ಕುಂದಾಪುರ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಆರೋಪಿಯ ಬಂಧನ

ಕುಂದಾಪುರ: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪದ ಮೇಲೆ ಯುವಕನೊರ್ವನನ್ನು ಬೈಂದೂರು ಪೊಲಿಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಭಟ್ಕಳದ ಮುಂಡಳ್ಳ ನಿವಾಸಿ ಅಬ್ದುಲ್ ಪಜುರಮ್ (21) ಎಂದು ಗುರುತಿಸಲಾಗಿದೆ.

ಮಾಹಿತಿಗಳ ಪ್ರಕಾರ ಆರೊಪಿ ಅಬ್ದುಲ್ ಸಂತ್ರಸ್ತ ಬಾಲಕಿ ಮನೆಯವರಿಗೆ ಪರಿಚಯದ ವ್ಯಕ್ತಿಯಾಗಿದ್ದು ಇದರ ಲಾಭವನ್ನು ಪಡೆದು ಪ್ರತಿನಿತ್ಯ ಎನ್ನುವಂತೆ ಯುವತಿಯ ಮನೆಗೆ ಬರುತ್ತಿದ್ದು, ಮನೆಯಲ್ಲಿ ಯಾರು ಇಲ್ಲದೆ ವೇಳೆಯಲ್ಲಿ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದನು ಎನ್ನಲಾಗಿದೆ. ಅಲ್ಲದೆ ಇದನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಕೂಡ ಹಾಕಿದ್ದನು. ಬಾಲಕಿಯ ದೇಹದಲ್ಲಿ ಆದ ಬದಲವಾವಣೆಯನ್ನು ಗಮನಿಸಿ ಹೆತ್ತವರು ಪ್ರಶ್ನಿಸಿದಾಗ ಸತ್ಯ ಹೊರಬಿದ್ದಿದೆ ಎನ್ನಲಾಗಿದೆ

ಬೈಂದೂರು ಪೋಲಿಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave a Reply