ಕುಂದಾಪುರ: ಚಿನ್ನದ ಆಸೆಗೆ ಕುಟುಂಬದವರ ಮೇಲೆ ಹಲ್ಲೆ; ಆರೋಪಿಯ ಬಂಧನ

ಕುಂದಾಪುರ: ಚಿನ್ನದ ಆಸೆಗಾಗಿ ಕುಟುಂಬದ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಚಿನ್ನಾಭರಣ ದೋಚಿ ಬಳಿಕ ಪೋಲಿಸರ ಅತಿಥಿಯಾದ ಘಟನೆ ಕುಂದಾಪುರದ ಕೊರ್ಗಿ ಎಂಬಲ್ಲಿ ಸೋಮವಾರ ನಡೆದಿದೆ.
ಕುಂದಾಪುರ ಕೊರ್ಗಿ ಹೊಸಮಟ ಮೆಕ್ಕೆ ಮನೆ ನಿವಾಸಿ ರಂಜಿತ್ ಶೆಟ್ಟಿ ಸೋಮವಾರ ರಾತ್ರಿ ತನ್ನ ದೊಡ್ಡಮ್ಮನ ಮನೆಗೆ ಬಂದು ಅನಾರೋಗ್ಯದ ಕಾರಣ ಹೇಳಿ ತನ್ನ ಚಿನ್ನಾಭರಣವನ್ನು ನೀಡುವಂತೆ ಮನೆಯವರಲ್ಲಿ ಗದ್ದಲ ಎಬ್ಬಿಸಿದ್ದು, ಹಣ ನೀಡಲು ನಿರಾಕರಿಸಿದ ವೇಳೆ, ಕತ್ತಿಯಿಂದ ದೊಡ್ಡಮ್ಮ ಚಂದ್ರಮೆತಿ ಶೆಟ್ಟಿ, ಅಜ್ಜಿ ಕೊರಗಮ್ಮ ಶೆಟ್ಟಿ ಹಾಗೂ ದೊಡ್ಡಪ್ಪ ಕೃಷ್ಣಯ್ಯ ಶೆಟ್ಟಿಯವರ ಮೇಲೆ ಹಲ್ಲೆ ನಡೆಸಿ ಮನೆಯ ಕಪಾಟಿನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿಕೊಂಡು ನಾಪತ್ತಯಾಗಿದ್ದನು. ಗಂಭೀರವಾಗಿ ಗಾಯಗೊಂಡವರು ಕೋಟೇಶ್ವರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಯ ಮಾಹಿತಿ ಪಡೆದು ಮನೆಗೆ ಆಗಮಿಸಿದ ಕುಂದಾಪುರ ಪೋಲಿಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply