ಕಾಸರಗೋಡು: ರಸ್ತೆ ಅಫಘಾತದಲ್ಲಿ ಇಬ್ಬರು ಯುವಕರ ಸಾವು

ಕಾಸರಗೋಡು: ಮಡಿಕೇರಿ ಸಮೀಪ ಸ್ಕೂಟರ್‌ ಮತ್ತು ಬಸ್‌ ಢಿಕ್ಕಿ ಹೊಡೆದ ಪರಿಣಾಮ ಕಾಞಂಗಾಡಿನ ಇಬ್ಬರು ಯುವಕರು ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಮೃತಪಟ್ಟವರನ್ನು ಕಾಞಂಗಾಡ್‌ ಸೌತ್‌ನ ದೀಪು (25) ಮತ್ತು ವಿಜೇಶ್‌ (25) ಎಂದು ಗುರುತಿಸಲಾಗಿದೆ. ಪೋಲಿಸ್ ಮೂಲಗಳ ಪ್ರಕಾರ ಮೈಸೂರಿನಲ್ಲಿ ಉದ್ಯೋಗ ಸಂದ ರ್ಶನಕ್ಕೆಂದು ಇಬ್ಬರೂ ಕೂಡಾ ನಾಲ್ಕು ದಿನಗಳ ಹಿಂದೆ ತೆರಳಿದ್ದು, ಅಲ್ಲಿಂದ ಸ್ಕೂಟರಿನಲ್ಲಿ ವಾಪಾಸಾಗುತ್ತಿದ್ದ ವೇಳೆ ಪಿರಿಯಾಪಟ್ಟಣ ಬಳಿ ಕೆಎಸ್ ಆರ್ ಟಿಸಿ ಬಸ್ಸಿಗೆ ಸ್ಕೂಟರ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಬಳಿಯಿದ್ದ ದಾಖಲೆಪತ್ರಗಳಿಂದ ಊರಿನ ಬಗ್ಗೆ ಮಾಹಿತಿ ಲಭ್ಯವಾಗಿದೆ. ದೀಪು ಕಾಞಂಗಾಡ್‌ನ‌ ಕೊವ್ವಲ್‌ಪಳ್ಳಿಯಲ್ಲಿ ಪೋಟೋ ಗ್ರಾಫ‌ರ್‌ ಆಗಿದ್ದರು. ವಿಜೇಶ್‌ ಕಾಂಞಂಗಾಡ್‌ನ‌ಲ್ಲಿ ಟ್ಯಾಕ್ಸಿ ಚಾಲಕರಾಗಿ ದುಡಿಯುತ್ತಿದ್ದರು ಎನ್ನಲಾಗಿದೆ.

Leave a Reply