ಕುಂದಾಪುರ: ಪುರಸಭೆ ಅಧ್ಯಕ್ಷರಾಗಿ ವಸಂತಿ ಸಾರಂಗ, ಉಪಾಧ್ಯಕ್ಷರಾಗಿ ರಾಜೇಶ್ ಕಾವೇರಿ

ಕುಂದಾಪುರ: ಕುಂದಾಪುರ ಪುರ ಸಭೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ, ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಬೆಂಬಲಿತ ವಸಂತಿ ಮೋಹನ್‌ ಸಾರಂಗ ಮತ್ತು ಉಪಾಧ್ಯಕ್ಷ ರಾಗಿ ಬಿಜೆಪಿಯ ರಾಜೇಶ್‌ ಕಾವೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಂಗಳವಾರ ಕುಂದಾಪುರ ಪುರ ಸಭೆ ಡಾ.ವಿ.ಎಸ್‌.ಆಚಾರ್ಯ ಸಭಾಂಗಣ ದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಬಿಜೆಪಿ ಸದಸ್ಯರು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ವಸಂತಿ ಮೋಹನ್‌ ಸಾರಂಗ ಅವರನ್ನು ಬೆಂಬಲಿಸಿದರು. ಇದರಿಂದ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ರವಿಕಲಾ ಗಣೇಶ್‌ ಶೇರಿಗಾರ್‌ ನಾಮಪತ್ರ ಹಿಂದಕ್ಕೆ ಪಡೆದಿದ್ದು, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯಲು ಕಾರಣ ವಾಯಿತು. ಈ ಬಾರಿಯ ಮೀಸಲಾತಿ ಕಾಂಗ್ರೆಸ್‌ ಪಕ್ಷಕ್ಕೆ ಅನುಕೂಲಕರ (ಬಿಸಿಎ ಮಹಿಳೆ) ವಾಗಿ ಬಂದಿದ್ದರೂ ಕೊನೆಕ್ಷಣದಲ್ಲಿ ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ರಂಗ ಪ್ರವೇಶಿ ಸಿದ್ದು, ಕಾಂಗ್ರೆಸ್‌ನ ಬಂಡಾಯ ಅಭ್ಯ ರ್ಥಿಗೆ ಬಿಜೆಪಿ ಬೆಂಬಲ ನೀಡುವ ಮೂಲಕ ಖಾರ್ವಿ ಜನಾಂಗದ ಮಹಿಳೆ ಮೊದಲ ಬಾರಿ ಕುಂದಾಪುರ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಲು ಸಾಧ್ಯವಾಯಿತು.

ಕುಂದಾಪುರ ಪುರಸಭೆ ಅಧ್ಯಕ್ಷ ಸ್ಥಾನ ಬಿಸಿಎ (ಮ) ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗಕ್ಕೆ ಮೀಸಲಾಗಿತ್ತು. ಬಹುಮತವಿದ್ದರೂ ಬಿಜೆಪಿಯಲ್ಲಿ ಆ ಮೀಸಲಾತಿಯ ಅಭ್ಯರ್ಥಿ ಇರಲಿಲ್ಲ. ಹೀಗಾಗಿ ಕಾಂಗ್ರೆಸ್‌ ಪಕ್ಷದಿಂದ ರವಿಕಲಾ ಗಣೇಶ್‌ ಸೇರಿಗಾರ್‌ರನ್ನು ಅಧ್ಯಕ್ಷ ಅಭ್ಯರ್ಥಿ ಯನ್ನಾಗಿ ಆಯ್ಕೆ ಮಾಡಿತ್ತು. ಆದರೆ ಇತ್ತೀಚೆಗೆ ಕಾಂಗ್ರೆಸ್‌ನಿಂದ ಉಚ್ಛಾಟಿತ ರಾದ ಜಯಪ್ರಕಾಶ್‌ ಹೆಗ್ಡೆಯವರಿಂದ ಕುಂದಾಪುರ ಪುರಸಭೆ ಅಧ್ಯಕ್ಷ ಸ್ಥಾನದ ಚಿತ್ರಣ ಬದಲಾಯಿತು. ಕುಂದಾಪುರ ತಹಶೀಲ್ದಾರ್‌ ಗಾಯತ್ರಿ ಎನ್‌.ನಾಯಕ್‌ ಚುನಾವಣೆ ಪ್ರಕ್ರಿಯೆ ನಡೆಸಿ ಕೊಟ್ಟರು.

Leave a Reply