ಕೊಂಕಣಿ ಭವನಕ್ಕೆ ನಿವೇಶನ : ಮೇಯರ್ ಬಳಿಗೆ ನಿಯೋಗ

ಕೊಂಕಣಿ ಭವನಕ್ಕೆ ನಿವೇಶನ : ಮೇಯರ್ ಬಳಿಗೆ ನಿಯೋಗ 

ಮ0ಗಳೂರು: ಕೊಂಕಣಿ ಭವನವು ಕೊಂಕಣಿಗರ ಬಹುವರ್ಷಗಳ ಕನಸು. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೊಂಕಣಿ ಅಕಾಡೆಮಿಗೆ ಕೊಂಕಣಿ ಭವನ ನಿರ್ಮಿಸಲು ನಿವೇಶನ ಮಂಜೂರು ಮಾಡುವಂತೆ ಕಳೆದ ಎರಡು ವರ್ಷದಿಂದ ಮನವಿ ಮಾಡಿ, ಅಗತ್ಯ ಪತ್ರ ವ್ಯವಹಾರ ನಡೆಸಿದ್ದರೂ, ಈ ಬಗ್ಗೆ ಮಹಾನಗರ ಪಾಲಿಕೆಯಿಂದ ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ. ಇದರಿಂದ ಕೊಂಕಣಿಗರಿಗೆ ತಮ್ಮ ಭಾಷೆ ಸಂಸ್ಕೃತಿಯ ಕೆಲಸಗಳಿಗೆ ಭವನ ಹೊಂದುವ ಹಕ್ಕಿಗೆ ತಡೆಯುಂಟಾಗುತ್ತದೆ. ಕಳೆದ ಬಾರಿ ಮಂಗಳೂರಿಗೆ ಆಗಮಿಸಿದ್ದ ಮುಖ್ಯಮಂತ್ರಿಯವರು ಕೊಂಕಣಿ ಭವನ ನಿರ್ಮಾಣಕ್ಕೆ ಅಗತ್ಯ ನಿವೇಶನವನ್ನು ಗುರುತಿಸಿ, ಭವನದ ರೂಪುರೇಷೆ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದಲ್ಲಿ  ಅನುದಾನ ಬಿಡುಗಡೆ ಮಾಡುತ್ತೇವೆ ಎಂಬ ಭರವಸೆ ಕೊಟ್ಟಿದ್ದರು. ಆದಷ್ಟು ಬೇಗನೆ ಕೊಂಕಣಿ ಭವನಕ್ಕೆ ನಿವೇಶನ ಮಂಜೂರುಗೊಳಿಸುವಂತೆ ಅಕಾಡೆಮಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ ಮನಪಾ ಮೇಯರ್ ಹರಿನಾಥ್ ಇವರಲ್ಲಿ ಮನವಿ ಮಾಡಿದರು.
image003ksa-roy-castelino-memorandum-20160628-003 image004ksa-roy-castelino-memorandum-20160628-004 image002ksa-roy-castelino-memorandum-20160628-002 image001ksa-roy-castelino-memorandum-20160628-001 image005ksa-roy-castelino-memorandum-20160628-005 image006ksa-roy-castelino-memorandum-20160628-006 image007ksa-roy-castelino-memorandum-20160628-007 image008ksa-roy-castelino-memorandum-20160628-008 image009ksa-roy-castelino-memorandum-20160628-009 image011ksa-roy-castelino-memorandum-20160628-011
ಮನವಿ ಸ್ವೀಕರಿಸಿ ಮಾತನಾಡಿದ ಮೇಯರ್ ಕೊಂಕಣಿ ಅಕಾಡೆಮಿಯ ಮನವಿ ಸಮಿತಿಯ ಪರಿಶೀಲನೆಯಲ್ಲಿದೆ. ಕೊಂಕಣಿ ಭವನಕ್ಕೆ ನಿವೇಶನ ನೀಡಲು ನನ್ನ ಅಭ್ಯಂತರವಿಲ್ಲ. ಇದರ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಅಕಾಡೆಮಿ ವತಿಯಿಂದ ತೆರಳಿದ ನಿಯೋಗದಲ್ಲಿ ಅಕಾಡೆಮಿ ಸದಸ್ಯರಾದ ಶೇಖರ ಗೌಡ, ಲಾರೆನ್ಸ್ ಡಿಸೋಜ, ರಿಜಿಸ್ಟ್ರಾರ್ ಡಾ ಬಿ. ದೇವದಾಸ ಪೈ ಕೊಂಕಣಿ ಮುಂದಾಳು ಬಸ್ತಿ ವಾಮನ್ ಶೆಣೈ, ಫಾ. ಆಲ್ವಿನ್ ಸೆರಾವೊ, ಸ್ಟ್ಯಾನಿ ಆಲ್ವಾರಿಸ್, ಸಂತೋಶ್ ಶೆಣೈ, ವಿದ್ಯಾ ಕಾಮತ್, ಗೋವಿಂದ ರಾಯ ಪ್ರಭು, ಮಹೇಶ್ ನಾಯಕ್, ಎಲಿಯಾಸ್ ಫೆರ್ನಾಂಡಿಸ್, ಬನ್ನು ಫೆರ್ನಾಂಡಿಸ್, ಜೇಮ್ಸ್ ಡಿಸೋಜ, ವಿಕ್ಟರ್ ಮತಾಯಸ್, ಕ್ರಿಸ್ಟೋಫರ್ ಡಿಸೋಜ, ಚಂದ್ರಿಕಾ ಮಲ್ಯ, ನವೀನ್ ಲೋಬೊ, ಫೆಲಿಕ್ಸ್ ಡಿಸೋಜ, ಆವಿಲ್ ಡಿಕ್ರೂಜ್, ಡ್ಯಾಫ್ನಿ ವೇಗಸ್, ಸುನೀಲ್, ಸಂದೀಪ್ ಯುವ ಮುಖಂಡ ಜ್ಯಾಕ್ಸನ್ ಸಲ್ಡಾನ್ಹಾ ಹಾಗೂ ಇತರ ಸಮಾನ ಮನಸ್ಕ ಸಂಘಟನೆಗಳ ಸದಸ್ಯರು ಇದ್ದರು.

Leave a Reply

Please enter your comment!
Please enter your name here