ಕುವೈಟ್ ಕನ್ನಡ ಕೂಟ – ಮರಳ ಮಲ್ಲಿಗೆ ಆಚರಣೆ– 2016

ಕುವೈಟ್ ಕನ್ನಡ ಕೂಟಮರಳ ಮಲ್ಲಿಗೆಆಚರಣೆ– 2016

ಕುವೈತ್: ಕುವೈಟ್ ಕನ್ನಡ ಕೂಟದ ಮರಳ ಮಲ್ಲಿಗೆ ದಿನಾಚರಣೆ –’ಪ್ರತಿಭಾಯಣ’ ಕಾರ್ಯಕ್ರಮವು ಇತ್ತೀಚೆಗೆ ಖೈತಾನ್ಕಾರ್ಮೆಲ್ಶಾಲಾ ಸಭಾಂಗಣದಲ್ಲಿ ಜರುಗಿತು.

ಕನ್ನಡದ ಪ್ರಸಿದ್ಧ ಹಾಸ್ಯ ಕಲಾವಿದ, ರಂಗಭೂಮಿ, ಕಿರಿತೆರೆ, ಬೆಳ್ಳಿತೆರೆ ನಟ ಮತ್ತು ನಿರ್ದೇಶಕರೂ ಆಗಿರುವ  ನಾಗರಾಜ ಕೋಟೆ ಅವರ ಹಾಸ್ಯವನ್ನು ಒಳಗೊಂಡ ಕಾರ್ಯಕ್ರಮ ತುಂಬಾ ಸೊಗಸಾಗಿ ಮೂಡಿ ಬಂದಿತು.

kkk-marala-mallige-30062016 (9) kkk-marala-mallige-30062016 (7) kkk-marala-mallige-30062016 (6) kkk-marala-mallige-30062016 (5) kkk-marala-mallige-30062016 (2) kkk-marala-mallige-30062016 (3) kkk-marala-mallige-30062016 (4) kkk-marala-mallige-30062016 (1)

ಕೋಟೆಯವರು ತಮ್ಮ ಪ್ರತಿಯೊಂದು ಪದ, ಪ್ರತಿ ಮಾತುಗಳಲ್ಲಿ ಹಾಸ್ಯದ ಹೊನಲನ್ನೆಹರಿಸಿ, ಸುಮಾರು ಒಂದೂವರೆ ಗಂಟೆಗಳ ಕಾಲ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.

ಕೂಟದ ಕಾರ್ಯಕಾರಿ ಸಮಿತಿಯವರುಗಳಾದ ಅಧ್ಯಕ್ಷ ಸಿ.ಎ.ಪ್ರಶಾಂತ್ ಶೆಟ್ಟಿ, ಉಪಾಧ್ಯಕ್ಷ   ಕಾರ್ಯದರ್ಶಿ   ಹಾಗೂ ಖಜಾಂಚಿ    ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಕೂಟದ ಅಧ್ಯಕ್ಷರು ತಮ್ಮಸ್ವಾಗತ ಭಾಷಣದಲ್ಲಿ, ಕನ್ನಡ ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಯುವ ಪೀಳಿಗೆಗೆ, ಸದಸ್ಯರಿಗೆ ತಿಳಿಸಿ ಹೇಳಿದರು. ಕಾರ್ಯಕಾರಿ ಸಮಿತಿಯವರು ಕೂಟದ ಪರವಾಗಿ ನಾಗರಾಜ ಕೋಟೆಯವರನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ, ಪುರಸ್ಕರಿಸಿ ಸನ್ಮಾನಿಸಿದರು. ಮರಳ ಮಲ್ಲಿಗೆಸಮಿತಿ ಸಂಚಾಲಕಿ  ಸಂಧ್ಯಾ ಮತ್ತು ಸಮಿತಿಯವರು ’ಮರಳ ಮಲ್ಲಿಗೆ’ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.

ನಾಲ್ಕು ತಂಡಗಳಾಗಿ ಕೂಟದ ಸದಸ್ಯರು ನಟಿಸಿದ ಹಾಸ್ಯ ವಿಡಂಬನೆಗಳು ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ಕೂಟದ ಕನ್ನಡ ಕಲಿಕೆ ಶಾಲೆ ’ಚಿಗುರುಬಳ್ಳಿ’ಯ ಚಿಣ್ಣರು ಹಾಡುಗಳನ್ನು ಹಾಡಿ ಮನರಂಜಿಸಿದರು. ಕೂಟದ ಮಕ್ಕಳಿಗೆ ಹಲವಾರು ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತ ಮಕ್ಕಳಿಗೆ ಹಾಗೂ ತಂಡಗಳಿಗೆ ಬಹುಮಾನಗಳನ್ನು ನೀಡಿ ಪುರಸ್ಕರಿಸಲಾಯಿತು. ಕಾರ್ಯದರ್ಶಿ ಶ್ರೀಪ್ರಭುಆಚಾರ್ರವರಿಂದ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಸಮಾಪನಗೊಂಡಿತು.

Leave a Reply

Please enter your comment!
Please enter your name here