ಕುಂದಾಪುರ: ಜೀವನದಲ್ಲಿ ಶಿಸ್ತು ಮುಖ್ಯ: ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ಕುಮಾರ್‌ ಸೊರಕೆ

ಕುಂದಾಪುರ: ಸಮಾಜದಲ್ಲಿ ಸತ್ಪ್ರಜೆ ಗಳಾಗಿ ಬಾಳಲು ವಿದ್ಯಾರ್ಥಿ ಜೀವನ ಅತ್ಯಂತ ಪೂರಕವಾಗಿರುತ್ತದೆ. ಶಾಲಾ ದಿನಗಳಲ್ಲಿ ಉತ್ತಮ ನಡತೆ ಹಾಗೂ ಶಿಸ್ತಿನ ಜೀವನವನ್ನು ಅಳವಡಿಸಿಕೊಂಡಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಭವಿಷ್ಯದ ಜೀವನದಲ್ಲಿ ಜೀವನದ ಗುರಿಯನ್ನು ಸಾಧಿಸುತ್ತಾನೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್‌ಕುಮಾರ್‌ ಸೊರಕೆ ಹೇಳಿದರು.

15kun1

ನಗರದ ಸಂತ ಮೇರಿಸ್‌ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುಂದಾಪುರ ವಲಯ ರೋಮನ್‌ ಕೆಥೋಲಿಕ್‌ ಇಗರ್ಜಿಯ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಹಾಗೂ ಕುಂದಾಪುರ ವಲಯದ ಪ್ರಧಾನ ಧರ್ಮ ಗುರುಗಳಾದ ಅನಿಲ್‌ ಡಿಸೋಜಾ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಯಶಸ್ಸನ್ನುಗಳಿಸಲು ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿ ಕೆಯಲ್ಲಿಯೂ ಸಕ್ರಿಯರಾಗಿರಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಉಡುಪಿ ಧರ್ಮ ಪ್ರಾಂತ್ಯದ ಕೆಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ಹಾಗೂ ಧರ್ಮಗುರು ಲಾರೆನ್ಸ್ ಡಿಸೋಜ ಅವರು ಕಾಲೇಜಿನ ಬುಲೇಟಿನ್ ‘ಬ್ಲೊಸಮ್’ ಉದ್ಘಾಟಿಸಿದರು.

ಕುಂದಾಪುರ ಚರ್ಚ್‌ನ  ಆಡಳಿತ ಮಂಡಳಿಯ ಉಪಾಧ್ಯಕ್ಷ ಜೋನ್ಸನ್ ಆಲ್ಮೇಡಾ, ಕಾಲೇಜಿನ ಪ್ರಾಂಶುಪಾಲ ಹಾಗೂ ಧರ್ಮಗುರು ಪ್ರವೀಣ್ ಅಮ್ರತ್ ಮಾರ್ಟಿಸ್‌, ಉಪನ್ಯಾಸಕ ನಾಗರಾಜ್ ಶೆಟ್ಟಿ ಹಾಗೂ ಚರ್ಚ್‌ನ ಪಾಲನಾ ಮಂಡಳಿಯ ಕಾರ್ಯದರ್ಶಿ ಫೆಲ್ಸಿಯಾನ ಡಿಸೋಜ ಇದ್ದರು. ಕಾಲೇಜಿನ ಉಪ ಪ್ರಾಂಶುಪಾಲ ರಾದ ಮಂಜುಳಾ ನಾಯರ್ ಸ್ವಾಗತಿಸಿದರು. ಅಧ್ಯಾಪಕಿ ಪ್ರೀತಿ ಕ್ರಾಸ್ತಾ ವಂದಿಸಿದರು. ಅಧ್ಯಾಪಕಿ ಡೀಶೆಲ್ ನಿರೂಪಿಸಿದರು.

Leave a Reply