ಕುಂದಾಪುರ: ಗ್ರಾಮ ಪಂಚಾಯಿತಿ ಚುನಾವಣೆ : ಬಿರುಸಿನ ಮತ ಎಣಿಕೆ

ಕುಂದಾಪುರ: ಗ್ರಾಮ ಪಂಚಾಯಿತಿನ ಮುಂದಿನ ಐದು ವರ್ಷಗಳ ಅವಧಿಗೆ ರಾಜ್ಯದ ವಿವಿಧೆಡೆಗಳಲ್ಲಿ ಮೇ29 ಹಾಗೂ ಮೇ 31ರಂದು ನಡೆದಿದ್ದ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಹೊರಬೀಳುವ ಸಿದ್ಧತೆಗಾಗಿ ಮತೆಣಿಕೆ ಕಾರ್ಯ ಭರದಿಂದ ನಡೆಯಿತು. ಕುಂದಾಪುರ ತಾಲೂಕು ಪಂಚಾಯಿತಿ ವ್ಯಾಪ್ತಿಯ ಕುಂದಾಪುರ ವಿಧಾನ ಸಭಾ ಕ್ಷೇತ್ರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬರುವ 62 ಗ್ರಾಮ ಪಂಚಾಯಿತಿಗಳ 875 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 1692 ಅಭ್ಯರ್ಥಿಗಳ ಭವಿಷ್ಯ ಬರೆಯುವ ದಿನವಾದ ಶುಕ್ರವಾರ ಕುಂದಾಪುರದ ಭಂಡಾರ್‍ಕಾಋಸ್ ರಸ್ತೆಯಲ್ಲಿ ಅಭ್ಯರ್ಥಿಗಳ ಹಾಗೂ ವಿವಿಧ ರಾಜಕೀಯ ಪಕ್ಷಗಳ ಅಭಿಮಾನಿಗಳು ಕಿಕ್ಕಿರಿದು ನೆರೆದಿದ್ದರು.

ಮತೆಣಿಕೆ ಕಾರ್ಯಕ್ಕೆ ಕುಂದಾಪುರದ ಭಂಡಾರ್‍ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ 19 ಕೊಠಡಿಗಳಲ್ಲಿ 125 ಟೇಬಲ್‍ನಲ್ಲಿ ಗ್ರಾಮ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಏಕಕಾಲದಲ್ಲಿ ಮತ ಎಣಿಕೆ ಕಾರ್ಯ ಆರಂಭಗೊಂಡಿತು. ಕೆರ್ಗಾಲ್ ಗ್ರಾಮ ಪಂಚಾಯಿತಿಯ ನಾಲ್ಕನೇ ಕ್ಷೇತ್ರದ ಅಭ್ಯರ್ಥಿ ಸುರೇಶ್ 108 ಮತಗಳನ್ನು ಪಡೆದು ಪ್ರಥಮ ವಿಜಯೀ ಅಭ್ಯರ್ಥಿಯಾದರು.

ಬೆಳಿಗ್ಗೆ 11.40ಕ್ಕೆ ಪ್ರಥಮ ಸುತ್ತಿನ ಮತ ಎಣಿಕೆ ಕಾರ್ಯ ಮುಗಿದಿದ್ದು, 127 ಕ್ಷೇತ್ರಗಳಲ್ಲಿ 55 ಗ್ರಾಮ ಪಂಚಾಯಿತಿ ಮತ ಎಣಿಕೆ ಫಲಿತಾಂಶ ಹೊರಬಿದ್ದಿತ್ತು. ಶಾಂತಿಯುತ, ನ್ಯಾಯ ಸಮ್ಮತ, ನಿಷ್ಪಕ್ಷಪಾತವಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮತ ಎಣಿಕೆ ಕಾರ್ಯ ನಡೆಯಿತು. ಅಂಚೆ ಮತಗಳನ್ನು ಗ್ರಾಮ ಪಂಚಾಯಿತಿ ನೋಡಲ್ ಅಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳ ಸಮಕ್ಷಮ ಕ್ಷೇತ್ರವಾರು ಬೇರ್ಪಡಿಸಲಾಯಿತು.

KND_JUNE.5_1(1) KND_JUNE.5_1(2) KND_JUNE.5_1(4) KND_JUNE.5_1(5)

 

ಸುರಕ್ಷತೆ ದೃಷ್ಟಿಯಿಂದ ಆರಕ್ಷಕ ಇಲಾಖೆಯಿಂದ 150 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಮತ ಎಣಿಕೆಯ ಕೇಂದ್ರದ ಒಳಗೆ ಅಭ್ಯರ್ಥಿ ಅಥವಾ ಅಭ್ಯರ್ಥಿಯ ಪರವಾಗಿ ಓರ್ವ ಏಜೆಂಟರಿಗೆ ಅವಕಾಶ ಕಲ್ಪಿಸಲಾಯಿತು. ಮತ ಎಣಿಕೆ ಕೇಂದ್ರದ ಒಳಗೆ ಖಡ್ಡಾಯವಾಗಿ ಮೊಬೈಲ್ ಬಳಕೆ ನಿಷೇಧಿಸಲಾಗಿತ್ತು.

ವಾಹನಗಳನ್ನು ಗಾಂಧೀ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಮತ ಎಣಿಕೆ ಕೇಂದ್ರದ ಸುತ್ತಲಿನ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷಣ ಜ್ಯಾರಿಗೊಳಿಸಲಾಗಿತ್ತು. ಕುಂದಾಪುರ ಡಿವೈಎಸ್ಪಿ ಎಂ. ಮಂಜುನಾಥ ಶೆಟ್ಟಿ, ವೃತ್ತ ನಿರೀಕ್ಷಕ ಪಿ.ಎಂ.ದಿವಾಕರ ಬಂದೋಬಸ್ತ್ ನೇತೃತ್ವ ವಹಿಸಿದ್ದರು. ಕುಂದಾಪುರ ತಾಲೂಕಿನ ಎಲ್ಲಾ ಠಾಣೆಗಳ ಉಪನಿರೀಕ್ಷಕರು ಬಂದೋಬಸ್ತ್‍ನಲ್ಲಿ ಭಾಗವಹಿಸಿದ್ದರು.

ಅವಿರೋಧ ಆಯ್ಕೆ : ಶಿರೂರು ಗ್ರಾ.ಪಂ.ನ 44 ಸ್ಥಾನಗಳಲ್ಲಿ 2 ಸ್ಥಾನಗಳಿಗೆ, ಪಡುವರಿ ಗ್ರಾ.ಪಂ.ನ 18 ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ, ಉಪ್ಪುಂದ ಗ್ರಾ.ಪಂ.ನ 28 ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ, ಕೆರ್ಗಾಲ್ ಗ್ರಾ.ಪಂ.ನ 12 ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ, ಕಾಲೊನ್ಪಿಡು ಗ್ರಾ.ಪಂ.ನ 13 ಸ್ಥಾನಗಳಲ್ಲಿ 4 ಸ್ಥಾನಗಳಿಗೆ, ಕಂಬದಕೋಣೆ ಗ್ರಾ.ಪಂ.ನ 14 ಸ್ಥಾನಗಳಲ್ಲಿ ಎರಡು ಸ್ಥಾನಗಳಿಗೆ, ನಾವುಂದ ಗ್ರಾ.ಪಂ.ನ 15 ಸ್ಥಾನಗಳಲ್ಲಿ 2 ಸ್ಥಾನಕ್ಕೆ, ಮರವಂತೆ ಗ್ರಾ.ಪಂ.ನ 1, ನಾಡ ಗ್ರಾ.ಪಂ.ನ 5, ಆಲೂರು ಗ್ರಾ.ಪಂ.ನ 11 ಸ್ಥಾನಗಳಿಗೆ, ಹಕ್ಲಾಡಿ ಗ್ರಾ.ಪಂ.ನ 8 ಸ್ಥಾನಗಳಿಗೆ, ತ್ರಾಸಿ ಗ್ರಾ.ಪಂ.ನ 3 ಸ್ಥಾನಗಳಿಗೆ, ಹೆಮ್ಮಾಡಿ ಗ್ರಾ.ಪಂ.ನ 4 ಸ್ಥಾನಗಳಿಗೆ, ಹಟ್ಟಿಯಂಗಡಿ ಗ್ರಾ.ಪಂ.ನ 4 ಸ್ಥಾನಗಳಿಗೆ, ಕಾವ್ರಾಡಿ ಗ್ರಾ.ಪಂ.ನ 2 ಸ್ಥಾನಗಳಿಗೆ, ಆನಗಳ್ಳಿ ಗ್ರಾ.ಪಂ.ನ 1, ಕೋಣಿ ಗ್ರಾ.ಪಂ.ನ ಒಂದು ಸ್ಥಾನಕ್ಕೆ, ತೆಕ್ಕಟ್ಟೆ ಗ್ರಾ.ಪಂ. ಒಂದು ಸ್ಥಾನಕ್ಕೆ, ಬೇಳೂರು ಗ್ರಾ.ಪಂ.ನ 2 ಸ್ಥಾನಗಳಿಗೆ, ಕೆದೂರು ಗ್ರಾ.ಪಂ.ನ 10 ಸ್ಥಾನಗಳಿಗೆ, ಕಾಳಾವರ ಗ್ರಾ.ಪಂ.ನ 7 ಸ್ಥಾನಗಳಿಗೆ, ಹೊಂಬಾಡಿ-ಮಂಡಾಡಿ ಗ್ರಾ.ಪಂ.ನ ಒಂದು ಸ್ಥಾನಕ್ಕೆ, ಮೊಳಹಳ್ಳಿ ಗ್ರಾ.ಪಂ.ನ ಎಲ್ಲ 11 ಸ್ಥಾನಗಳಿಗೆ, ಹಾರ್ದಳ್ಳಿ-ಮಂಡಳ್ಳಿಯ ಎಲ್ಲಾ 13 ಸ್ಥಾನಗಳಿಗೆ, ಹಾಲಾಡಿ ಗ್ರಾ.ಪಂ.ನ 7 ಸ್ಥಾನಗಳಿಗೆ, ಬೆಳ್ವೆ ಗ್ರಾ.ಪಂ.ನ 17 ಸ್ಥಾನಗಳಿಗೆ, ಅಮಾಸೆಬೈಲು ಗ್ರಾ.ಪಂ.ನ 2 ಸ್ಥಾನಗಳಿಗೆ, ಇಡೂರು ಕುಂಜ್ಞಾಡಿ ಗ್ರಾ.ಪಂ.ನ 1 ಸ್ಥಾನಕ್ಕೆ, ಕಟ್‍ಬೆಲ್ತೂರಿನ 1 ಸ್ಥಾನಕ್ಕೆ, ಗುಲ್ವಾಡಿ ಗ್ರಾ.ಪಂ.ನ ಒಂದು ಸ್ಥಾನಕ್ಕೆ, ಗೋಪಾಡಿಯ 1 ಸ್ಥಾನಕ್ಕೆ ಹಾಗೂ ಕೊರ್ಗಿಯ ಎಲ್ಲ 9 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಕೊರ್ಗಿ ಗ್ರಾ.ಪಂ.ನ 9, ಮೊಳಹಳ್ಳಿ ಗ್ರಾ.ಪಂ.ನ 11, ಕೆದೂರಿನ ಗ್ರಾ.ಪಂ.ನ 10, ಹಾರ್ದಳ್ಳ್ಪಿ ಮಂಡಳ್ಳಿ ಗ್ರಾ.ಪಂ.ನ 13 ಸ್ಥಾನಗಳಿಗೆ ಪೂರ್ಣ ಪ್ರಮಾಣದ ಅವಿರೋಧ ಆಯ್ಕೆ ನಡೆದಿದೆ.
ಎರಡು ಕಡೆ ಸಮಬಲ: ಕೋಟೇಶ್ವರ ಮತ್ತು ಕರ್ಕುಂಜೆ ಗ್ರಾಮ ಪಂಚಾಯಿತಿ ತಲಾ ಒಂದು ಕ್ಷೇತ್ರಗಳಲ್ಲಿ ಸಮಬಲ ಮತ ಗಳಿಸಿದ ಹಿನ್ನೆಲೆಯಲ್ಲಿ ಮರು ಮತದಾನಕ್ಕೆ ಆದೇಶ ನೀಡಲಾಗಿದೆ. ಕಟ್‍ಬೆಲ್ತೂರು ಕ್ಷೇತ್ರದ ಮತ ಎಣಿಕೆ ಸಂದರ್ಭ ಚಂದ್ರ ನಾಯಕ್ ಎಂಬುವರಿಗೆ ಒಂದು ಮತ ಹೆಚ್ಚು ಬಂದ ಸಂದರ್ಭ ಹಾಗೂ ಕೋಟೇಶ್ವರದ ಪ್ರಥಮ ಸುತ್ತಿನ ಮತ ಎಣಿಕೆ ಸಂದರ್ಭ ಮತ ಎಣಿಕೆ ಗೊಂದಲದಿಂದಾಗಿ ಮರು ಎಣಿಕೆ ಕಾರ್ಯ ನಡೆಸಲಾಯಿತು.

Leave a Reply