ಕುಂದಾಪುರ: ತಾಯಿಯ ಎದುರೇ ನೀರಿನಲ್ಲಿ ಕೊಚ್ಚಿ ಹೋದ ಮಗು

ಕುಂದಾಪುರ: ಮರದ ಸೇತುವೆ ಮೇಲೆ ಮಗುವನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಳೆ ನೀರಿನ ರಭಸಕ್ಕೆ ತಾಯಿಯ ಕಣ್ಣೆದುರಿನಲ್ಲಿಯೇ ಮಗು ನೀರಿನಲ್ಲಿ ಕೊಚ್ಚಿಹೋಗಿದೆ.

ಶೇಖರ ದೇವಾಡಿಗ ಮತ್ತು ಜಲಜ ದೇವಾಡಿಗ ದಂಪತಿಯ ಎರಡನೇ ಪುತ್ರಿ ವಿಸ್ಮಯ ಕೊಚ್ಚಿಹೋದ ಬಾಲಕಿ.

ಚಿತ್ತೂರು ಗ್ರಾಪಂ ವ್ಯಾಪ್ತಿಯ ಮಾರಣಕಟ್ಟೆ ಶ್ರೀಲಕ್ಷ್ಮೀವೆಂಕಟರಮಣ ದೇಗುಲ ಸಮೀಪದ ಸನ್ಯಾಸಿಬೆಟ್ಟುವಿಗೆ ಸಂಪರ್ಕ ಕಲ್ಪಿಸುವ ಮರದ ಕಾಲು ಸಂಕದ ಮೇಲೆ ಈ ಘಟನೆ ನಡೆದಿದೆ. ಗುರುವಾರ ತಡರಾತ್ರಿ ಸುರಿದ ಭಾರಿ ಮಳೆಗೆ ಚಕ್ರಾ ನದಿ ತುಂಬಿ ನೀರು ಹರಿಯುತ್ತಿತ್ತು. ಮಾರಣಕಟ್ಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 3ನೇ ತರಗತಿ ಕಲಿಯುತ್ತಿದ್ದ ವಿಸ್ಮಯಳನ್ನು ತಾಯಿ ಶುಕ್ರವಾರ ಬೆಳಗ್ಗೆ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಕುಂದಾಪುರ ಅಗ್ನಿಶಾಮಕ ದಳದವರು, ಗ್ರಾಮಸ್ಥರು, ಮುಳುಗುತಜ್ಞರು ಮಗುವಿಗಾಗಿ ಶೋಧ ನಡೆಸಿದ್ದಾರೆ.

Leave a Reply