ಕಾಪು: ಬಸ್ಸಿನಲ್ಲಿ ಹೃದಯಾಘಾತದಿಂದ ಸಾವು

ಕಾಪು: ಬಸ್ಸಿನಲ್ಲಿ ಸಂಚರಿಸುತ್ತಿದ್ದ ವೇಳೆ ವ್ಯಕ್ತಿಯೋರ್ವರು ಹೃದಯಘಾತದಿಂದ ಮೃತಪಟ್ಟ ಘಟನೆ ಭಾನುವಾರ ಕಾಪು ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

unnamed

ಮೃತಪಟ್ಟ ವ್ಯಕ್ತಿಯನ್ನು ಒರಿಸ್ಸಾ ಮೂಲದ ಪ್ರಶಾಂತ್ (26) ಎಂದು ಗುರುತಿಸಲಾಗಿದೆ.

ಭಾನುವಾರ ಪ್ರಶಾಂತ್ ನಾಯ್ಕ ಅವರು ಮಂಗಳೂರು ಹೋಗುವುದಕ್ಕಾಗಿ ಉಡುಪಿಯ ಇಂದ್ರಾಳಿಯಲ್ಲಿ  ಎ.ಕೆ.ಎಮ್.ಎಸ್. ಬಸ್ಸನ್ನು ಹತ್ತಿದ್ದು, ಕಾಪು ಮಾರಿಗುಡಿ ಸಮೀಪ ಬಸ್ಸು ತಲುಪಿದ ವೇಳೆ ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ ಎಂದು ಕಾಪು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಕಾಪು ಪೋಲಿಸರು ಅಸ್ವಾಭಾವಿಕ ಸಾವು ಪ್ರಕರಣವನ್ನು ದಾಖಲಿಸಿದ್ದಾರೆ.

Leave a Reply