ಕಾರ್ಕಳ : ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಜನಸಂಪರ್ಕ ಸಭೆ

ಕಾರ್ಕಳ : ಕಾರ್ಕಳ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ 2015-16ನೆ ಸಾಲಿನಲ್ಲಿ 58.85ಕೋಟಿ ರೂ. ವೆಚ್ಚದ ಒಟ್ಟು 72 ಕಾಮಗಾರಿ ಗಳಲ್ಲಿ 52 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಣ್ಣ ನೀರಾ ವರಿ ಇಲಾಖೆಗೆ ಸಂಬಂಧಿಸಿದ 35 ಕೋಟಿ ರೂ. ವೆಚ್ಚದ 29 ಕಾಮಗಾರಿ ಗಳನ್ನು, ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ 21 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಯನ್ನು ನಡೆಸಲಾಗಿದೆ ಎಂದು ರಾಜ್ಯ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.
ಕಾರ್ಕಳ ಮಂಜುನಾಥ ಪೈ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ಕಾರ್ಕಳ ತಾಲೂಕು ಜನಸಂಪರ್ಕ ಸಭೆಯ ಉದ್ಘಾಟನೆ ಹಾಗೂ ಸರಕಾರದ ವಿವಿಧ ಇಲಾಖೆಗಳ ಸವಲತ್ತುಗಳ ವಿತರಣೆಯನ್ನು ನೆರವೇರಿಸಿ ಅವರು ಮಾತ ನಾಡುತಿದ್ದರು.
94ಸಿ ಕಾಯಿದೆಯಡಿ ಹಕ್ಕುಪತ್ರ ವಿತರಣೆ ಕಾರ್ಯ ಜಿಲ್ಲೆಯಲ್ಲಿ ಕುಂಠಿತ ಗೊಂಡಿದೆ. ಈ ಬಗ್ಗೆ ಶೀಘ್ರವೇ ಕ್ರಮ ಕೈಗೊಂಡು ವಿತರಿಸುವ ಕಾರ್ಯ ಮಾಡ ಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ದ.ಕ. ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದ ಉದ್ಯೋಗ ಮೇಳವನ್ನು ಉಡುಪಿ ಜಿಲ್ಲೆಯಲ್ಲೂ ನಡೆ ಸಲು ಉz್ದÉೀಶಿಸಲಾಗಿದೆ. ಈ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗವನ್ನು ಒದಗಿಸಿಕೊಡಲಾಗುವುದು ಎಂದರು.
ಕಸ್ತೂರಿ ರಂಗನ್ ವರದಿ ಬಗ್ಗೆ ಸ್ಥಳೀಯರಲ್ಲಿ ಆತಂಕ ಇದ್ದು, ಈ ಕುರಿತು ಗ್ರಾಮಸಭೆಗಳನ್ನು ನಡೆಸಿ ಸ್ಥಳೀಯ ಅಭಿಪ್ರಾಯ ಪಡೆದುಕೊಳ್ಳಲಾಗಿದೆ. ಈ ಕುರಿತು ಅರಣ್ಯ ಸಚಿವ ರಮಾನಾಥ ರೈ ಮೂಲಕ ಇನ್ನೊಂದು ಬಾರಿ ಕೇಂದ್ರಕ್ಕೆ ವರದಿ ಸಲ್ಲಿಸಲಾಗುತ್ತಿದೆ. ಈ ಸಂಬಂಧ ಈಗ ಇರುವ ಇಕೋಲಜಿಕಲ್ ಸೆನ್ಸಿಟಿವ್ ಝೋನ್‍ನ್ನು 10ಕಿ.ಮೀ. ವ್ಯಾಪ್ತಿಯಿಂದ ಒಂದು ಕಿ.ಮೀ. ವ್ಯಾಪ್ತಿಗೆ ಇಳಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯ ಸರಕಾರ ಚುನಾವಣೆಗೆ ಮೊದಲು ನೀಡಿದ 168 ಭರವಸೆಗಳಲ್ಲಿ ಈಗಾಗಲೇ 105 ಭರವಸೆಗಳನ್ನು ಈಡೇರಿಸಿದೆ. ಪಡಿತರ ಚೀಟಿ ವ್ಯವಸ್ಥೆಯನ್ನು ಸರಳೀಕರಣಗೊಳಿಸಿ ವಿತರಿಸುವ ಕಾರ್ಯ ಮಾಡಲಾಗುತ್ತಿದೆ. ಸ್ತ್ರೀಶಕ್ತಿ ಗುಂಪು ಗಳಿಗೆ ಶೇ.6ರ ಬಡ್ಡಿದರದಲ್ಲಿ 2 ಲಕ್ಷ ರೂ. ವರೆಗೆ ಹಾಗೂ ರೈತರಿಗೆ ಸಹಕಾರಿ ಸಂಘಗಳ ಮೂಲಕ 3ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ವನ್ನು ನೀಡಲಾಗು ತ್ತಿದೆ ಎಂದು ಅವರು ತಿಳಿಸಿದರು.
ಕಾರ್ಕಳ ಶಾಸಕ ಸುನೀಲ್ ಕುಮಾರ್, ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್, ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಪಂ ಅಧ್ಯಕ್ಷ ಸವಿತಾ ಶಿವಾನಂದ ಕೋಟ್ಯಾನ್, ಸದಸ್ಯ ಉದಯ ಕೋಟ್ಯಾನ್, ಕಾರ್ಕಳ ಸಹಾಯಕ ಪೆÇಲೀಸ್ ಅಧೀಕ್ಷಕಿ ಸುಮನ್, ಕಾರ್ಕಳ ತಾಪಂ ಅಧ್ಯಕ್ಷೆ ವಿಜಯ ಕುಮಾರಿ, ಉಪಾಧ್ಯಕ್ಷೆ ಮಾಲಿನಿ ಶೆಟ್ಟಿ, ಪುರ ಸಭೆ ಅಧ್ಯಕ್ಷೆ ರೆಹಮತ್ ಶೇಖ್, ಸುಪ್ರೀತ್ ಶೆಟ್ಟಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ , ಭಾಗ್ಯಲಕ್ಷ್ಮಿ 20, ಸ್ತ್ರೀ ಶಕ್ತಿ ಸಂಘಗಳ ಆವರ್ತ ನಿಧಿ 13, ಜನನಿ ಸುರಕ್ಷಾ ಕಿಟ್ 5, ಶಿಕ್ಷಣ ಇಲಾಖೆಯಿಂದ ಹೆಬ್ರಿ ಶಾಲೆಗೆ 1 ಲಕ್ಷ ಅನುದಾನ, ತೋಟಗಾರಿಕಾ ಬೆಳೆಗಾರರಿಗೆ ಸಹಾಯಧನ 8, 2 ಪವರ್ ಟಿಲ್ಲರ್, 3 ಹಾರ್ವೆಸ್ಟ್ ಯಂತ್ರ, 2 ಪವರ್ ರೀಡರ್, ಕಂದಾಯ ಇಲಾಖೆಯಿಂದ 94 ಸಿಎಡಿ 30 ಮಂದಿಗೆ ಹಕ್ಕು ಪತ್ರ, ಭೂ ಸುಧಾರಣಾ ಹಕ್ಕು ಪತ್ರ 1, 83 ಪಡಿತರ ಚೀಟಿ, 141 ಮಂದಿಗೆ ಪಿಂಚಣಿ, ಪುರಸಭೆಯಿಂದ 12 ಮಂದಿಗೆ ಅಡುಗೆ ಯಂತ್ರ ವಿತರಣೆ, ತಾಲೂಕು ಪಂಚಾಯತ್ ನಿಂದ 56 ಮಂದಿಗೆ ನಿವೇಶನ ಹಂಚಿಕೆ, ಆಶ್ರಯ ಯೋಜನೆ ಸಾಲ ಮನ್ನಾ ದೃಢಪತ್ರ 20, ಬಿಸಿಎಂ ಇಲಾಖೆಯಿಂದ ಕುಕ್ಕುಂದೂರು ಕುಲಾಲ್ ಸುಧಾರಕ ಸಂಘ ನಿರ್ಮಾಣಕ್ಕೆ 25 ಲಕ್ಷ ರೂ ಸಹಾಯಧನ, ಸಮಾಜ ಕಲ್ಯಾಣ ಇಲಾಖೆಯಿಂದ 3 ಹೊಲಿಗೆ ಯಂತ್ರ, ಸಮಾಜಿಕ ಅರಣ್ಯ ಇಲಾಖೆಯಿಂದ ಗಿರಿಜನರಿಗೆ ಸೋಲಾರ್ ಲ್ಯಾಂಪ್ 3, ಪಶುಪಾಲನಾ ಇಲಾಖೆಯಿಂದ 11 ಮಂದಿಗೆ 3.60 ಲಕ್ಷ ಸಹಾಯಧನ ಸೇರಿದಂತೆ 12 ಇಲಾಖೆಗಳ ಒಟ್ಟು 423 ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ಕಾರ್ಕಳ ತಹಶೀಲ್ದಾರ್ ರಾಘ ವೇಂದ್ರ ಸ್ವಾಗತಿಸಿದರು. ಬಳಿಕ ನಡೆದ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲಾಯಿತು

Leave a Reply