಬಳಿಕವೂ ನಿಲ್ಲಲಿಲ್ಲ, ಎಂಬುದು ಮಾತ್ರ ದುರ್ದೈವ.

‘ಹಸು ಹಾಲು ನೀಡುತ್ತದೆ, ಆದರೆ ಮತವನ್ನಲ್ಲ’, ಎಂಬ ಹೊಸ ವಿಚಾರಸರಣಿಯಂತೆ ಸರಕಾರವು ಗೋರಕ್ಷಕರ ಮೇಲೆ ಅನ್ಯಾಯ ಮಾಡುತ್ತಿರುವುದು ಆಕ್ರೋಶಕಾರಿಯಾಗಿದೆ. ಆದ್ದರಿಂದ ಸರಕಾರವು ಹಿಂದೂಗಳ ಭಾವನೆಯನ್ನು ಗೌರವಿಸಿ ಶ್ರೀ. ಸತೀಶಕುಮಾರ್ ಪ್ರಧಾನ್‌ರವರ ವಿರುದ್ಧ ದಾಖಲಿಸಿರುವ ಅಪರಾಧವನ್ನು ತಕ್ಷಣ ಹಿಂಪಡೆದು ಅವರನ್ನು ಬಿಡುಗಡೆ ಮಾಡಲಿ ಹಾಗೂ ಗೋಮಾತೆಯನ್ನು ರಕ್ಷಿಸಲು ಕಠಿಣ ಕ್ರಮವನ್ನು ಕೈಗೊಳ್ಳಲಿ.

Leave a Reply

Please enter your comment!
Please enter your name here