ಕಾವೂರು: ಪತಿಯಿಂದ ಪತ್ನಿಯ ಕೊಲೆ

98

ಕಾವೂರು: ಪತಿಯಿಂದ ಪತ್ನಿಯ ಕೊಲೆ

ಮಂಗಳೂರು: ಪತ್ನಿಯನ್ನು ಪತಿಯು ಮಾರಕಾಯುಧಗಳಿಂದ ಕಡಿದು ಕೊಲೆಗೈದ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇರೆಬೈಲು ಬೋರುಗುಡ್ಡೆ ಎಂಬಲ್ಲಿ ಕಳೆದ ರಾತ್ರಿ ನಡೆದಿದೆ.

ಮೃತರನ್ನು ಕೂಲಿ ಕಾರ್ಮಿಕಳಾದ ಮಂಜುಳಾ(38) ಎಂದು ಗುರುತಿಸಲಾಗಿದೆ. ಈಕೆಯ ಪತಿ ಶರಣಪ್ಪ ಕೊಲೆ ಆರೋಪಿಯಾಗಿದ್ದಾನೆ.

ಕುಡಿತದ ಚಟ ಹೊಂದಿದ್ದ ಶರಣಪ್ಪ ನಿನ್ನೆ ರಾತ್ರಿ ಪತ್ನಿ ಮಂಜುಳಾರನ್ನು ಕತ್ತಿ ಮತ್ತು ಚೂರಿಯಿಂದ ಇರಿದು ಕೊಲೆಗೈದಿದ್ದಾನೆ ಎಂದು ಹೇಳಲಾಗಿದೆ.

ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.