ಕೆಎಸ್‍ಆರ್‍ಟಿಸಿ ಮಂಗಳೂರು-ಪೂನಾ ಬಸ್ ಸಂಚಾರ

ಮಂಗಳೂರು: ಕೆಎಸ್‍ಆರ್‍ಟಿಸಿ ವತಿಯಿಂದ ಮಂಗಳೂರಿನಿಂದ ಉಡುಪಿ, ಕುಂದಾಪುರ, ಭಟ್ಕಳ, ಕುಮಟಾ,ಅಂಕೋಲಾ, ಹುಬ್ಬಳ್ಳಿ, ಬೆಳಗಾವಿ, ಕೊಲ್ಲಾಪುರ, ಸತಾರ, ಮಾರ್ಗವಾಗಿ ಪೂನಾಕ್ಕೆ ಹಾಗೂ ಪೂನಾದಿಂದ ಇದೇ ಮಾರ್ಗವಾಗಿ ಮಂಗಳೂರಿಗೆ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನೂತನ ವೊಲ್ವೋ ಮಲ್ಟಿಆಕ್ಸಿಲ್ ಸಾರಿಗೆಯನ್ನು ಪ್ರಾರಂಭಿಸಲಾಗಿದೆ.
ಈ ಬಸ್ಸು ಮಂಗಳೂರು ಬಸ್ಸು ನಿಲ್ದಾಣದಿಂದ ಸಂಜೆ 5 ಗಂಟೆಗೆ ಹೊರಟು ಉಡುಪಿ 6, ಕುಂದಾಪುರ 6.40, ಮಾರ್ಗವಾಗಿ ಪೂನಾಕ್ಕೆ ಬೆಳಿಗ್ಗೆ 7. 45 ಗಂಟೆಗೆ ತಲುಪುವುದು ಹಾಗೂ ಮರು ಪ್ರಯಾಣದಲ್ಲಿ ಪೂನಾದಿಂದ ಸಂಜೆ 7.15 ಗಂಟೆಗೆ ಹೊರಟು ಕೊಲ್ಲಾಪುರ 10.35, ಕುಂದಾಪುರ ಬೆಳಿಗ್ಗೆ 7, ಉಡುಪಿ 7.45 ಮಂಗಳೂರಿಗೆ 8.30ಕ್ಕೆ ತಲುಪುವುದು. ಈ ಸಾರಿಗೆಗೆ ಅವತಾರ್ ವ್ಯವಸ್ಥೆ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು ಸಾರ್ವಜನಿಕರು ಸದರಿ ಸಾರಿಗೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೆಎಸ್‍ಆರ್‍ಟಿಸಿ ಪ್ರಕಟಣೆ ತಿಳಿಸಿದೆ.

Leave a Reply

Please enter your comment!
Please enter your name here