ಕುಂದಾಪುರ: ಡಿಡಿಪಿಐ ದಿವಾಕರ ಶೆಟ್ಟಿ ಮೇಲೆ ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿ

ಕುಂದಾಪುರ: ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ದಿವಾಕರ ಶೆಟ್ಟಿ ಎಂಬವರ ಮೇಲೆ ಹಲ್ಲೆಗೆ ಯತ್ನಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.
ದೇವಲ್ಕುಂದ ವಿಜಯ ಮಕ್ಕಳ ಕೂಟ ಕಿರಿಯ ಪ್ರಾಥಮಿಕ ಶಾಲೆಯವರು ಶಿಕ್ಷಣ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಪ್ರಾಥಮಿಕ ಶಾಲೆ ನಡೆಸಲು ಅನು ಮತಿ ಪಡೆದಿದ್ದು, 2015-16ನೆ ಸಾಲಿನಲ್ಲಿ 6ನೆ ತರಗತಿಯನ್ನು ಆರಂಭಿಸಿ ರುವ ಬಗ್ಗೆ ಇಲಾಖೆಗೆ ದೂರು ಬಂದ ಮೇರೆಗೆ ದಿವಾಕರ ಶೆಟ್ಟಿ ಪರಿಶೀಲಿಸಲು ಜು.14ರಂದು ಶಾಲೆಗೆ ಭೇಟಿ ನೀಡಿದರು.
ದಾಖಲೆಗಳನ್ನು ಪರಿಶೀಲಿಸಿದ ಅವರು, ಅಗತ್ಯ ದಾಖಲೆಗಳು ಲಭ್ಯವಿಲ್ಲದ ಕಾರಣ ಮಣಿಪಾಲದ ರಜತಾದ್ರಿ ಕಚೇರಿಗೆ ದಾಖಲೆಗಳನ್ನು ತೆಗೆದುಕೊಂಡು ಬರುವಂತೆ ಶಾಲೆಯವರಿಗೆ ಸೂಚಿಸಿದರು. ಶಾಲಾ ಕಚೇರಿ ಕೋಣೆಯಲ್ಲಿದ್ದ ಇವರಿಗೆ ರಾಘವೇಂದ್ರ ನೆಂಪು, ಮಲ್ಲಾರಿ ಗಣೇಶ, ಅನಿಲ ಬಾಳಿಕೆರೆ, ಐಸ್ ಕ್ಯಾಂಡಿ ಚಂದ್ರ, ಉದಯ ಜಾಡಿ, ನಾಗ ಹೆಮ್ಮಾಡಿ, ರಿಕ್ಷಾ ರಾಮ ಬಾಳಿಕೆರೆ ಎಂಬವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆಗೆ ಪ್ರಯತ್ನಿಸಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದಾಗಿ ದೂರಲಾಗಿದೆ. ಈ ಕೃತ್ಯಕ್ಕೆ ಶಾಲೆಯ ಮುಖ್ಯ ಶಿಕ್ಷಕಿ ಪ್ರೇರಣೆ ನೀಡಿರುವುದಾಗಿ ದಿವಾಕರ ಶೆಟ್ಟಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Leave a Reply