ಕುಂದಾಪುರ: ಅಡಿಕೆ ಕಳ್ಳರ ಬಂಧನ; ರೂ 1.90 ಲಕ್ಷ ಮೌಲ್ಯದ ಸೊತ್ತು ವಶ

ಕುಂದಾಪುರ: ಶಂಕರನಾರಾಯಣ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಡಿಕೆ ಕಳ್ಳತನದ ಆರೋಪದಡಿಯಲ್ಲಿ ಪೋಲಿಸರು ಮೂರು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರನ್ನು ಗಣೇಶ ಕುಲಾಲ್ (20), ಪಡುಬೈಲ್ಲು ಚೇರ್ಕಿ 76 ಹಾಲಾಡಿ ಗ್ರಾಮ ಕುಂದಾಪುರ, ಅಭಿಲಾಷ (20), ಗೊರ್ಕೊಡು ರಟ್ಟಾಡಿ ಗ್ರಾಮ & ಅಂಚೆ ಕುಂದಾಫುರ, ವಸಂತ ಮೊಗವೀರ (20), ಮೂಕಾಂಬಿಕ ನಿಲಯ ಕಕ್ಕುಂಜೆ ಕ್ರಾಸ್ 28 ಹಾಲಾಡಿ ಗ್ರಾಮ ಕುಂದಾಫುರ ತಾಲೂಕು ಎಂದು ಗುರುತಿಸಲಾಗಿದೆ.
ಘಟನೆಯ ವಿವರ ಫೆಬ್ರವರಿ 14 ರಂದು ವಿಜಯ ಕುಮಾರ ಹೈಕಾಡಿ ಹಿಲಿಯಾಣ ಗ್ರಾಮ ಉಡುಪಿ ತಾಲೂಕು ಇವರ ಮನೆಯಾದ ಉಡುಪಿ ತಾಲೂಕಿನ ಹಿಲಿಯಾಣ ಗ್ರಾಮದ ಹೈಕಾಡಿ ಎಂಬಲ್ಲಿ ಮನೆಯ ಎದುರುಗಡೆ ಗದ್ದೆಯ ಬಯಲಿನಲ್ಲಿ ಒಣಗಿಸಲು ಹಾಕಿದ ಸುಮಾರು 20,000/- ರೂಪಾಯಿ ಮೌಲ್ಯದ 2 ಕ್ಷಿಂಟಾಲ್ ಅಡಿಕೆಯನ್ನು ಆರೋಪಿಗಳು ಕಳ್ಳತನ ಮಾಡಿದ್ದು ಸೂಕ್ತ ಮಾಹಿತಿಯಾಧರಿಸಿ ಪೋಲಿಸರು ಬಂಧಿಸಿದ್ದಾರೆ. ಬಂಧಿತರನ್ನು ವಿಚಾರಣೆ ನಡೆಸಿದ ವೇಳೆ ಆರೋಪಿತರು ಗಾವಳಿ, ಹುತ್ತರ್ಕಿ , ಹಿಲಿಯಾಣ ಗ್ರಾಮದ ಕಾಸಾಡಿ, ಹಿಲಿಯಾಣ ಗ್ರಾಮದ ಅಮ್ರಕಲ್ಲು ರಟ್ಟಾಡಿ ಕಡೆ ಕಳವು ಮಾಡಿದ ಅಡಿಕೆ ಸುಮಾರು 4 ಕ್ವಿಂಟಾಲ್ ಅಡಿಕೆ ಹಾಗೂ 2015 ರ ಜೂನ್ ತಿಂಗಳಲ್ಲಿ ಕುಂದಾಪುರ ವಿನಾಯಕ ಟಾಕೀಸ್ ಬಳಿ ಕಳವು ಮಾಡಿದ ಹೀರೊ ಹೊಂಡಾ ಸ್ಪ್ಲೆಂಡರ್‌ ಮೋಟಾರ್ ಸೈಕಲ್, ನವೆಂಬರ ತಿಂಗಳ ಕೊಡಿ ಹಬ್ಬದಂದು ಕೊಟೇಶ್ವರದಲ್ಲಿ ಕಳವು ಮಾಡಿದ ಹೀರೊ ಹೊಂಡಾ ಸ್ಪ್ಲೆಂಡರ್‌ ಮೋಟಾರ್ ಸೈಕಲ್, ಹಾಗೂ ಅದೇ ದಿನ ಬ್ರಹ್ಮಾವರ ವಿಠಲ ಮೆಡಿಕಲ್ ಬಳಿ ಕಳವು ಮಾಡಿದ ಸ್ಟಾರ್ ಸಿಟಿ ಮೋಟಾರ್ ಸೈಕಲ್ ಆರೋಪಿತರಿಂದ ವಶಪಡಿಸಿಕೊಳ್ಳಲಾಗಿದೆ. ಸೊತ್ತುಗಳ ಒಟ್ಟು ಮೌಲ್ಯ ಸುಮಾರು 1.90 ಲಕ್ಷ, ಆರೋಪಿಗಳು ಕಳವು ಮಾಡಿದ ಮೋಟಾರ್ ಸೈಕಲ್‌‌ಗಳ ನಂಬ್ರ ಬದಲಾವಣೆ ಮಾಡಿ ಬೇರೆ ನಂಬ್ರ ಪ್ಲೇಟ್‌ ಅಳವಡಿಸಿಕೊಂಡು ತಿರುಗಾಡುತ್ತಿದ್ದರು.
ಈ ಪ್ರಕರಣದ ಕಾರ್ಯಾಚರಣೆಯನ್ನು ಪೊಲೀಸ್‌ ಅಧೀಕ್ಷಕರಾದ ಶ್ರೀ ಕೆ. ಅಣ್ಣಾಮಲೈ ಐಪಿಎಸ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸಂತೋಷ ಕುಮಾರ್ ಶೆಟ್ಟಿ ಇವರ ಮಾರ್ಗದರ್ಶನದಲ್ಲಿ ಕುಂದಾಪುರ ಉಪ–ವಿಭಾಗದ ಪೊಲೀಸ್ ಉಪಾಧೀಕ್ಷರಾದ ಮಂಜುನಾಥ ಶೆಟ್ಟಿ ಹಾಗೂ ಕುಂದಾಫುರ ವೃತ್ತ ನಿರೀಕ್ಷಕರಾದ ದಿವಾಕರ , ಪಿ.ಎಮ್‌ ಇವರ ನೇತೃತ್ವದಲ್ಲಿ ಶಂಕರನಾರಯಣ ಪೊಲೀಸ್ ಠಾಣಾ ಪಿಎಸ್ಐ ದೇಜಪ್ಪ ಹಾಗೂ ಸಿಬ್ಬಂದಿಯವರಾದ ಶುಭಕರ, ದಿನಕರ, ಗೋಪಾಲಕೃಷ್ಣ, ರಾಜು ನಾಯ್ಕ , ಪ್ರದೀಪ ಶೆಟ್ಟಿ, ಅಜಿತ್ ಹೆಗ್ಡೆ , ಪ್ರಭಾಕರ ಶೆಟ್ಟಿ ಇವರು ನಡೆಸಿರುತ್ತಾರೆ.

Leave a Reply