ಕಾಪು : ಆಗಸ್ಟ್ 9- ಕಟಪಾಡಿಯಲ್ಲಿ ಎಸ್‍ಕೆಪಿಎ ವತಿಯಿಂದ ಕೆಸರ್ದ ಗೊಬ್ಬುಲು

ಕಾಪು : ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್(ಎಸ್‍ಕೆಪಿಎ)ನ ರಜತ ಸಂಭ್ರಮದ ಅಂಗವಾಗಿ ಸಂಸ್ಥೆಯ ಕಾಪು ವಲಯದ ಆಶ್ರಯದಲ್ಲಿ ಆಗಸ್ಟ್ 9 ಭಾನುವಾರ ಕಟಪಾಡಿ ಇತಿಹಾಸ ಪ್ರಸಿದ್ಧ ಕಂಬಳ ಗದ್ದೆಯ ಬಳಿ ಜಿಲ್ಲಾ ವಾರ್ಷಿಕ ಕ್ರೀಡಾ ಕೂಟ -2015, ಕೆಸರ್ದಗೊಬ್ಬುಲು ಆಯೋಜಿಸಲಾಗಿದೆ.

IMG-20150806-WA0042

ಬುಧವಾರ ಕಾಪು ಜೇಸೀಐ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ವಾಸುದೇವ ರಾವ್ ಈ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ಅ.9  ಭಾನುವಾರ ಬೆಳಿಗ್ಗೆ 9 ಗಂಟೆಗೆ ಛಾಯಾಗ್ರಾಹಕರ ಜಿಲ್ಲಾ ವಾರ್ಷಿಕ ಕ್ರೀಡಾಕೂಟವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್‍ಕುಮಾರ್ ಸೊರಕೆ ಉದ್ಘಾಟಿಸಲಿರುವರು.

ಜಿಲ್ಲಾಧ್ಯಕ್ಷ ಕೆ.ವಾಸುದೇವ ರಾವ್ ಅಧ್ಯಕ್ಷತೆ ವಹಿಸುವರು. ಮೀನುಗಾರಿಕೆ ಮತ್ತ ಯುವಜನ ಸೇವಾ, ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್ ಸಹಿತ ವಿವಿಧ ಗಣ್ಯರು ಉಪಸ್ಥಿತರಿರುವರು.

ಕಟಪಾಡಿ ಬಂಟರ ಸಂಘದ ಅಧ್ಯಕ್ಷ ವಿನಯ ಬಲ್ಲಾಳ್ ಕ್ರೀಡಾ ಜ್ಯೋತಿಗೆ ಚಾಲನೆ ನೀಡುವರು. ಮುಂಬೈ ಕಸ್ಷಮ್ಸ್ ಅಸಿಸ್ಟೆಂಟ್ ಕಮಿಷನರ್ ಎರ್ಮಾಳು ರೋಹಿತ್ ಹೆಗ್ಡೆ ಹಾಗೂ ಆರ್ಯಭಟ ಪ್ರಶಸ್ತಿ ವಿಜೇತ ಮನೋಹರ ಶೆಟ್ಟಿಯವರನ್ನು ಸನ್ಮಾನಿಸಲಾಗುವುದು.

ಪತ್ರಿಕಾಗೋಷ್ಠಿಯಲ್ಲಿ ಕಾಪು ವಲಯಾಧ್ಯಕ್ಷ ಪ್ರಮೋದ್ ಸುವರ್ಣ, ಕಾರ್ಯದರ್ಶಿ ಸಂತೋಷ್ ನಾಯ್ಕ್ ಕಾಪು, ಕೋಶಾಧಿಕಾರಿ ಶ್ರೀನಿವಾಸ್ ಯತಾಳ್, ಗೌರವಾಧ್ಯಕ್ಷ ಭಕ್ತಪ್ರಸಾದ್ ಕಾಪು, ಕ್ರೀಡಾ ಕಾರ್ಯದರ್ಶಿ ಉದಯ ಮುಂಡ್ಕೂರು, ಪ್ರಚಾರ ಸಮಿತಿ ಸಂಚಾಲಕ ಬಾಲಕೃಷ್ಣ ಪೂಜಾರಿ ಉಚ್ಚಿಲ, ಕ್ರೀಡಾ ಕೂಟದ ಮೇಲ್ವಿಚಾರಕ ಪ್ರವೀಣ್ ಕುರ್ಕಾಲು ಮತ್ತಿತರಿದ್ದರು.

Leave a Reply