ಕಾರು ಮತ್ತು ಕೆಎಸ್ ಆರ್ ಟಿಸಿ ಬಸ್ಸು ಅಫಘಾತಕ್ಕೆ ಒಂದು ಬಲಿ

ಕಾರು ಮತ್ತು ಕೆಎಸ್ ಆರ್ ಟಿಸಿ ಬಸ್ಸು ಅಫಘಾತಕ್ಕೆ ಒಂದು ಬಲಿ

ಮಂಗಳೂರು: ಕಾರು ಮತ್ತು ಕೆಎಸ್ ಆರ್ ಟಿಸಿ ಬಸ್ಸಿನ ನಡುವೆ ನಡೆದ ಅಫಘಾತದಲ್ಲಿ ಕಾರು ಚಾಲಕ ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ನಗರದ ವಳಚ್ಚಿಲ್ ಬಳಿ ಮಂಗಳವಾರ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಬಡ್ಲಾ ನಿವಾಸಿ ವಸಂತ್ ರಾಮ್ ಶೆಟ್ಟಿ (86) ಎಂದು ಗುರುತಿಸಲಾಗಿದೆ

image001accident-ksrtc-bus-20160628-001 image002accident-ksrtc-bus-20160628-002 image003accident-ksrtc-bus-20160628-003 image004accident-ksrtc-bus-20160628-004 image005accident-ksrtc-bus-20160628-005

ಮಾಹಿತಿಗಳ ಪ್ರಕಾರ ಕೆ ಎಸ್ ಆರ್ ಟಿ ಸಿ ಬಸ್ಸೊಂದು ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದಕ್ಕಾಗಿ ವಳಚ್ಚಿಲ್ ಬಳಿ ನಿಂತಿದ್ದು, ಹಿಂದಿನಿಂದ ಬರುತ್ತಿದ್ದ ಆಲ್ಟೋ ಕಾರೊಂದು ಬಸ್ಸು ನಿಂತಿರುವುದನ್ನು ಗಮನಿಸದೆ ಬಂದು ಗುದ್ದಿದ್ದು, ಪರಿಣಾಮವಾಗಿ ಕಾರಿನ ಚಾಲಕ ತೀವೃ ಗಾಯಗೊಂಡು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ ಎನ್ನಲಾಗಿದೆ.

ಘಟನೆಯ ವೇಳೆ ಪ್ರತ್ಯಕ್ಷದರ್ಶಿಯಾಗಿದ್ದ ಮಾಧ್ಯಮ ವ್ಯಕ್ತಿಯೋರ್ವರು ಪೋಲಿಸರಿಗೆ ಕೂಡಲೇ ಮಾಹಿತಿ ತಿಳಿಸಿದ್ದು, ಅರ್ಧ ಗಂಟೆಯಾದರೂ ಕೂಡ ಪೋಲಿಸರು ಸ್ಥಳಕ್ಕೆ ಬರಲಿಲ್ಲ ಎಂದು ತಿಳಿದು ಬಂದಿದೆ.

Leave a Reply

Please enter your comment!
Please enter your name here