ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಬಿಜೆಪಿ ಕಚೇರಿಗೆ ಭೇಟಿ

ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಬಿಜೆಪಿ ಕಚೇರಿಗೆ ಭೇಟಿ

ಮಂಗಳೂರು : ಕೇಂದ್ರ ಸಚಿವರಾದ ಸನ್ಮಾನ್ಯ ಶ್ರೀ ರಮೇಶ್ ಜಿಗಜಿಣಗಿರವರು (ಕುಡಿಯುವ ನೀರು ಹಾಗೂ ನೈರ್ಮಲ್ಯ, ರಾಜ್ಯ ಖಾತೆ) ದಿನಾಂಕ 24.08.2016ರಂದು ಮಂಗಳೂರಿನ ಭಾರತೀಯ ಜನತಾ ಪಾರ್ಟಿ ಕಚೇರಿಗೆ ಭೇಟಿ ನೀಡಿದರು.

ramesh-jigajinagi-mangalore-bjp-office

ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿ.ಪಂ.ಸದಸ್ಯ ತುಂಗಪ್ಪ ಬಂಗೇರಾರವರು ರೂ.60.00 ಕೋಟಿಯ ದ.ಕ.ಜಿಲ್ಲೆಗೆ ಕುಡಿಯುವ ನೀರಿನ ಬಗ್ಗೆ ಮನವಿ ಸಲ್ಲಿಸಿದರು. ಸಚಿವರು ಕೂಡಲೇ ಸ್ಪಂದಿಸಿ ತುರ್ತು ಕ್ರಮದ ಭರವಸೆ ನೀಡಿದರು.

ಜಿಲ್ಲಾ ಪ್ರಮುಖರಾದ ಕೆ.ಮೋನಪ್ಪ ಭಂಡಾರಿ, ರವಿಶಂಕರ್ ಮಿಜಾರ್, ಸಂಜಯ್ ಪ್ರಭು, ಕ್ಯಾ.ಬ್ರಿಜೇಶ್ ಚೌಟ, ವೇದವ್ಯಾಸ ಕಾಮತ್, ರವಿಚಂದ್ರ, ಸದಾನಂದ ನಾವುರ, ಗುರುಚರಣ್, ಸೂರಜ್ ಮುಂತಾದವರು ಉಪಸ್ಥಿತರಿದ್ದರು.

Leave a Reply