ಕಾಪು: ಸಾಲ್ಯಾನ್‌ ಪಾರ್ಥಿವ ಶರೀರಕ್ಕೆ ಹೂಹಾರ ಹಾಕುವ ನೆಪದಲ್ಲಿ ಹಲವರ ಕಿಸೆಗೆ ಕತ್ತರಿ; ಪಿಕ್‌ಪಾಕೆಟರ್‌ ವಶಕ್ಕೆ

ಕಾಪು: ವಸಂತ ವಿ.ಸಾಲ್ಯಾನ್‌ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ವೀಕ್ಷಣೆಗೆ ಕಾಪುಪೇಟೆಯಲ್ಲಿ ಇಟ್ಟಿದ್ದ ವೇಳೆ ಪಾರ್ಥಿವ ಶರೀರಕ್ಕೆ ಹೂಹಾರ ಹಾಕುವ ನೆಪದಲ್ಲಿ ಬಂದ ವ್ಯಕ್ತಿಯೊಬ್ಬ ಹಲವರ ಕಿಸೆಗೆ ಕತ್ತರಿ ಹಾಕಿದ ಘಟನೆ ನಡೆಯಿತು.
ಒಬ್ಬರು ತನ್ನ ಜೇಬಿನಿಂದ 32,000 ರೂ. ಕಳೆದು ಕೊಂಡಿದ್ದರು. ಈ ಸಂದರ್ಭ ಕಟಪಾಡಿಯಲ್ಲಿ ಸಾಲ್ಯಾನ್‌ ಅವರ ಮನೆ ಸಮೀಪವೂ ಪರ್ಸ್‌ ಕದಿಯಲು ಯತ್ನಿಸಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದರು. ಈತ ತನ್ನ ಹೆಸರನ್ನು ಗುರುಪ್ರಸಾದ್‌ ಎಂದು ಹೇಳಿಕೊಂಡಿದ್ದಾನೆ ಕಟಪಾಡಿ ಹೊರಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ

Leave a Reply

Please enter your comment!
Please enter your name here