ಕುಂದಾಪುರ: ಲಾರಿಯಡಿಗೆ ಸಿಲುಕಿ ಒಂದೂವರೆ ವರ್ಷದ ಬಾಲಕ ಸಾವು

ಕುಂದಾಪುರ: ಆಟವಾಡುತ್ತಿದ್ದ ಬಾಲಕನೊಬ್ಬ ಟಿಪ್ಪರ್ ಅಡಿಗೆ ಸಿಲುಕಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಕುಂದಾಪುರದ ಪಾರಿಜಾತ ವೃತ್ತದ ಬಳಿಯಲ್ಲಿರುವ ಬೃಂದಾವನ ಲಾಡ್ಜ್‍ನಲ್ಲಿ ಶುಕ್ರವಾರ ಸಂಜೆ ನಡೆದಿದೆ. ಕೊಪ್ಪಳ ಜಿಲ್ಲೆಯ ಮಾರುತಿ ಹಾಗೂ ಲಕ್ಷ್ಮೀ ಎಂಬುವರ ನಾಲ್ಕನೇ ಪುತ್ರ ದ್ಯಾವಣ್ಣ(1.5) ಎಂಬಾತನೇ ದಾರುಣವಾಗಿ ಸಾವನ್ನಪ್ಪಿದ ಬಾಲಕ.

KND_JULY.3_3(1) KND_JULY.3_3(2)

ಪಾರಿಜಾತ ವೃತ್ತದ ಬಳಿಯಲ್ಲಿರುವ ಬೃಂದಾವನ ಲಾಡ್ಜ್‍ನ ಪುನರ್‍ನಿರ್ಮಾಣ ಕಾಮಗಾರಿಗೆ ಸಂಬಂಧಿಸಿ ಕಟ್ಟಡ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಇದೇ ಕಟ್ಟಡ ತೆರವು ಕಾಮಗಾರಿಗೆ ಸಂಬಂಧಿಸಿ ಕೊಪ್ಪಳ ಜಿಲ್ಲೆಯ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಮಾರುತಿ ಹಾಗೂ ಲಕ್ಷ್ಮೀ ದಂಪತಿಗಳೂ ಕೆಲಸ ನಿರ್ವಹಿಸುತ್ತಿದ್ದ ವೇಳೆ ಅವರ ನಾಲ್ಕನೇ ಪುತರ ದ್ಯಾವಣ್ಣ ಆಟವಾಡುತ್ತಾ ಹೊರಗಡೆ ಹೋಗಿದ್ದಾನೆ. ಇದೇ ಸಂದರ್ಭ ಕಟ್ಟಡದ ಸಾಮಗ್ರಿಗಳನ್ನು ತುಂಬಿಸಲು ರಿವರ್ಸ್ ಬರುತ್ತಿದ್ದ ಟಿಪ್ಪರ್ ಚಾಲಕನಿಗೆ ಪುಟ್ಟ ಬಾಲಕ ಇರುವುದು ಗಮನಕ್ಕೆ ಬಂದಿರಲಿಲ್ಲ. ಪರಿಣಾಮವಾಗಿ ಬಾಲಕನ ತಲೆಯ ಮೇಲೆ ಟಿಪ್ಪರ್‍ನ ಹಿಂದಿನ ಚಕ್ರ ಹರಿದ ಪರಿಣಾಮ ತಲೆಯೊಡೆದು ಸ್ಥಳದಲ್ಲಿತೇ ಸಾವನ್ನಪ್ಪಿದ್ದಾನೆ.

ತಕ್ಷಣ ಮಗುವಿನ ತಾಯಿ ಓಡಿ ಬಂದಿದ್ದು, ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಕೇ ಮಗು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Please enter your comment!
Please enter your name here