ಕಾಪು ಶ್ರೀ ಹೊಸಮಾರಿಗುಡಿ ಜೀರ್ಣೋದ್ಧಾರ-ಪುನರುತ್ಥಾನಕ್ಕೆ ಶಿಲಾನ್ಯಾಸ

ಕಾಪು : ಸುಮಾರು 25 ಕೋ. ರೂ. ವೆಚ್ಚದಲ್ಲಿ ಸಮಗ್ರವಾಗಿ ಪುನರ್ ನಿರ್ಮಾಣಗೊಳ್ಳಲಿರುವ ಕಾಪು ಶ್ರೀ ಹೊಸ ಮಾರಿಗುಡಿಯ ಪ್ರಥಮ ಹಂತದ ಜೀರ್ಣೋದ್ಧಾರ-ಪುನರುತ್ಥಾನ ಕಾರ್ಯಕ್ಕೆ ಉಡುಪಿ ಶ್ರೀ ಪಲಿಮಾರು ಮಠಾ„ೀಶರಾದ ಶ್ರೀ ವಿದ್ಯಾ„ೀಶ ಶ್ರೀಪಾದರ ಉಪಸ್ಥಿತಿಯಲ್ಲಿ ನಗರಾಭಿವೃದ್ಧಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ / ಮಾರಿಗುಡಿ ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷ ವಿನಯ ಕುಮಾರ್ ಸೊರಕೆ ಮತ್ತು ದಕ್ಷಾ ವಿ. ಸೊರಕೆ ದಂಪತಿ ಶಿಲಾನ್ಯಾಸ ನೆರವೇರಿಸಿದರು.

DSC_0044 DSC_0138 DSC_0141 DSC_0142 DSC_0158

ಸಮಾರಂಭದಲ್ಲಿ ಆಶೀರ್ವಚನ ನೀಡಿದ ಉಡುಪಿ ಶ್ರೀ ಪಲಿಮಾರು ಮಠಾ„ೀಶರಾದ ಶ್ರೀ ವಿದ್ಯಾ„ೀಶ ಶ್ರೀಪಾದರು ಮಾತನಾಡಿ, ರಕ್ಷಣಾಪುರ ಖ್ಯಾತಿಯ ಕಾಪು ಮಾರಿಯಮ್ಮನ ಸಾನಿಧ್ಯವನ್ನು ಸಮಗ್ರವಾಗಿ ಜೀರ್ಣೋದ್ಧಾರ-ಪುನರುತ್ಥಾನಗೊಳಿಸುವ ನಿಟ್ಟಿನಲ್ಲಿ ಬೃಹತ್ ಮೊತ್ತದ ಯೋಜನೆ ರೂಪಿತವಾಗಿದ್ದು, ಅಮ್ಮನ ಆಲಯ ನಿರ್ಮಾಣ ಕಾರ್ಯವು ಅತ್ಯಂತ ವೇಗವಾಗಿ, ಸುಂದರವಾಗಿ ಮತ್ತು ಕಲಾತ್ಮಕವಾಗಿ ಮೂಡಿ ಬರಲಿ ಎಂದು ಆಶೀರ್ವಚಿಸಿದರು.

ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕಾಪು ಮಾರಿಯಮ್ಮನ ದೇವಸ್ಥಾನದ ಪಾವಿತ್ರ್ಯತೆಯನ್ನು ಉಳಿಸಿಕೊಂಡು ಸಮಗ್ರವಾಗಿ ಪುನರುತ್ಥಾನಗೊಳಿಸುವ ಯೋಜನೆ ರೂಪಿಸಲಾಗಿದೆ. ಉದ್ದೇಶಿತ ಯೋಜನೆಯಂತೆ ಕಾಪು ಮಾರಿಯಮ್ಮನ ಸಾನಿಧ್ಯವೂ ಕೂಡಾ ಪುನರ್ ನಿರ್ಮಾಣಗೊಳ್ಳುತ್ತದೆ ಎಂಬ ವಿಶ್ವಾಸವಿದೆ. ರಾಜ್ಯ ಸರಕಾರ ಧಾರ್ಮಿಕ ದತ್ತಿ ಇಲಾಖೆಯ ಮೂಲಕವಾಗಿ 75 ಲಕ್ಷ ರೂ. ಅನುದಾನವನ್ನು ಬಿಡುಗಡೆಗೊಳಿಸಿದ್ದು, ಶ್ರೀ ಮಾರಿಗುಡಿಯ ಜೀರ್ಣೋದ್ಧಾರ-ಪುನರ್ ನಿರ್ಮಾಣಕ್ಕಾಗಿ ಒದಗಿಸಿಕೊಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನ ಆಗಮ ವಿದ್ವಾಂಸ ವೇ. ಮೂ. ಕುತ್ಯಾರು ಕೇಂಜ ಶ್ರೀಧರ ತಂತ್ರಿ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರುಗಳಾದ ಸುಧಾಕರ ಹೆಗ್ಡೆ ಮುಂಬಯಿ, ರವಿ ಸುಂದರ್ ಶೆಟ್ಟಿ ಮುಂಬಯಿ, ಕಾಪು ಬೀಡು ಅನಿಲ್ ಬಲ್ಲಾಳ್ ಶುಭಾಶಂಸನೆಗೈದರು.

ಮಾರಿಗುಡಿ ಅಭಿವೃದ್ಧಿ ಸಮಿತಿಯ ಗೌ. ಸಲಹೆಗಾರರಾದ ವಸಂತ ವಿ. ಸಾಲ್ಯಾನ್, ಕೆ. ಪಿ. ಆಚಾರ್ಯ, ಶಶಿಧರ ಶೆಟ್ಟಿ ಎರ್ಮಾಳ್, ಸಚ್ಚಿದಾನಂದ ಹೆಗ್ಡೆ ಬಾವುಗುತ್ತು, ಡಾ| ಕೆ. ಪ್ರಭಾಕರ ಶೆಟ್ಟಿ, ರಾಘವೇಂದ್ರ ತಂತ್ರಿ, ಸುಬ್ರಹ್ಮಣ್ಯ ಶೆಟ್ಟಿ ಮಲ್ಲಾರು, ನಡಿಕೆರೆ ರತ್ನಾಕರ ಶೆಟ್ಟಿ , ಉಪಾಧ್ಯಕ್ಷರಾದ ಮನೋಹರ್ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಮಾಧವ ಪಾಲನ್, ಡಾ| ದೇವಿಪ್ರಸಾದ್ ಶೆಟ್ಟಿ , ಗಂಗಾಧರ ಸುವರ್ಣ, ಕೋಶಾ„ಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಪ್ರಮುಖರಾದ ಸುರೇಶ್ ಶೆಟ್ಟಿ ಗುರ್ಮೆ, ಹಳೇ ಮಾರಿಗುಡಿಯ ಆಡಳಿತ ಮೊಕ್ತೇಸರ ಶ್ರೀಧರ ಶೆಣೈ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಮೋಹನ ಬಂಗೇರ, ಜಿ. ಪಂ. ಸದಸ್ಯ ಕಟಪಾಡಿ ಶಂಕರ ಪೂಜಾರಿ, ಬÉೈರುಗುತ್ತು ರಮೇಶ್ ಶೆಟ್ಟಿ, ಆಡಳಿತ ಮಂಡಳಿಯ ಸದಸ್ಯರಾದ ವೇ. ಮೂ. ಶ್ರೀನಿವಾಸ ತಂತ್ರಿ, ಶೇಖರ ಸಾಲ್ಯಾನ್, ಜಗದೀಶ್ ಬಂಗೇರ, ಸುಧಾಮ ಶೆಟ್ಟಿ, ವಿಜಯಲಕ್ಷ್ಮೀ ಆಚಾರ್ಯ, ಚಂದ್ರಶೇಖರ್ ಅಮೀನ್, ನಾಗವೇಣಿ, ವಾಸು, ಶಿಲ್ಪಿ ಪಯ್ಯನ್ನೂರು ಶಶಿಧರನ್ ಆಚಾರ್ಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ / ದೇವಿಪ್ರಸಾದ್ ಕನ್‍ಸ್ಟ್ರಕ್ಷನ್ಸ್‍ನ ಆಡಳಿತ ನಿರ್ದೇಶಕ ವಾಸುದೇವ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಹೊಸ ಮಾರಿಗುಡಿಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ ವಂದಿಸಿದರು. ನಿರ್ಮಲ್ ಕುಮಾರ್ ಹೆಗ್ಡೆ ಮತ್ತು ನೀಲಾನಂದ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Please enter your comment!
Please enter your name here