ಕೆ.ಸಿ.ರೋಡ್ ಖಾಝಿಯಾಗಿ ಇಬ್ರಾಹಿ0 ಮುಸ್ಲಿಯಾರ್ ಬೇಕಲ

ಕೆ.ಸಿ.ರೋಡ್ ಖಾಝಿಯಾಗಿ ಇಬ್ರಾಹಿ0 ಮುಸ್ಲಿಯಾರ್ ಬೇಕಲ

ಕೆ.ಸಿ.ರೋಡ್, ಕೆ.ಸಿ.ನಗರ, ಪ0ಜಳ, ಹಿದಾಯತ್ ನೂತನ ನಗರದ ಖಾಝಿಯಾಗಿ ಇಬ್ರಾಹಿ0 ಮುಸ್ಲಿಯಾರ್ ಬೇಕಲರವರು ಕೆ.ಸಿ.ರೋಡ್ ಅಲ್ ಮುಬಾರಕ್ ಜುಮಾ ಮಸೀದಿ ವಠಾರದಲ್ಲಿ ಖಾಝಿ ಸ್ವೀಕಾರ ಮಾಡಿದರು.

kc-road-quazi

ಬಳಿಕ ಮಾತನಾಡಿದ ನೂತನ ಖಾಝಿ ಇಬ್ರಾಹಿಂ ಮುಸ್ಲಿಯಾರ್‍ರವರು ಇಸ್ಲಾಮಿನ ವ್ಯವಸ್ಥೆಯಲ್ಲಿ ಖಾಝಿಯ ಸ್ಥಾನ ಮಹತ್ವದಾಗಿದ್ದು,ಧರ್ಮದ ಆಚಾರವಿಚಾರಗಳು,ಧಾರ್ಮಿಕ ನಿಬಂಧನೆಗಳನ್ನು ಸರಿಯಾದ ರೀತಿಯಲ್ಲಿ ಕಾರ್ಯಗತಗೊಳಿಸುವಲ್ಲಿ ಖಾಝಿಯವರ ಪಾತ್ರ ಪ್ರಮುಖವಾದದ್ದು,ಮೊಹಲ್ಲಾದ ಆಡಳಿತ ಕಮಿಟಿಯು ಮುಂದಿನ ದಿನಗಳಲ್ಲಿ ಯಾವುದೇ ಕ್ಲಿಷ್ಟಕರ ಸಮಸ್ಯೆಗಳು ಬಂದಾಗ ಖಾಝಿಯವರ ಮಾರ್ಗದರ್ಶನ ಪಡೆಯುವುದು ಅಗತ್ಯ ಎಂದರು.

kc-road-quazi-2 kc-road-quazi-91

ತಾಜು ಶರೀಯ್ಯ ಆಲಿಕುಂಞ ಉಸ್ತಾದರು ದುಆ ನೆರವೇರಿಸಿದರು,ಕೆ.ಪಿ.ಹುಸೈನ್ ಸಅದಿ ಕೆ.ಸಿ.ರೋಡ್ ಮುಖ್ಯ ಬಾಷಣ ಮಾಡಿದರು, ಅಸಯ್ಯದ್ ಸಿ.ಟಿ.ಎಮ್.ಸಲೀಮ್ ತಂಙಳ್ ಕೆ.ಸಿ.ರೋಡ್, ಅಲ್ ಮುಬಾರಕ್ ಜುಮಾ ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ,ಇಬ್ರಾಹಿಮ್ ಫೈಝಿ, ಇಬ್ರಾಹಿಮ್ ಮದನಿ, ಪಿ.ಎಮ್.ಮೊಹಮ್ಮದ್ ಮದನಿ, ಅಬ್ದುಲ್ ಅಝೀಝ್ ಸಖಾಫಿ, ಮೊಹಮ್ಮದ್ ಹನೀಫ್ ಸಖಾಫಿ, ಅಬ್ದುಲ್ ಅಝೀಝ್ ಸಖಾಫಿ, ಪಿ.ಐ.ಕುಂಞ ಹಾಜಿ,ಅಬ್ಬಾಸ್ ಹಾಜಿ ಪೆರಿಬೈಲ್, ಅಬ್ಬಾಸ್ ತಲಪಾಡಿ, ಎನ್.ಎಸ್.ಉಮರ್ ಮಾಸ್ಟರ್, ಅಬ್ದುಲ್ಲಾ ಹಾಜಿ ಕೊಂಡಾಣ, ಅಬ್ದುಲ್ ಖಾದರ್ ಹಾಜಿ, ಟಿ.ಕೆ.ಸಲೀಂ, ಹಸನಬ್ಬ ಹಾಜಿ ಕೆ.ಸಿ.ನಗರ, ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಮೊೈದಿನ್ ಬಾವ ಕೊಮರಂಗಳ ಉಪಸ್ಥಿತರಿದ್ದರು.ಕೆ.ಸಿ.ರೋಡ್ ಮುದರ್ರಿಸ್ ಮುನೀರ್ ಸಖಾಫಿ ಸ್ವಾಗತಿಸಿದರು.

Leave a Reply