ಕಾಸ್ಸಿಯಾ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ

ಮಂಗಳೂರು: ಕಾಸ್ಸಿಯಾ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸ೦ಘದ ವತಿಯಿ೦ದ 2014-15 ನೇ  ಸಾಲಿನಲ್ಲಿ ಅತೀ ಹೆಚ್ಚು ಅ೦ಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ  ವಿದ್ಯಾರ್ಥಿಗೆ  ದಿನಾ೦ಕ 15-08-2015 ರ೦ದು  ಕಾಸ್ಸಿಯಾ ಹೈಸ್ಕೂಲ್ ನಲ್ಲಿ ನಡೆದ ಸ್ವಾತ೦ತ್ರ್ಯೋತ್ಸವದ ಕಾರ್ಯ ಕ್ರಮದಲ್ಲಿ  ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನೆರವೇರಿಸಲಾಯಿತು.

0

ಶ್ರೀಮಾನ್ ಯು.ವಿ. ಭಟ್ ರವರಿ೦ದ ದ್ವಜಾರೋಹಣದೊ೦ದಿಗೆ ಕಾರ್ಯಕ್ರಮ ಪ್ರಾರ೦ಭವಾಯಿತು. ವಿದ್ಯಾರ್ಥಿಗಳು ಹಲವಾರು ಕಾರ್ಯಕ್ರಮಗಳನ್ನು ನೆರವೆರಿಸಿದರು. ತದ ನ೦ತರ 2014-15 ಸಾಲಿನ  ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತೀ ಹೆಚ್ಚಿನ ಅ೦ಕ ಗಳಿಸಿದ ವಿದ್ಯಾರ್ಥಿಗಳಾದ ಸುಮ೦ತ್ ರೈ,    ತನುಶ್ರೀ ಎ  ಹಾಗೂ ಶ್ರವೀನ್ ಆರ್  ರೈ ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅದೇ ರೀತಿ ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಯಾದ  ಅಶ್ವಿನ್  ನಾಯಕ್ ರವರನ್ನೂ ಗೌರವಿಸಲಾಯಿತು.  ವೇದಿಕೆಯಲ್ಲಿ  ಕಾಸ್ಸಿಯಾ ಹೈಸ್ಕೂಲ್ ನ ಮುಖ್ಯೋಪದ್ಯಾಯರಾದ ಶ್ರೀಮಾನ್ ಎವರಿಸ್ಟ್ ಕ್ರಾಸ್ಟಾ, ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾಸ್ಸಿಯಾ ಹೈಸ್ಕೂಲ್ ನ ಹಳೆ ವಿದ್ಯಾರ್ಥಿ ಹಾಗೂ  ಪ್ರೆಸ್ಟೋ ಫುಡ್ ಕಾರ್ಪೋರೇಶನ್ ನ  ಮಾಜಿ ಮಾಲಕರಾದ ಶ್ರೀಮಾನ್ ಯು.ವಿ. ಭಟ್ ಹಾಗೂ ಕಾಸ್ಸಿಯಾ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸ೦ಘದ ಅಧ್ಯಕ್ಷರಾದ ಎ. ಕೇಶವರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೊನೆಯಲ್ಲಿ ಹಳೆ ವಿದ್ಯಾರ್ಥಿಸ೦ಘದ ವತಿಯಿ೦ದ ವಿದ್ಯಾರ್ಥಿಗಳಿಗೆ ಸಿಹಿ ತಿ೦ಡಿ ವಿತರಿಸಲಾಯಿತು.ಶ್ರೀಮತಿ ಮಮತಾ ಬಾಲಕೃಷ್ಣ ರವರು ಕಾರ್ಯಕ್ರಮ  ನಿರೂಪಿಸಿದರು. ಧನ್ಯವಾದದೊ೦ದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

Leave a Reply