ಕೆ ಐ ಸಿ ಶಾರ್ಜಾ ಸಮಿತಿ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ಹಾಜಿ ಮನಿಲ ಹಾಗೂ ಕಾರ್ಯದರ್ಶಿಯಾಗಿ ಸಾಜಿದ್ ಆರ್ಲಪದವು ಪುನರಾಯ್ಕೆ

ಶಾರ್ಜಾ: ಕರ್ನಾಟಕ ಇಸ್ಲಾಮಿಕ್ ಸೆಂಟರ್ (ಕೆ ಐ ಸಿ ) ಕೇಂದ್ರ ಸಮಿತಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಕೆ ಐ ಸಿ ಶಾರ್ಜಾ ಸಮಿತಿಯ ವಾರ್ಷಿಕ ಮಹಾ ಸಭೆಯು ಶಾರ್ಜ್ಹಾ ಸಮಿತಿ ಅಧ್ಯಕ್ಷರಾದ ರಝಾಕ್ ಹಾಜಿ ಮಣಿಲ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕೆ ಐ ಸಿ ಕೇಂದ್ರ ಸಮಿತಿ ಗೌರವಾಧ್ಯಕ್ಷರಾದ ಸಯ್ಯದ್ ಅಸ್ಕರಲಿ ತಂಙಲ್ ಕೊಲ್ಪೆ ರವರು ಪ್ರಾರ್ಥಿಸಿ ಕೆ ಐ ಸಿ ನಡೆಸಿಕೊಂಡು ಬರುತ್ತಿರುವ ವಿಧ್ಯಾ ಸಂಸ್ಥೆಯ ಕಾರ್ಯಚಟುವಟಿಕೆ , ಅರಬ್ ರಾಷ್ಟ್ರಗಳಲ್ಲಿ ಕಳೆದ ಹಲವಾರು ವರ್ಷಗಳಿಂದ ದೀನೀ ಕಾರ್ಯಚಟುವಟಿಕೆ ಗಳೊಂದಿಗೆ ಪ್ರಚಲಿತದಲ್ಲಿರುವ ಕೆ ಐ ಸಿ ಸಂಸ್ಥೆಯ ಕಾರ್ಯವೈಖರಿಯನ್ನು ಪ್ರಶಂಸಿಸಿ ಸಂಸ್ಥೆಯ ಪ್ರಗತಿಗೆ ಶುಭ ಹಾರೈಸಿದರು.

kic-sharjah4-20160321

 

ನಂತರ ಅಬ್ದುಲ್ ಖಾದರ್ ಬೈತಡ್ಕ ರವರು ಸ್ವಾಗತಿಸಿ ಮಾತನಾಡಿದ ಅವರು ಇಂದು ಓರ್ವ ವ್ಯಕ್ತಿಯು ಸಮಾಜದಲ್ಲಿ ಗುರುತಿಸಲ್ಪಡುವುದು ಆತನ ವ್ಯಕ್ತಿತ್ವದಿಂದಾಗಿದ್ದು , ಆ ವ್ಯಕ್ತಿತ್ವವು ಗುರುತಿಸಲ್ಪಡುವುದು ಶಿಕ್ಷಣದಿಂದಾಗಿದೆ. ಇಸ್ಲಾಂ ಧರ್ಮವು ಶಿಕ್ಷಣಕ್ಕೆ ಉನ್ನತ ಸ್ಥಾನವನ್ನು ನೀಡಿದ್ದು , ಯಾವುದೇ ವ್ಯಕ್ತಿಯು ತನ್ನ ಜೇವನದಲ್ಲಿ ಬೆಲೆಕಟ್ಟಲಾಗದ ಸಂಪತ್ತು ಒಂದಿದ್ದಲ್ಲಿ ಅದು ಶಿಕ್ಷಣವಾಗಿದ್ದು ಆ ಸಂಪತ್ತನ್ನು ಯಾವುದೇ ವ್ಯಕ್ತಿಯಿನದ ಕಳೆದುಕೊಳ್ಳಲು ಅಸಾಧ್ಯವಾಗಿದೆ. ಇಂದು ಸಮುದಾಯವು ಶೈಕ್ಷಣಿಕ ರಂಗದಲ್ಲಿ ತೀರ ಕ್ಷೀನಿಸುತ್ತಿದ್ದು , ನಮ್ಮ ಸಂಸ್ಥೆಯು ಆರ್ಥಿಕವಾಗಿ ಬಡ ವಿಧ್ಯಾರ್ಥಿಗಳನ್ನು ಗುರುತಿಸಿಕೊಂಡು ಉಚಿತ ವಿಧ್ಯಾಭ್ಯಾಸವನ್ನು ನೀಡುತ್ತಿದ್ದು , ನಮ್ಮಲ್ಲಿ ಕಲಿತ ಪ್ರತಿಭಾನ್ವಿತ ವಿಧ್ಯಾರ್ಥಿಗಲಿ ಕೌಸರಿಗಲೆಂಬ ಬಿರುದಿನೊಂದಿಗೆ ಸಮಾಜದಲ್ಲಿ ಗುರುತಿಸಿಕೊಂಡಿದ್ದು , ಇಂತಹ ಸಂಸ್ಥೆಯನ್ನು ಇಂದು ಸಮಾಜದಲ್ಲಿ ಬೆಳೆಸ ಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು ತಾವೆಲ್ಲರೂ ಸಮಿತಿಯೊಂದಿಗೆ ಕೈಜೋಡಿಸಿಕೊಂಡು ಸಹಕರಿಸುವಂತೆ ಕೇಳಿಕೊಂಡರು.

ಶಾರ್ಜಃ ಸಮಿತಿ ಪ್ರಧಾನ ಕಾರ್ಯದರ್ಶಿ ಸಾಜಿದ್ ಆರ್ಲಪದವುರವರು ಶಾರ್ಜಾ ಸಮಿತಿಯ ವಾರ್ಷಿಕ ಆಯುವ್ಯದೊಂದಿಗೆ ವರದಿಯನ್ನು ಮಂಡಿಸಿ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಕಾರ್ಯಕ್ರಮದಲ್ಲಿ ವಿವರಿಸಿ ಅನುಮೋದನೆಗಾಗಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು.ನಂತರ ಸಮಿತಿ ಅಧ್ಯಕ್ಷರು ವರದಿ ಹಾಗೂ ವಾರ್ಷಿಕ ಲೆಕ್ಕಪತ್ರಗಳ ಮೇಲೆ ಚರ್ಚೆಗೆ ಅವಕಾಶವನ್ನು ಕೋರಿ ಸಮಿತಿ ಪಧಾಧಿಕಾರಿಗಳ ಸರ್ವಾನುಮತದೊಂದಿಗೆ ಅಂಗೀಕರಿಸಲಾಯಿತು.

kic-sharjah5-20160321ಶಾರ್ಜ್ಹಾ ಸಮಿತಿ ಅದ್ಯಕ್ಷರಾದ ಅಬ್ದುಲ್ ರಝಾಕ್ ಮನಿಲ ರವರು ಮಾತನಾಡಿ ಹಲವಾರು ಪ್ರಭುದ್ದ ಯುವ ಪ್ರಥಿಬೆಗಳನ್ನು ಈ ಸಮುದಾಯಕ್ಕೆ ಪರಿಚಯಿಸಿದ ನಮ್ಮ ಸಂಸ್ಥೆಯು ಇಂದು ರಾಜ್ಯದ ನಾನಾ ಭಾಗಗಳಲ್ಲಿ ತನ್ನನ್ನು ಪರಿಚಯಿಸಿಕೊಂಡಿದ್ದು , ಪ್ರತಿಷ್ಠಿತ ವಿಧ್ಯಾ ಸಂಸ್ಥೆಗಳ ಸಾಲಿನಲ್ಲಿ ತನ್ನನ್ನು ಗುರುತಿಸಿಕೊಂಡಿದ್ದು , ಮುಂದೆ ಸಂಸ್ಥೆಯಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳ ಕಾಮಗಾರಿ ಗಳು ತಲೆಎತ್ತಲಿದ್ದು ತಾವೆಲ್ಲರೂ ಸಕ್ರಿಯರಾಗಿ ಸಮಿತಿಯೊಂದಿಗೆ ಸಹಕರಿಸುವಂತೆ ಕೇಳಿಕೊಂಡು ಪ್ರಸಕ್ತ ಸಾಲಿನ ಸಮಿತಿಯನ್ನು ಬರಕಾಸ್ತು ಗೊಳಿಸಿದರು.

kic-sharjah-20160321

ನಂತರ ನೂತನ ಸಮಿತಿ ರಚನಾ ಕಾರ್ಯನಿರ್ವಹಿಸಿ ಮಾತನಾಡಿದ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ನೂರ್ ಮುಹಮ್ಮದ್ ನೀರ್ಕಜೆ ಯವರು ಮಾತನಾಡುತ್ತಾ ಕರ್ನಾಟಕ ಇಸ್ಲಾಮಿಕ್ ಸೆಂಟರ್ ಎಂಬ ಈ ವಿಧ್ಯಾ ಸಂಸ್ಥೆಯು ಇಂದು ರಾಜ್ಯಾದ ನಾನಾ ಭಾಗಗಗಲ್ಲಿ ತನ್ನ ಶಿಸ್ತು ಬದ್ದ ಶಿಕ್ಷಣದಿಂದಾಗಿ ಗುರುತಿಸಲ್ಪದುತ್ತಿದ್ದು, ವಿಥಿಭಾನ್ವಿತ ವಿಧ್ಯಾರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಂಡಿರುತ್ತಾರೆ. ಅಲ್ಲದೆ ಸಂಸ್ಥೆಯಲ್ಲಿ ಇದೀಗ ಖುರ್ ಆನ್ ಕಂಠಪಾಠ ತರಗತಿಗಳು ಪ್ರಾರಂಭಗೊಂಡಿದ್ದು ಇವೆಲ್ಲವೂ ತಮ್ಮಂತಹ ಸಕ್ರಿಯ ಕಾರ್ಯಕರ್ತರ ಪರಿಶ್ರಮದ ಫಳವಾಗಿದ್ದು ಮುಂದೆಯೂ ಸಮಿತಿಯಲ್ಲಿ ಸಮುದಾಯದ ಬಡ ವಿಧ್ಯಾರ್ಥಿಗಳಿಗಾಗಿ ಹಲವಾರು ಉದ್ದೇಶಗಳನ್ನು ಇಟ್ಟುಕೊಂಡಿದ್ದು ತಾವೆಲ್ಲರೂ ಸಹಕರಿಸುವಂತೆ ಕೇಳಿಕೊಂಡು ನೂತನ ಸಮಿತಿಗೆ ಚಾಲನೆ ನೀಡಿದರು.

kic-sharjah3-20160321

ಪಧಾಧಿಕಾರಿಗಳಾಗಿ;
ಗೌರವಾಧ್ಯಕ್ಷರಾಗಿ : ಸಯ್ಯದ್ ಅಸ್ಕರಲಿ ತಂಙಲ್ ಕೊಲ್ಪೆ
ಅಧ್ಯಕ್ಷರಾಗಿ : ಅಬ್ದುಲ್ ರಝಾಕ್ ಹಾಜಿ ಮಣಿಲ
ಉಪಾಧ್ಯಕ್ಷರಾಗಿ : ಅಬ್ದುಲ್ ರಝಾಕ್ ಸೊಂಪಾಡಿ , ಇಸಾಕ್ ಬೇರಿಕೆ, ಮೂಸ ಪೆರುವಾಯಿ
ಕಾರ್ಯಾಧ್ಯಕ್ಷರು ; ಅಬ್ದುಲ್ ಖಾದರ್ ಬೈತಡ್ಕ
ಪ್ರಧಾನ ಕಾರ್ಯದರ್ಶಿ : ಸಾಜಿದ್ ಆರ್ಲಪದವು
ಕಾರ್ಯದರ್ಶಿ : ಆಝೀಝ್ಃ ಬಲ್ನಾಡ್ , ಅಶ್ರಫ್ ಕೆಮ್ಮಿಂಜೆ
ಕೋಶಾಧಿಕಾರಿ : ಯೂಸುಫ್ ಹಾಜಿ ಬೆರಿಕೆ
ಲೆಕ್ಕ ಪರಿಶೋಧಕರು : ಅಶ್ರಫ್ ಕುಟ್ಟಿತಡ್ಕ
ಸಂಘಟನಾ ಕಾರ್ಯದರ್ಶಿ : ಅಶ್ರಫ್ ಕುರಿಯ , ಫಾರೂಕ್ ಆರ್ಲಪದವು
ಸಂಚಾಲಕರು : ಇಬ್ರಾಹಿಮ್ ಪೆರುವಾಯಿ , ರಹೀಂ ಕುರಿಯ, ಹಂಝ ಸವಣೂರು, ರಝಾಕ್ ಸವಣೂರು , ಮುಹಮ್ಮದ್ ಮುಕ್ವೆ , ಶರೀಫ್ ಮುಸ್ಲಿಯಾರ್ ಕೊಡಗು, ಸಿರಾಜುದ್ದೀನ್ ಮಂಜೇಶ್ವರ
ಧಾರ್ಮಿಕ ಸಲಹೆಗಾರರು : ನೌಶಾದ್ ಫೈಝಿ ಶಂಸುದ್ದೀನ್ ಹನೀಫಿ

ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದ ಶಂಸುದ್ದೀನ್ ಹನೀಫಿ ರವರು ಮಾತನಾಡಿ ಇಂದು ಜಗತ್ತಿನಲ್ಲಿ ಅತೀ ಹೆಚ್ಚು ಚರ್ಚಿತವಾಗಿತ್ತುರುವ ಧರ್ಮಗಳಲ್ಲಿ ಒಂದಾಗಿದೆ ಇಸ್ಲಾಂ ಧರ್ಮ. ಅದೇ ರೀತಿ ಕ್ಷಿಪ್ರ ಬೆಳವಣಿಗೆಗಳ ಮೂಲಕ ಅತೀ ವೇಗವಾಗಿ ಬೆಳೆಯುತ್ತಿರುವ ದರ್ಮವೂ ಕೂಡ ಇಸ್ಲಾಂ ಆಗಿದೆ. ಇಸ್ಲಾಂ ಧರ್ಮವನ್ನು ಇಂದು ಸಮಾಜವು ಹಲವಾರು ವಕ್ರ ದೃಷ್ಟಿಗಳಿಂದ ನೋಡುತ್ತಿದ್ದು ಮಾಧ್ಯಗಲೆಲ್ಲವೂ ಕೂಡ ಅವುಗಳೊಂದಿಗೆ ಶಾಮಿಲಾಗಿರುವಂತೆ ಗೋಚರಿಸುತ್ತಿದ್ದು , ಇವೆಲ್ಲದಕ್ಕೂ ಉತ್ತರವಾಗಿ ನಮ್ಮ ಸಮುದಾಯವನ್ನು ಸುಕ್ಷಿತರನ್ನಾಗಿಸಬೇಕಿದೆ. ಅಂತಹ ಕಾರ್ಯಗಳನ್ನು ಕೆ ಐ ಸಿ ಯು ಇಂದು ನಡೆಸಿಕೊಂಡು ಬರುತ್ತಿದ್ದು , ದೀನೀ ಸ್ನೇಹಿಗಳಾದ ತಾವೆಲ್ಲರೂ ಪಧಾಧಿಕಾರಿಗಳೊಂದಿಗೆ ನೆತಾರರೊಂದಿಗೆ ಕೈಜೋಡಿಸಿ ಕೊಂಡು ವಿಧ್ಯ ಸಂಸ್ಥೆಯ ಪ್ರಗತಿಗೆ ಸಹಕರಿಸುವಂತೆ ಕೇಳಿಕೊಂಡರು.

kic-sharjah2-20160321

ಇದೆ ಸಂಧರ್ಭದಲ್ಲಿ ಸಭಾ ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದ ಯೂಸುಫ್ ಹಾಜಿ ಬೆರಿಕೆ , ಅಬ್ದುಲ್ ರಝಾಕ್ ಸೊಂಪಾಡಿ ಅಶ್ರಫ್ ಪರ್ಲಡ್ಕ, ಅಶ್ರಫ್ ಕೆಮ್ಮಿಂಜೆ ಮೊದಲಾದವರು ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

Vivek Anand, Team Mangalorean

Leave a Reply

Please enter your comment!
Please enter your name here